60
ತಿರುವನಂತಪುರದಲ್ಲಿ ನಡೆಯುತ್ತಿರುವ ರಾಜ್ಯ ಮಟ್ಟದ ಕೇರಳ ಶಾಲಾ ಕಲೋತ್ಸವದಲ್ಲಿ ಪೆರಡಾಲ ನವಜೀವನ ಹೈಸ್ಕೂಲಿನ ವಿದ್ಯಾರ್ಥಿ ಪ್ರದ್ಯುಮ್ನ ಶರ್ಮ ಹುಡುಗರ ವಿಭಾಗದ ಶಾಸ್ತ್ರೀಯ ಸಂಗೀತದಲ್ಲಿ ಎ ಗ್ರೇಡ್ ಪಡೆದು ನಾಡಿಗೆ ಅಭಿಮಾನವಾಗಿದ್ದಾನೆ.
ನವಜೀವನ ಹೈಸ್ಕೂಲಿನ 9ನೇ ತರಗತಿ ವಿದ್ಯಾರ್ಥಿಯಾದ ಪ್ರದ್ಯುಮ್ನ ವಿದುಷಿ ವಾಣಿಪ್ರಸಾದ್ ಕಬೆಕ್ಕೋಡು ಅವರಲ್ಲಿ ಸಂಗೀತಾಭ್ಯಾಸ ಮಾಡುತ್ತಿದ್ದು, ಈಗಾಗಲೇ ಭರವಸೆಯ ಗಾಯಕನಾಗುವ ಲಕ್ಷಣಗಳನ್ನು ಮೂಡಿಸಿದ್ದಾನೆ. ಇದೀಗ ರಾಜ್ಯ ಮಟ್ಟದ ಪ್ರಬಲ ಸ್ಪರ್ಧಾ ವೇದಿಕೆಯಲ್ಲೂ ಎ ಗ್ರೇಡ್ ಪಡೆದು ನಾಡಿಗೆ ಅಭಿಮಾನವಾಗಿದ್ದಾನೆ. ಉಪ್ಪಂಗಳ ನಿವಾಸಿ ಉದ್ಯಮಿ ರಂಗಶರ್ಮಾ ಹಾಗು ಸ್ಮಿತಾ ದಂಪತಿಯ ಪುತ್ರನಾದ ಪ್ರದ್ಯುಮ್ನ ಶರ್ಮನ ಸಾಧನೆಗೆ ನವಜೀವನ ಹೈಸ್ಕೂಲಿನ ಅಧ್ಯಾಪಕ,ವಿದ್ಯಾರ್ಥಿ ವೃಂದ ಅಭಿನಂದಿಸಿದೆ.