63ನೇ ರಾಜ್ಯ ಶಾಲಾ ಕಲೋತ್ಸವದ ಯಕ್ಷಗಾನ ಸ್ಪರ್ಧೆಯಲ್ಲಿ ಕಾಟುಕುಕ್ಕೆ ಶ್ರೀಸುಬ್ರಹ್ಮಣ್ಯೇಶ್ವರ ಶಾಲೆ ಪ್ರಥಮ ಸ್ಥಾನ

by Narayan Chambaltimar

63ನೇ ರಾಜ್ಯ ಶಾಲಾ ಕಲೋತ್ಸವದ ಯಕ್ಷಗಾನ ಸ್ಪರ್ಧೆಯಲ್ಲಿ ಕಾಟುಕುಕ್ಕೆ ಶ್ರೀಸುಬ್ರಹ್ಮಣ್ಯೇಶ್ವರ ಶಾಲೆ ಪ್ರಥಮ ಸ್ಥಾನ

ಪೆರ್ಲ : ತಿರುವನಂತಪುರಂನ ಭಾರತ್ ಭವನದಲ್ಲಿ ನಡೆದ 63ನೇ ರಾಜ್ಯ ಶಾಲಾ ಕಲೋತ್ಸವದ ಯಕ್ಷಗಾನ ಸ್ಪರ್ಧೆಯಲ್ಲಿ ಕಾಟುಕುಕ್ಕೆ ಶ್ರೀಸುಬ್ರಹ್ಮಣ್ಯೇಶ್ವರ ಫ್ರೌಢ ಶಾಲೆ ಪ್ರಥಮ ಸ್ಥಾನ ಪಡೆದು ಜನ ಮೆಚ್ಚುಗೆಗೆ ಪಾತ್ರವಾಗಿದೆ. ಪಾತ್ರವರ್ಗದಲ್ಲಿ ಅರ್ಜುನ – ಹರ್ಷಲ್ ಮಾಯಿಲೆಂಗಿ, ವೃಷಕೇತು – ಆತ್ಮೀಕ್ ಅರಿಕ್ಕಾಡಿ, ಬಭ್ರುವಾಹನ – ಸ್ಕಂದ ಕಾಟುಕುಕ್ಕೆ, ಮಂತ್ರಿ – ಧನುಷ್ ನಲ್ಕ, ಚಿತ್ರಾಂಗದೆ – ಧನುಷ್ ಮಾಯಿಲೆಂಗಿ, ಅನುಸಾಲ್ವ – ಹೃತೇಶ್ ಬಾಳೆಮೂಲೆ, ಕೃಷ್ಣ – ಲಿಖಿತ್ ಬಾಳೆಮೂಲೆ ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು. ಹಿಮ್ಮೇಳದಲ್ಲಿ ಭಾಗವತರಾಗಿ ನಾರಾಯಣ ಶರ್ಮ ನೀರ್ಚಾಲು, ಚೆಂಡೆಯಲ್ಲಿ ವರ್ಷಿತ್ ಕಿಜ್ಜೆಕ್ಕಾರು, ಮದ್ದಳೆಯಲ್ಲಿ ಅಂಬೆಮೂಲೆ ಶಿವಶಂಕರ ಭಟ್ ಸಹಕರಿಸಿದರು. ಯಕ್ಷಗಾನ ಗುರುಗಳಾದ ಬಾಲಕೃಷ್ಣ ಏಳ್ಕಾನ ಅವರು ನಿರ್ದೇಶನಗೈದಿದ್ದರು. ಶಾಲಾ ಮುಖ್ಯೋಪಾಧ್ಯಾಯ ಹರಿಪ್ರಸಾದ್ ಶೆಟ್ಟಿ, ಶಿಕ್ಷಕರಾದ ಚಂದ್ರಹಾಸ ಎ,ಶಿವರಾಮ‌ ಅರೆಕ್ಕಾಡಿ ನೇತೃತ್ವವಹಿಸಿದ್ದರು.ಇದೇ ಶಾಲೆ ಕಳೆದ ವರ್ಷವೂ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಪ್ರಥಮ‌ಬಹುಮಾನಕ್ಕೆ ಪಾತ್ರವಾಗಿತ್ತು. ವಿಜೇತ ತಂಡದ ಸಾಧನೆಯನ್ನು ಶಾಲಾ ಪ್ರಬಂಧಕ ಮಿತ್ತೂರು ಪುರುಷೋತ್ತಮ ಭಟ್, ಸಂಜೀವ ರೈ,ಲೋಕನಾಥ ಶೆಟ್ಟಿ ಮಾಯಿಲೆಂಗಿ ಮತ್ತು ಸಮಿತಿ ಸದಸ್ಯರು,ಶಿಕ್ಷಕರು, ರಕ್ಷಕ ಸಂಘ ಅಭಿನಂದಿಸಿದ್ದಾರೆ.

You may also like

Are you sure want to unlock this post?
Unlock left : 0
Are you sure want to cancel subscription?
-
00:00
00:00
Update Required Flash plugin
-
00:00
00:00