- ಕರ್ನಾಟಕದ ವಿವಿದೆಡೆಯ ಯತಿ ಪ್ರಮುಖರು ಮಂಗಳೂರಿನ ಓಂಶ್ರೀ ಮಠಕ್ಕೆ ಭೇಟಿ : ಸಂತ ಸಮಿತಿ ರಾಜ್ಯಾಧ್ಯಕ್ಷರೊಂದಿಗೆ ಮಾತುಕತೆ
ಮಂಗಳೂರಿಗೆ ಬಂದಿದ್ದ ಕರ್ನಾಟಕದ ವಿವಿಧ ಮಠಗಳ ಯತಿ ಪ್ರಮುಖರು ಮಂಗಳೂರಿನ ಓಂಶ್ರೀ ಮಠಕ್ಕೆ ಚಿತ್ತೈಸಿ, ಅಖಿಲ ಕರ್ನಾಟಕ ಸಂತ ಸಮಿತಿ ರಾಜ್ಯಾಧ್ಯಕ್ಷ ಮಹಾಮಂಡಲೇಶ್ವರ ಸ್ವಾಮಿ ಓಂಶ್ರೀ ವಿದ್ಯಾನಂದ ಸರಸ್ವತಿ ಹಾಗೂ ಮಾತಾಶ್ರೀ ಓಂಶ್ರೀ ಜ್ಞಾನಮಹಿ ಸರಸ್ವತಿ ಅವರನ್ನು ಭೇಟಿಯಾದರು.
ಈ ಸಂದರ್ಭ ಅಖಿಲ ಕರ್ನಾಟಕ ಮಟ್ಟದಲ್ಲಿ ಸಂತ ಸಮಿತಿ ಕೈಗೊಳ್ಳುವ ಧರ್ಮೋತ್ಥಾನ ಪ್ರಕ್ರಿಯೆಗಳ ಮುಂದಿನ ಯೋಜನೆಗಳ ಕುರಿತಾಗಿ ಮಾತುಕತೆ ನಡೆಯಿತು.
ಬೆಳಗಾವಿ ಹುಕ್ಕೇರಿ ಹೀರೇ ಮಠದ ಪೂಜ್ಯ ಶ್ರೀ ಷ. ಬ್ರ. ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಜೀ, ಶ್ರೀ ಬಸವ ಮೂರ್ತಿ ಮಾಧಾರ ಚೆನ್ನಯ್ಯ ಸ್ವಾಮೀಜಿ ಶ್ರೀ ಶಿವಶರಣ ಮಾದರ ಚೆನ್ನಯ್ಯ ಗುರುಪೀಠ ಚಿತ್ರದುರ್ಗ ಅಖಿಲ ಭಾರತೀಯ ಸಂತ ಸಮಿತಿ ಕರ್ನಾಟಕ ಉಪಾಧ್ಯಕ್ಷ, ಶ್ರೀ ನಿಶ್ಚಲ ನಿರಂಜನ ದೇಶಿ ಕೇಂದ್ರ ಸ್ವಾಮೀಜಿ ವಿರಕ್ತಮಠ ದೊಡ್ಬಳ್ಳಾಪುರ ಕೊಡಗು ಅಖಿಲ ಭಾರತೀಯ ಸಂತ ಸಮಿತಿ ಕರ್ನಾಟಕ ಸಂಘಟನಾ ಕಾರ್ಯದರ್ಶಿ ಮಂಗಳೂರು ಓಂ ಶ್ರೀ ಮಠದಲ್ಲಿ ಅಖಿಲ ಭಾರತೀಯ ಸಂತ ಸಮಿತಿ ಕರ್ನಾಟಕ ರಾಜ್ಯಾಧ್ಯಕ್ಷ ಮಹಾಮಂಡಲೇಶ್ವರ ಸ್ವಾಮಿ ಓಂ ಶ್ರೀ ವಿದ್ಯಾನಂದ ಸರಸ್ವತಿ ಹಾಗೂ ಮಾತಾಶ್ರೀ ಓಂ ಶ್ರೀ ಶಿವ ಜ್ಞಾನಮಹಿ ಸರಸ್ವತಿಯವರನ್ನು 2025 ಜನವರಿ 2 ರಂದು ಭೇಟಿಯಾದರು.
ಮಂಗಳೂರಿನಲ್ಲಿ ನಡೆದ ಶ್ರೀ ಆದಿಚುಂಚನಗಿರಿ ಶಾಖಾ ಮಠದ ರಜತ ಮಹೋತ್ಸವ , ಭೈರವಕ್ಯ ಜಗದ್ಗುರು ಶ್ರೀ ಡಾ.ಬಾಲಗಂಗಾಧರನಾಥ ಮಹಾಸ್ವಾಮೀಜಿಯವರ ಪಟ್ಟಾಭಿಷೇಕದ ಸುವರ್ಣ ಮಹೋತ್ಸವದ ಹಿನ್ನೆಲೆಯಲ್ಲಿ ಕಾವೂರಿನ ಬಿಜಿಎಸ್ ಪಿಯು ಕಾಲೇಜಿನ ಆವರಣದಲ್ಲಿ ನಡೆದ ರಜತ ತುಲಾಭಾರ ಸಹಿತ ಸಮಾರಂಭದಲ್ಲಿ ಪಾಲ್ಗೊಳ್ಳಲೆಂದು ಶ್ರೀಗಳು ಪರಿವಾರ ಸಹಿತ ಮಂಗಳೂರಿಗೆ
ಆಗಮಿಸಿದ್ದರು.