- ಸರಸ್ವತೀ ಮಂತ್ರ ಅನುರಣನದೊಂದಿಗೆ ಪಡುಕುತ್ಯಾರು ಶ್ರೀಆನೆಗುಂದಿ ಮಠದಲ್ಲಿ ಕೇಪುಳ ಪುಷ್ಪಾರ್ಚಿತ ಕೋಟಿ ಕುಂಕುಮಾರ್ಚನೆ ಆರಂಭ
- ಮಹಾಸಂಸ್ಥಾನದಲ್ಲಿ
ಪ್ರಪ್ರಥಮ ಬಾರಿಗೆ ಸಂಪನ್ನಗೊಳ್ಳುತ್ತಿರುವ ಕೇಪುಳ ಪುಷ್ಪದೊಂದಿಗೆ ಕೋಟಿ ಕುಂಕುಮಾರ್ಚನೆಯು
ಮಹಾಸಂಸ್ಥಾನದ ವಿವಿಧ ಯೋಜನೆಗಳ ಸಾಕಾರ ಮತ್ತು ಲೋಕ ಕಲ್ಯಾಣದ ಸಂಕಲ್ಪವನ್ನು ಹೊಂದಿದೆ. - ಆನೆಗುಂದಿ ಪ್ರತಿಷ್ಠಾನದ ವ್ಯಾಪ್ತಿಯ ದೇವಸ್ಥಾನಗಳು,
ಶ್ರೀ ಸರಸ್ವತೀ ಮಾತೃಮಂಡಳಿಯ ಮತ್ತು ಕೋಟಿ ಕುಂಕುಮ ಅರ್ಚನೆ ಸೇವಾ ಸಮಿತಿಯ
ನೇತೃತ್ವದಲ್ಲಿ
ಆರಂಭಗೊಂಡ ಕೋಟಿ ಅರ್ಚನಾ ಸೇವೆಯಲ್ಲಿ ಸಹಸ್ರಾರು ಮಾತೆಯರು ಹಾಗೂ ಮಹನೀಯರು ಪಾಲ್ಗೊಳ್ಳುತ್ತಿದ್ದಾರೆ.
ಪಡುಕುತ್ಯಾರಿನಲ್ಲಿರುವ ಕಟಪಾಡಿ ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠದಲ್ಲಿ ಕೋಟಿ ಕುಂಕುಮಾರ್ಚನೆಯು ಜ 6 ರಿಂದ ಆರಂಭಗೊಂಡಿದೆ. ದೈನಂದಿನ ಸಹಸ್ರಾರು ಮಹಿಳೆಯರು ಪಾಲ್ಗೊಂಡು ಶ್ರೀ ಸರಸ್ವತಿ ಮಂತ್ರ ಅನುರಣನ ಆಸ್ವಾದಿಸಿ ಭಕ್ತಿ ತನ್ಮಯತೆಯಿಂದ ಕೋಟಿಕುಂಕುಮಾರ್ಚನೆಯಲ್ಲಪಾಲ್ಗೊತ್ತಿದ್ದಾರೆ.
