- ನಿಮಾ ತಾರೆಯನ್ನು ಅವಮಾನಿಸಿದ ಪ್ರಕರಣದಲ್ಲಿ ಉದ್ಯಮಿಯ ಬಂಧನ ಸ್ವಾಗತಾರ್ಹ: ಅಶ್ವಿನಿ ಎಂ.ಎಲ್
ಕಾಸರಗೋಡು: ಸಾರ್ವಜನಿಕವಾಗಿ ಚಿತ್ರನಟಿಯೊಬ್ಬರ ವಿರುದ್ದ ಅಶ್ಲೀಲ ದ್ವಂದ್ವಾರ್ಥದ ಕಮೆಂಟ್ ಹಾಕಿದ ಪ್ರಕರಣದಲ್ಲಿ ಉದ್ಯಮಿಯನ್ನು ಬಂಧಿಸಿರುವ ಪೊಲೀಸರ ಕ್ರಮವನ್ನು ಮಹಿಳಾ ಮೋರ್ಚಾ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯೆ ಅಶ್ವಿನಿ ಎಂ.ಎಲ್. ಸ್ವಾಗತಿಸಿದ್ದಾರೆ. ಈ ಕ್ರಮ ಮಹಿಳೆಯರ ಮೇಲೆ ನಿತ್ಯ ನಡೆಯುವ ದೌರ್ಜನ್ಯಕ್ಕೆ ಎಚ್ಚರಿಕೆಯ ಸಂದೇಶವನ್ನು ನೀಡುತ್ತದೆ ಎಂದು ಅವರು ಹೇಳಿದ್ದಾರೆ.
ಅವರು ಮಾತನಾಡುತ್ತಾ, “ಸಮಾಜದ ಎಲ್ಲಾ ವರ್ಗದ ಮಹಿಳೆಯರುಜಾಲತಾಣ ಹಹಿತ ಎಲ್ಲೆಡೆ ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ನಿರಂತರವಾಗಿ ಮಹಿಳೆಯರನ್ನು ಅವಮಾನಿಸಲಾಗುತ್ತಿದೆ. ಕೆಟ್ಟ ಕಮೆಂಟ್ಗಳಿಂದ ಶೋಷಿಸಲಾಗುತ್ತಿದೆ. ಆದರೆ, ಸಾಮಾನ್ಯ ಜನರು ದೂರು ನೀಡಿದಾಗ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಪ್ರಮುಖ ವ್ಯಕ್ತಿಗಳು ಅಥವಾ ಸುದ್ದಿ ಪ್ರಾಮುಖ್ಯತೆಯನ್ನು ಪಡೆಯುವ ಪ್ರಕರಣಗಳಲ್ಲಿ ಮಾತ್ರ ಕ್ರಮ ಕೈಗೊಳ್ಳಲಾಗುತ್ತಿದೆ,” ಎಂದು ಅಭಿಪ್ರಾಯಪಟ್ಟರು.
“ಎಂ.ಎಂ. ಮಣಿ ಸೇರಿದಂತೆ ಹಿರಿಯ ಸಿಪಿಎಂ ನಾಯಕರು ಆಯಾ ಸಂದರ್ಭಗಳಲ್ಲಿ ಮಹಿಳೆಯರನ್ನು ನಿಂದಿಸುತ್ತಾರೆ. ಆದರೆ ರಾಜ್ಯ ಆಡಳಿತ ಮತ್ತು ಪೊಲೀಸರು ಇದರ ವಿರುದ್ಧ ಕ್ರಮ ತೆಗೆದುಕೊಳ್ಳಲು ಸಿದ್ಧರಿಲ್ಲ. ಈ ಪರಿಸ್ಥಿತಿ ಬದಲಾಗುವುದು ಎಂಬ ಆಶಾವಾದವನ್ನು ಹೊಂದಿದ್ದೇವೆ,” ಎಂದು ಅಶ್ವಿನಿ ಹೇಳಿದರು.