70
ದೇಲಂಪಾಡಿ ಕ್ಷೇತ್ರಕ್ಕೆ ಧರ್ಮಸ್ಥಳದ ಸಹಾಯ : ದೇವಳದಲ್ಲಿ ಅಭಿನಂದನೆ
ಪುತ್ತಿಗೆ ದೇಲಂಪಾಡಿಯ ಶ್ರೀಮಹಾಲಿಂಗೇಶ್ವರ ಕ್ಷೇತ್ರ ದ ಜೀರ್ಣೋದ್ಧಾರ ಕಾಯಕಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ 5ಲಕ್ಷ ರೂ ಅನುದಾನ ನೀಡಿದರು. ದೇಲಂಪಾಡಿ ಕ್ಷೇತ್ರ ನವೀಕರಣ ಬ್ರಹ್ಮಕಲಶೋತ್ಸವ ಸಮಿತಿ ಪದಾಧಿಕಾರಿಗಳಾದ ಡಿ. ದಾಮೋದರನ್, ಡಿ. ರಾಜೇಂದ್ರ ರೈಯವರನ್ನೊಳಗೊಂಡ ನಿಯೋಗಕ್ಕೆ ಅವರು ಆರ್ಥಿಕ ಸಹಾಯ ಹಸ್ತಾಂತರಿಸಿದರು.
ಈ ಹಿನ್ನೆಲೆಯಲ್ಲಿ ದೇಲಂಪಾಡಿ ಮಹಾಲಿಂಗೇಶ್ವರ ದೇವಾಲಯದಲ್ಲಿ ಅಭಿನಂದನೆ ಸಭೆ ನಡೆಯಿತು. ಧರ್ಮಸ್ಥಳ ಜನಜಾಗೃತಿ ವೇದಿಕೆಯ ತಾಲೂಕು ಅಧ್ಯಕ್ಷ ಡಾ. ಜಯಪ್ರಕಾಶ್ ನಾರಿಯಣ ತೊಟ್ಟೆತ್ತೋಡಿ, ವಲಯಾಧ್ಯಕ್ಷ ಬಿ.ಪಿ.ಶೇಣಿ, ಕೋಳಾರು ಸತೀಶಚಂದ್ರ ಭಂಡಾರಿ, ಡಿ.ಸುಬ್ಬಣ್ಣ ಆಳ್ರ
ವ, ಸುರೇಂದ್ರ, ಮಾಜಿ ಬ್ಲಾಕ್ ಪಂ.ಸದಸ್ಯ ರಮಾನಾಥ ರೈ, ಉಮಾನಾಥ ಭಂಡಾರಿ, ಶಂಕರ ರೈ ಮಾಸ್ತರ್ ಉಪಸ್ಥಿತರಿದ್ದರು. ಡಿ.ದಾಮೋದರನ್ ಸ್ವಾಗತಿಸಿ ರಾಜೇಂದ್ರ ರೈ ವಂದಿಸಿದರು.