ಗಡಿನಾಡು ಕಾಸರಗೋಡಿನ ಪ್ರಸಿದ್ಧ ವಾಸ್ತುಶಿಲ್ಪಿ ತುಕಾರಾಮ ಆಚಾರ್ಯ ಮಾಯಿಪ್ಪಾಡಿ (86)ಇಂದು ಬೆಳಗ್ಗೆ ನಿಧನರಾದರು.
ಆನೆಗುಂದಿ ಕುಲಗುರು ಪೀಠದ ಶ್ರದ್ಧಾವಂತ ಶಿಷ್ಯರಾಗಿದ್ದ ಇವರು ಆನೆಗುಂದಿ
ಮಹಾಸಂಸ್ಥಾನದ ಪುನರುತ್ಥಾನಕ್ಕೆ ತನ್ನನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.
ಜಗದ್ಗುರುಗಳವರ ಪೂರ್ವಾಶ್ರಮದ ಜತೆ ನಿಕಟ ಸಂಪರ್ಕವಿದ್ದ ಇವರು ಕುಲ ಗುರುಪೀಠಪುನರುತ್ಥಾನದ ಯೋಜನೆಯ ಸಾಕಾರಕ್ಕಾಗಿ ಅವಿರತವಾಗಿ ಪ್ರಯತ್ನಿಸಿದವರು
ಕುಲಗುರು ಪೀಠ ಅಚಲ ಶ್ರದ್ಧೆಯನ್ನಿರಿಸಿ ಪುನರುತ್ಥಾನ ಯೋಜನೆಯಲ್ಲಿ ಮುಂಚೂಣಿಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದರು.
ಬೆಳಗುತ್ತಿ ಮಠ ಪುನರ್ ನಿರ್ಮಾಣ ಸಮಿತಿಯ ಪದಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು.ಇವರ ನಿಸ್ವಾರ್ಥ ಸೇವೆಯನ್ನು ಪರಿಗಣಿಸಿ ಮಹಾಸಂಸ್ಥಾನದಿಂದ
ಶ್ರೀ ಸರಸ್ವತೀ ಅನುಗ್ರಹ ಪ್ರಶಸ್ತಿಯನ್ನು ಪ್ರಧಾನ ಮಾಡಲಾಗಿತ್ತು.ಮಧೂರು ಶ್ರೀ ಕಾಳಿಕಾಂಬಾ ಮಠದಲ್ಲಿ ಆಡಳಿತ ಸಮಿತಿ,ಜೀರ್ಣೋದ್ಧಾರ ಸಮಿತಿ, ಬ್ರಹ್ಮಕಲಶ ಸಮಿತಿಯಲ್ಲಿ ವಿವಿಧ ಪದಾಧಿಕಾರಿ ಹುದ್ದೆಯಲ್ಲಿ ಸೇವೆ ಸಲ್ಲಿಸಿ ಇವರು ಅಧ್ಯಕ್ಷರಾಗಿ ಹಲವು ವರ್ಷಗಳ ಕಾಲ ಸೇವೆಯನ್ನು ಸಲ್ಲಿಸಿದ್ದರು.
ವಾಸ್ತುಶಿಲ್ಪಿಯಾಗಿ ಹಲವು ಮಧೂರು ಶ್ರೀ ಕಾಳಿಕಾಂಬಾ ಮಠ ಸೇರಿದಂತೆ ನೂರಾರು ದೇವಸ್ಥಾನ,ಭಜನಾ ಮಂದಿರ ದೈವಸ್ಥಾನಗಳ ವಾಸ್ತುಶಿಲ್ಪಿಯಾಗಿ ಖ್ಯಾತಿ ಹೊಂದಿದ್ದರು.
ಇವರು ಎಂ ತುಕಾರಾಮ ಆಚಾರ್ಯ (86)ಪತ್ನಿ ಸರೋಜಿನಿ,ಪುತ್ರರಾದ ಲೋಕೇಶ್ ಆಚಾರ್ಯ ಎಂ,ಹರೀಶ್ ಆಚಾರ್ಯ,ಉದಯಕುಮಾರ್,ಪುತ್ರಿ ಭುವನೇಶ್ವರಿ,ಸೊಸೆಯಂದಿರಾದಸುಮತಿ,ಶೋಭಿತ,ಇಂದು ಹಾಗೂ ಮೊಮ್ಮಕ್ಕಳನ್ನು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ
ಅಗಲಿದ ಅವರ ಆತ್ಮಕ್ಕೆ ನಿತ್ಯ ಚಿರಶಾಂತಿಯನ್ನು ಅವರ ಕುಟುಂಬಕ್ಕೆ ಹಾಗೂ ಬಂಧುಗಳಿಗೆ ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ಕುಲ ಗುರುಪರಂಪರೆ ಹಾಗೂ ಭಗವಂತ ಕರುಣಿಸಲೆಂದು
ಅಧ್ಯಕ್ಷರು ಹಾಗೂ ಪದಾಧಿಕಾರಿಗಳು
ಶ್ರೀಮತ್ ಜಗದ್ಗುರು ಆನೆಗುಂದಿ ಮಹಾ ಸಂಸ್ಥಾನ ಸರಸ್ವತಿ ಪೀಠ ಪ್ರತಿಷ್ಠಾನ (ರಿ.),ಸಹ ಟ್ರಸ್ಟ್ ಗಳಾದ ಅಸೆಟ್,ಗೋ ಪರ್ಯಾವರಣ್ ಸಂರಕ್ಷಣಾ ಟ್ರಸ್ಟ್ ಮತ್ತು ಸಮಿತಿಗಳಾದ ಆನೆಗುಂದಿ ಗುರು ಸೇವಾ ಪರಿಷತ್, ಸರಸ್ವತೀ ಮಾತೃ ಮಂಡಳಿ
ಕಟಪಾಡಿ ಪಡುಕುತ್ಯಾರು ತಿಳಿಸಿದೆ.