53
ಕೊಚ್ಚಿ: ಮಹಿಳೆಯರ ಶರೀರದ ಕುರಿತಾಗಿ ಕೆಟ್ಟ ಅಭಿರುಚಿಯ ಹೇಳಿಕೆ , ಪದಪ್ರಯೋಗ ನಡೆಸುವುದು ಕೂಡಾ ಲೈಂಗಿಕ ಕಿರುಕುಳಕ್ಕೆ ಸಮಾನವಾದ ಶಿಕ್ಷಾರ್ಹ ಅಪರಾಧ ಎಂದು ಕೇರಳ ಹೈಕೋರ್ಟು ಅಭಿಪ್ರಾಯಪಟ್ಟಿದೆ.
ತನ್ನ ವಿರುದ್ದ ತಾನಿರುವ ಸಂಸ್ಥೆಯ ಮಹಿಳಾ ಉದ್ಯೋಗಿಯೊಬ್ಬರು ದಾಖಲಿಸಿದ ಲೈಂಗಿಕ ಕಿರುಕುಳ ಪ್ರಕರಣವನ್ನು ರದ್ದುಗೊಳಿಸುವಂತೆ ವಿನಂತಿಸಿ ಕೇರಳ ರಾಜ್ಯ ವಿದ್ಯುಚ್ಛಕ್ತಿ ಮಂಡಳಿಯ ನೌಕರರೊಬ್ಬರು ಸಲ್ಲಿಸಿದ ಅರ್ಜಿ ವಜಾಗೊಳಿಸುವ ಸಂದರ್ಭ ಹೈಕೋರ್ಟು ಈ ತೀರ್ಪಿತ್ತಿದೆ. ನ್ಯಾಯಮೂರ್ತಿ ಎ.ಬದರುದ್ದೀನ್ ಈ ಆದೇಶವಿತ್ತರು.
ಆರೋಪಿಯು 2013ರಿಂದಲೇ ತನಗೆ ಅಶ್ಲೀಲ ಪದಬಳಸಿ ಕರೆ ಮಾಡಿದ್ದಾರೆ. ಅಸಭ್ಯವಾಗಿ ಮಾತನಾಡಿದ್ದಾರೆ. ಅಶ್ಲೀಲ ಸಂದೇಶ ಕಳಿಸಿದ್ದಾರೆ. ಈ ಕುರಿತು ವಿದ್ಯುನ್ಮಂಡಳಿ ಮೇಲಧಿಕಾರಿಗಳಿಗೆ , ಪೋಲೀಸರೌಗೆ ದೂರಿತ್ತರೂ ಆತ ಚಾಳಿ ಮುಂದುವರಿಸಿದ್ದ ಎಂದು ಮಹಿಳೆ ಆರೋಪಿಸಿ ನ್ಯಾಯಾಲಯಕ್ಕೆ ದೂರಿದ್ದರು.
ಈ ಹಿನ್ನೆಲೆಯಲ್ಲಿ ಆರೋಪಿಯ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣ ದಾಖಲಿಸಲಾಗಿತ್ತು.