ಶ್ರೀಮತ್ ಜಗದ್ಗುರು ಆನೆಗುಂದಿ ಮಹಾ ಸಂಸ್ಥಾನ ಸರಸ್ವತೀ ಪೀಠಾಧೀಶ್ವರ ಜಗದ್ಗುರು ಅನಂತ ಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತಿ ಮಹಾಸ್ವಾಮಿಗಳವರ ದಿವ್ಯ ಸಾನಿಧ್ಯದಲ್ಲಿ ಪ್ರಾತಃಕಾಲ
ಆರಂಭಗೊಂಡ
ಅಷ್ಟಚಾತ್ವಾರಿಂಶತ್ ನಾರಿಕೇಳ ಗಣಯಾಗದಲ್ಲಿ ಆನೆಗುಂದಿ ಪ್ರತಿಷ್ಠಾನದ ಅಧ್ಯಕ್ಷ ವಿ ಶ್ರೀಧರ ಆಚಾರ್ಯ ವಡೇರಹೋಬಳಿ, ಮಾತೃ ಮಂಡಳಿ ಅಧ್ಯಕ್ಷೆ ಸಂಧ್ಯಾ ಲಕ್ಷ್ಮಣ ಆಚಾರ್ಯ ಉಡುಪಿ,ಪ್ರಧಾನ ಕಾರ್ಯದರ್ಶಿ ರಮಾ ನವೀನ್ ಆಚಾರ್ಯ ಕಾರ್ಕಳ,ಕೋಶಾಧಿಕಾರಿ ದೀಪ ಸುರೇಶ್ ಆಚಾರ್ಯ ಕಟಪಾಡಿ, ಆನೆಗುಂದಿ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಲೋಕೇಶ್ ಎಂ ಬಿ ಆಚಾರ್ ಕಂಬಾರು,ಕೋಶಾಧಿಕಾರಿ ಅರವಿಂದ ವೈ ಆಚಾರ್ಯ ಬೆಳುವಾಯಿ, ಕಾನೂನು ಸಲಹೆಗಾರ ಕೆ.ಎಂ ಗಂಗಾಧರ ಆಚಾರ್ಯ ಕೊಂಡೆಯೂರು ಪಾಲ್ಗೊಂಡರು.
ತಂತ್ರಿ ಅಕ್ಷಯ ಶರ್ಮ ಕಟಪಾಡಿ,
ಶ್ರೀ ಸರಸ್ವತಿ ಪೂರ್ವಚಾತ್ರ ಸಂಘದ
ಮೌನೇಶ ಶರ್ಮ ಬಾಳಿಲ,ಮನೋಜ್ ಶರ್ಮ, ದುರ್ಗಾ ಪ್ರಸಾದ್ ಶರ್ಮ ಆರಿಕ್ಕಾಡಿ, ಶಿವರಾಜ್ ಶರ್ಮ , ಪ್ರಶಾಂತ್ ಶರ್ಮಾ,ವಿಕಾಸ್ ಶರ್ಮ ಆಲೂರು, ಪಂಚಮ ಶರ್ಮ ಕೆಮ್ಮಣ್ಣು ಮುಂತಾದವರು ವೈದಿಕ ಕಾರ್ಯಕ್ರಮಗಳಿಗೆ ನೇತೃತ್ವ ನೀಡಿದರು.
ಮಹಾಸಂಸ್ಥಾನದ ಆಸ್ಥಾನ ವಿದ್ವಾಂಸರಾದ ಜ್ಯೋತಿಷ್ಯ ವಿದ್ವಾನ್ ಉಮೇಶ್ ಆಚಾರ್ಯ ಪಡೀಲು,ವಿದ್ವಾನ್ ಶಂಕರಾಚಾರ್ಯ ಕಡ್ಲಾಸ್ಕರ್, ವಿಶ್ವಕರ್ಮ ಒಕ್ಕೂಟದ ಅಧ್ಯಕ್ಷ ಮಧು ಆಚಾರ್ಯ ಮೂಲ್ಕಿ, ಭಾಗವಹಿಸಿದ್ದರು.
ಆನೆಗುಂದಿ ಮಹಾ ಸಂಸ್ಥಾನದ ಯುಟ್ಯೂಬ್ ಚಾನೆಲ್ ನ್ನು ಇದೆ ವೇಳೆ ಜಗದ್ಗುರುಗಳವರು ಲೋಕಾರ್ಪಣೆಗೊಳಿಸಿದರು.
ಮಂಜುನಾಥ ಶರ್ಮ, ಚರಣ್ ಶರ್ಮ ಆನೆಗುಂದಿ ಮಠ ಯೂಟ್ಯೂಬ್ ಚಾನೆಲ್ ನಿರ್ವಹಣೆ ನೇತೃತ್ವವನ್ನು ವಹಿಸಿದ್ದರು.
