95
ಕಾಸರಗೋಡಿನಲ್ಲಿ ಮತ್ತೆ ನಕಲಿನೋಟು ಹಾವಳಿ ವ್ಯಾಪಕಗೊಂಡಿದೆ. ಜ.8 ಬುಧವಾರ ಸಂಜೆ ಪಾಲಕುನ್ನ್ ಪೇಟೆಯಲ್ಲಿ 500ರೂಗಳ 4 ನಕಲಿ ನೋಟು ಸಹಿತ ಯುವಕನನ್ನು ಬಂಧಿಸಲಾಗಿದೆ.
ಪಾಲಕುನ್ನ್ ಸಮೀಪದ ಆರಾಟುಕಡವ್ ನಿವಾಸಿ ವಿನೋದ್ ಎಂಬಾತ ಬಂಧಿತ ವ್ಯಕ್ತಿಯಾಗಿದ್ದಾನೆ . ಮೊಬೈಲ್ ಅಂಗಡಿಯೊಂದರಲ್ಲಿ ಫೋನಿನ ಡಿಸ್ಪ್ಲೇ ರಿಪೇರಿ ಮಾಡಿದ ಬಳಿಕ 500ರ ನಾಲ್ಕು ನೋಟುಗಳನ್ನು ವಿತರಿಸಿದಾಗ ಶಂಕೆಯುಂಟಾಗಿ ಅಂಗಡಿಯವರು ಪರಿಶೀಲಿಸಿದಾಗ ನಕಲಿ ನೋಟೆಂಬುದು ಖಚಿತವಾಯಿತು. ಕೂಡಲೇ ಪೋಲೀಸರು ಬಂದು ಆರೋಪಿಯನ್ನು ವಶಕ್ಕೆ ಪಡೆದರು. ಕಾಸರಗೋಡಿನ ವಿವಿದೆಡೆ ಇತ್ತೀಚೆಗೆ ನಕಲಿ ನೋಟು ಹಾವಳಿ ಮತ್ತೆ ಶುರುವಾಗಿದ್ದು, ವ್ಯಾಪಾರಿಗಳು ಆತಂಕ ಪ್ರಕಟಿಸಿದ್ದಾರೆ. ಅಸಲಿ ನೋಟಿನಂತೆಯೇ ಇರುವ ನಕಲಿ ನೋಟು ಸುಲಭದಲ್ಲಿ ಗುರುತಿಸಲಾಗದಷ್ಟು ನೈಜತೆ ಹೊಂದಿವೆ. ಬಂಧಿತ ಆರೋಪಿ ತನಗೆ ಇದು ಬೇಂಕಿನಿಂದ ದೊರೆತ ನೋಟು ಎಂದು ಪೋಲೀಸರಲ್ಲಿ ಹೇಳಿಕೆ ಇತ್ತಿದ್ದಾನೆ.