- ಭಾರತದಲ್ಲಿ ವೈರಸ್ ಸೋಂಕು ಇದೇ ಮೊದಲು
- ಬೆಂಗಳೂರಿನ ಇಬ್ಬರು ಮಕ್ಕಳಲ್ಲಿ HMP ವೈರಸ್ ಪತ್ತೆ
ಬೆಂಗಳೂರು : ಭಾರತದಲ್ಲಿ ಮೊದಲ ಬಾರಿಗೆ hmpv
ವೈರಸ್ ಬೆಂಗಳೂರಿನಲ್ಲಿ ಕಂಡುಬಂದಿದೆ. 8ತಿಂಗಳ ಮಗುವಿಗೆ ಮತ್ತು ಇನ್ನೊಂದು ಮಗುವಿಗೆ ಸೋಂಕು ತಗುಲಿರುವುದು ದೃಢಗೊಂಡಿದ್ದು, ದೇಶದಲ್ಲಿ ಸದ್ಯ ಆತಂಕ ಬೇಡವೆಂದು ಆರೋಗ್ಯ ಇಲಾಖೆ ಪ್ರಕಟಿಸಿದೆ.
ಚೀನಾದಲ್ಲಿ ಪತ್ತೆಯಾಗಿರುವ ಮ್ಯುಟೇಟೇಡ್ ವೈರಸ್ ಗೂ ಇದಕ್ಕೂ ಸಂಬಂಧ ಇದೆಯೇ ಎಂಬುದಿನ್ನೂ ದೃಢವಾಗಿಲ್ಲ.
ನೂತನ ವೈರಸನ್ನು ಹ್ಯೂಮನ್ ಮೆಟಾನ್ಯೂಮೊವೈರಸ್ ಎಂದು ಗುರುತಿಸಲಾಗಿದೆ.
ಯಾವುದೇ ಟ್ರಾವೆಲ್ ಹಿಸ್ಟರಿ ಇಲ್ಲದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಗುವಿನಲ್ಲಿ ನೂತನ ವೈರಸ್ ಸೋಂಕು ಪತ್ತೆಯಾಗಿದೆ. ಜ್ವರ ಬಂದ ಹಿನ್ನೆಲೆಯಲ್ಲಿ ಮಗುವನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು, ರಕ್ತ ಪರೀಕ್ಷೆಯಲ್ಲಿ ಎಚ್ಎಂಪಿವಿ ವೈರಸ್ ಸೋಂಕು ದೃಢವಾಗಿದೆ.
ದೇಶದ ಮತ್ತೆಲ್ಲೂ ಇಲ್ಲದ ಈ ವೈರಸ್ ಬೇಂಗಳೂರಿನ ಶಿಶುವಿಗೆ ಹೇಗೆ ಬಂತೆಂದೇ ವೈದ್ಯ ಲೋಕಕ್ಕೆ ಅಚ್ಚರಿಯಾಗಿದೆ. ಸದ್ಯಕ್ಕೆ ದೇಶದಲ್ಲಿ ಕರ್ನಾಟಕದಲ್ಲಿ ಮಾತ್ರವೇ ಪತ್ತೆಯಾದ ಪ್ರಕರಣವಾಗಿದ್ದು, ಗಾಬರಿಯಾಗಬೇಕಾದ ಅಗತ್ಯ ಇಲ್ಲ ಎಂದು ಆರೋಗ್ಯ ಇಲಾಖೆ ಪ್ರಕಟಿಸಿದೆ.
ಶೀತ ಜ್ವರ ಇದರ ಪ್ರಾಥಮಿಕ ಲಕ್ಷಣವಾಗಿದೆ.