82
ತಿರುಪತಿಯಲ್ಲಿ ಕಾಲ್ತುಳಿತ: ನಾಲ್ವರು ಭಕ್ತರ ಮರಣ, ಹಲವರಿಗೆ ಗಾಯ
ತಿರುಪತಿ ಕ್ಷೇತ್ರದಲ್ಲಿ ಜ.8ರಂದು ಬುಧವಾರ ಸಂಜೆ ಭಕ್ತರ ದಟ್ಟಣೆಯಿಂದ ಕಾಲ್ತುಳಿತ ಉಂಟಾಗಿ ನಾಲ್ವರು ಮೃತಪಟ್ಟು, ಹಲವರು ಗಾಯಗೊಂಡ ಘಟನೆ ವರದಿಯಾಗಿದೆ. ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.
ತಿರುಮಲ ಶ್ರೀವಾರಿ ವೈಕುಂಠ ದ್ವಾರದ ವೇಳೆ ದರ್ಶನಕ್ಕಾಗಿ ನೂಕುನುಗ್ಗಾಟ ನಡೆದು ಕಾಲ್ತುಳಿತ ಉಂಟಾಗಿದೆ. ಘಟನೆ ಬಗ್ಗೆ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ತೀವ್ರ ಆಘಾತ ಪ್ರಕಟಿಸಿ, ಹಿರಿಯ ಅಧಿಕಾರಿಗಳನ್ನು ತಿರುಪತಿಗೆ ಕಳಿಸಿದ್ದಾರೆ.