ಶ್ರೀ ಸರಸ್ವತಿಯಾಗ ಶಾಲೆಯಲ್ಲಿರುವ ಹುಂಡಿ ಕಾಣಿಕೆಯನ್ನು ಜಗದ್ಗುರುಗಳವರು ಉದ್ಘಾಟಿಸಿದರು.
ಮಧ್ಯಾಹ್ನದ ವಿರಾಮದ ವೇಳೆ ತೋನ್ಸೆ ಪುಷ್ಕಳಕುಮಾರ್ ಶಿಷ್ಯೆ ಜಯಶ್ರೀ ಗಣೇಶ್ ಆಚಾರ್ಯ ಕೆಮ್ಮಣ್ಣು ಅವರಿಂದ ಭಕ್ತ ಸುಧಾಮ ಎಂಬ ಹರಿಕಥಾ ಕಾಲ ಕ್ಷೇಪ ನಡೆಯಿತು.
ಕಾರ್ಯಕ್ರಮದ ಯಶಸ್ವಿಗಾಗಿ
ಶ್ರೀ ಬಿ.ಸೂರ್ಯಕುಮಾರ್ ಹಳೆಯಂಗಡಿ, ಶಿಲ್ಪಾ ಜಿ ಸುವರ್ಣ, ಸತೀಶ್ ಕುತ್ಯಾರು, ಜನಾರ್ದನ ಆಚಾರ್ಯ ಆಚಾರ್ಯ ಕಳತ್ತೂರು,ದಿನೇಶ್ ಆಚಾರ್ಯ ಪಡುಬಿದ್ರಿ, ನ್ಯಾಯವಾದಿ ಕೆ. ಪ್ರಭಾಕರ ಆಚಾರ್ಯ ಕೋಟೆಕಾರು,ಜಿ.ಟಿ ಆಚಾರ್ಯ ಮುಂಬಯಿ, ಶ್ರೀಧರ ಜೆ.ಆಚಾರ್ಯ ಕಟಪಾಡಿ, ಪಿ.ವಿ ಗಂಗಾಧರ ಆಚಾರ್ಯ ಕೊಂಡೆಯವರು ರಮಾನವೀನ್ ಕಾರ್ಕಳ, ದೀಪಾ ಸುರೇಶ್ ಕಟಪಾಡಿ, ಯಜ್ಞೇಶ್ವರ ಆಚಾರ್ಯ ಕುತ್ಯಾರು, ಎ. ಗಣೇಶ ಆಚಾರ್ಯ ಕೋಟ, ಗುರುರಾಜ ಕೆ.ಜೆ ಆಚಾರ್ಯ ಮಂಗಳೂರು, ಗಣೇಶ್ ಆಚಾರ್ಯ ಕೆಮ್ಮಣ್ಣು, ಕೇಶವ ಶರ್ಮಾ ಇರುವೈಲು, ಲೋಲಾಕ್ಷ ಶರ್ಮಾ ಕಟಪಾಡಿ, ಲತಾ ಎಸ್ ಆಚಾರ್ಯ ಕುತ್ಯಾರು,ಉಷಾ ಜಿ.ಟಿ ಆಚಾರ್ಯ, ಆಶಾ ಉಮೇಶ್ ಆಚಾರ್ಯ ಪಡೀಲು,ಆಶಾ ನಾಗರಾಜ ಆಚಾರ್ಯ ಕಾಡಬೆಟ್ಟು ಕವಿತಾ ಹರೀಶ್ ಆಚಾರ್ಯ ಕಾರ್ಕಳ , ಜನಾರ್ದನ ಆಚಾರ್ಯ ಕನ್ಯಾನ,ಶಾಲಿನಿ ಜಯಕರ ಆಚಾರ್ಯ ಕರಂಬಳ್ಳಿ, ರಾಘವೇಂದ್ರ ಆಚಾರ್ಯ ಉಡುಪಿ, ಸುರೇಶ್ ಆಚಾರ್ಯ ಇರಂದಾಡಿ, ಮನೋಜ್ ಆಚಾರ್ಯ ಮುಂಬೈ,
ಉಷಾ ಎಸ್ ಆಚಾರ್ಯ ಕಾಡಬೆಟ್ಟು, ದೀಪಾ ಪ್ರಶಾಂತ್ ಕಟಪಾಡಿ, ಶಾಲಿನಿ ಶಿವರಾಮ, ಜ್ಯೋತಿ ರಾಘವೇಂದ್ರ, ಶಾಲಿನಿ ರತ್ನಾಕರ ಪಡುಕುತ್ಯಾರು,ಪುಷ್ಪಲತಾ ಎಲ್. ಆಚಾರ್ಯ ಕಂಬಾರು,ಸವಿತಾ ಜಿ ಆಚಾರ್ಯ ಕೊಂಡೆವೂರು, ಮುಂತಾದವರು ನೇತೃತ್ವ ನೀಡಿದರು.
