- ಸಿ.ಎಂ. ಸಿದ್ಧರಾಮಯ್ಯ ಸಮ್ಮುಖ ಆರು ಮಂದಿ ನಕ್ಸಲರ ಶರಣಾಗತಿ
- ನಕ್ಸಲ್ ಮುಕ್ತ ರಾಜ್ಯದತ್ತ ಕರ್ನಾಟಕ : ಹೋರಾಟ ತೊರೆದು, ಕೆಂಬಾವುಟ ಎಸೆದು ನಗುವರಳಿಸಿದ ನಕ್ಸಲೀಯರು
ಕರ್ನಾಟಕದ ನಕ್ಸಲೀಯ ಹೋರಾಟದ ಇತಿಹಾಸದಲ್ಲೇ ಜನವರಿ 8ರ ಬುಧವಾರ ಐತಿಹಾಸಿಕ ದಿನವಾಗಿ ದಾಖಲಾಯಿತು. ಆಯುಧ ಕೆಳಗಿಟ್ಟು, ನಕ್ಸಲ್ ಹೋರಾಟ ತೊರೆದು ಸಹಜ ಬದುಕಿಗೆ ಮರಳುವಂತೆ ಕರೆನೀಡಿದ ಸರಕಾರದ ಶರಣಾಗತಿ ಪ್ಯಾಕೇಜಿನಂತೆ 6ಮಂದಿ ನಕ್ಸಲರು ಮುಖ್ಯಮಂತ್ರಿ ಗಳ ಗೃಹ ‘ಕೃಷ್ಣ’
ದಲ್ಲಿ ಸಿಎಂ, ಡಿಸಿಎಂ ಸಮ್ಮುಖ ಒಪ್ಪಂದ ವಿಧೇಯ ಸರಕಾರಕ್ಕೆ ಶರಣಾದರು.
ನಕ್ಸಲ್ ನಾಯಕರಾದ ಮುಂಡಗಾರು ಲತಾ, ವನಜಾಕ್ಷಿ, ದ.ಕ ಜಿಲ್ಲೆಯ ಕುತ್ಲೂರು ಸುಂದರಿ, ಮಾರಪ್ಪ ಅರೋಳಿ, ವನಜಾಕ್ಷಿ ಬಾಳೆಹೊಳೆ ಮತ್ತು ಕೇರಳದ ವಯನಾಡಿನ ಎನ್.ಜಿಶಾ ಹಾಗೂ ತಮಿಳುನಾಡಿನ ಕೆ.ವಸಂತ್ ಅವರು ತಮ್ಮ ಹಸಿರು ಬಟ್ಟೆ ಕಳಚಿಟ್ಟು, ಕೆಂಬಾವುಟ ಕೆಳಗಿಟ್ಟು ಶರಣಾದರು. ಈ ವೇಳೆ ಗೃಹ ಸಚಿವ ಡಾ.ಜೆ.ಪರಮೇಶ್ವರ, ಹಿರಿಯ ಪೋಲೀಸಧಿಕಾರಿಗಳು ಉಫಸ್ಥಿತರಿದ್ದರು.
ಸರಕಾರದ ಒಡಂಬಡಿಕೆಯಂತೆ ಶರಣಾದ 6ಮಂದಿಯನ್ನು ಪೌಲೀಸರು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರು ಪಡಿಸಿ ಮುಂದಿನ ಕೇಸು ಮುಕ್ತ ಬದುಕಿನ ಪ್ರಕ್ರಿಯೆ ಕೈಗೊಳ್ಳುವರು.
ಶರಣಾದ ಮುಂಡಗಾರು ಲತಾ ಕರ್ನಾಟಕದ ನಕ್ಸಲ್ ನಾಯಕಿಯಾಗಿದ್ದು ಇವರ ವಿರುದ್ದ 85ಕೇಸುಗಳಿವೆ.
ನಕ್ಸಲರು ಶರಣಾದರೆ ಸರಕಾರದ ವತಿಯಿಂದ ಪುನರ್ವಸತಿ ಪ್ಯಾಕೇಜಿನಂತೆ ಬದುಕು ಕಟ್ಟಿಕೊಡುವ ಭರವಸೆ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಚಿಕ್ಕಮಗಳೂರಿನ ಶಾಂತಿಗಾಗಿ ನಾಗರಿಕ ವೇದಿಕೆಯು ನಕ್ಸಲರೊಡನೆ ಸಂಪರ್ಕ ಬೆಳೆಸಿ ಅವರನ್ನು ಸರಕಾರದ ಜತೆ ಸಂಧಾನ ನಡೆಸುವಂತೆ ಮಾಡುವಲ್ಲಿ ಯಶಸ್ಸು ಕಂಡಿದೆ. ಈ ಮೂಲಕ ಕರ್ನಾಟಕ ರಾಜ್ಯ 2025ನೇ ವರ್ಷದ ಆರಂಭದಲ್ಲೇ ನಕ್ಸಲ್ ಮುಕ್ತ ರಾಜ್ಯದತ್ತ ಹೆಜ್ಜೆ ಎತ್ತಿದೆ.