ಇಂದು ನಡೆದ ಮಹಾ ಮೃತ್ಯುಂಜಯ ಹವನ ಮತ್ತು ರುದ್ರಯಾಗದಲ್ಲಿ ಶ್ರೀ ಮೋಹನ್ ಕುಮಾರ್, ಬೆಳ್ಳೂರು, ದಯಾನಂದ ಆಚಾರ್ಯ ಕೆಳಾರ್ಕಳಬೆಟ್ಟು, ತಂತ್ರಿ ಅಕ್ಷಯ ಶರ್ಮ ಕಟಪಾಡಿ,
ಶ್ರೀ ಸರಸ್ವತಿ ಪೂರ್ವಚಾತ್ರ ಸಂಘದ
ಮೌನೇಶ ಶರ್ಮ ಬಾಳಿಲ,ಮನೋಜ್ ಶರ್ಮ, ದುರ್ಗಾ ಪ್ರಸಾದ್ ಶರ್ಮ, ಆರಿಕ್ಕಾಡಿ, ಪ್ರಶಾಂತ್ ಶರ್ಮಾ ಆಲೂರು,ಶಿವಕುಮಾರ್ ಶರ್ಮ,ವಿಕಾಸ್ ಶರ್ಮ ಮುಂತಾದವರು ವೈದಿಕ ಕಾರ್ಯಕ್ರಮಗಳಿಗೆ ನೇತೃತ್ವ ನೀಡಿದರು.
ಮಧ್ಯಾಹ್ನ ವಿರಾಮದ ವೇಳೆ
ಪ್ರಸಾದ್ ಆಚಾರ್ಯ ಮತ್ತು ಬಳಗ ಬಜಪೆ ಇವರಿಂದ ಭಜನಾ ಸಂಕೀರ್ತನ ಸೇವೆ ನಡೆಯಿತು
ನಾಳೆ ಜನವರಿ 8ರಂದು ಶ್ರೀ ವಿಷ್ಣು ಹವನ ಹಾಗೂ ಧನ್ವಂತರಿ ಹೋಮ ನಡೆಯಲಿದೆ.
ಆನೆಗುಂದಿ ಪ್ರತಿಷ್ಠಾನದ ವ್ಯಾಪ್ತಿಯ ದೇವಸ್ಥಾನಗಳು,
ಶ್ರೀ ಸರಸ್ವತೀ ಮಾತೃಮಂಡಳಿಯ ಮತ್ತು ಕೋಟಿ ಕುಂಕುಮ ಅರ್ಚನೆ ಸೇವಾ ಸಮಿತಿಯ
ನೇತೃತ್ವದಲ್ಲಿ
ಆರಂಭಗೊಂಡ ಕೋಟಿ ಅರ್ಚನಾ ಸೇವೆಯಲ್ಲಿ ಸಹಸ್ರಾರು ಮಾತೆಯರು ಹಾಗೂ ಮಹನೀಯರು ಪಾಲ್ಗೊಳ್ಳುತ್ತಿದ್ದಾರೆ.
ಜನವರಿ 12ರಂದು ಸಮಾರೋಪ ಸಮಾರಂಭದೊಂದಿಗೆ ಕಾರ್ಯಕ್ರಮ ಸಂಪನ್ನಗೊಳ್ಳಲಿದೆ.
ವಿಶೇಷತೆಗಳು:
- ಕೋಟಿ ಕುಂಕುಮಾರ್ಚನೆಯು
ಬೆಳಗ್ಗಿನ ತಂಡದಲ್ಲಿ ಘಂಟೆ 9.00 5 ಆವೃತ್ತಿಗಳು.ಅಪರಾಹ್ನದ ತಂಡದಲ್ಲಿ ಘಂಟೆ 2.30ರಿಂದ 3 ಆವೃತ್ತಿಗಳು ದಿನದಲ್ಲಿ ಒಟ್ಟು 8 ಆವೃತ್ತಿಯಲ್ಲಿ ಅರ್ಚನೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
ಪ್ರತಿ ಆವೃತ್ತಿ ಮುಗಿಯುವ ವೇಳೆ ಅರ್ಚನೆ ಮಾಡಿದ ಕುಂಕುಮವನ್ನು ಹಾಗೂ ಕೇಪಳ ಪುಷ್ಪವನ್ನು ಮಂಡಲಕ್ಕೆ ಸಮರ್ಪಿಸಿ ಪೂಜೆ ನಡೆಸಲಾಗುತ್ತದೆ. - ಅರ್ಚನೆಯಲ್ಲಿ
ಭಾಗವಹಿಸಲು ಹೆಸರು ನೊಂದಾಯಿಸಿದವರಿಗೆ ವಿಶೇಷ ಗುರುತಿನ ಚೀಟಿ ಹಾಗೂ ಬಳಿಕ ಅನುಗ್ರಹ ಪತ್ರ ಮತ್ತು ಪ್ರಸಾದವನ್ನು ನೀಡಲಾಗುತ್ತದೆ. - ಮಹನೀಯರು ಪಂಚೆ ಮತ್ತು ಶಲ್ಯ ಹಾಗೂ ಮಹಿಳೆಯರು ಸೀರೆ ಉಡುಪಿನಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
- ದಿನಂ ಪ್ರತಿ ಬೇರೆ ಬೇರೆ ತಂಡಗಳಿಂದ ವಿವಿಧ ತರದ ಉಪಹಾರದ (ಬೆಳಗ್ಗೆ,ಮಧ್ಯಾಹ್ನ ಸಂಜೆ) ವ್ಯವಸ್ಥೆ ಮಾಡಲಾಗಿದೆ.
- ನೆಲದ ಮೇಲೆ ಕುಳಿತುಕೊಳ್ಳಲು ಅಸಾಧ್ಯವಾಗದವರಿಗೆ
ಆರ್ಚನಾ ಸೇವೆಯಲ್ಲಿ ಭಾಗವಹಿಸಲು ವಿಶೇಷ ಆಸನದ ಅವಕಾಶ ಕಲ್ಪಿಸಲಾಗಿದೆ. - ದೈನಂದಿನ ನಿರ್ವಹಣೆಗೆ ಹಲವಾರು ಉದಾರ ದಾನಿಗಳು ಒಂದು ದಿನದ ವೆಚ್ಚ, 7 ದಿನಗಳಿಗೆ ಬೇಕಾಗುವ ಅಕ್ಕಿ, ದಿನಸು ತೆಂಗಿನಕಾಯಿ,ತರಕಾರಿ ಇತ್ಯಾದಿಗಳನ್ನು ನೀಡುತ್ತಿದ್ದಾರೆ.