79
- ಮದ್ಯ ಸೇವಿಸದಂತೆ ಸಂದೇಶ : ಟೀಂ ಇಂಡಿಯಾ ಜೆರ್ಸಿ ಧರಿಸಿ ಆಸ್ಪತ್ರೆಯಿಂದ ಮನೆಗೆ ಮರಳಿದ ವಿನೋದ್ ಕಾಂಬ್ಳಿ
ಠಾಣೆ: ತೀವ್ರ ಅನಾರೋಗ್ಯದಿಂದ ಆಸ್ಪತ್ರೆ ಸೇರಿದ್ದ ಭಾರತದ ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಚೇತರಿಸಿ, ಗುಣಮುಖರಾಗಿ ಆಸ್ಪತ್ರೆಯಿಂದ ಬಿಗುಗಡೆಯಾಗಿದ್ದಾರೆ.
ಎರಡು ವಾರಗಳಿಂದ ಚಿಕಿತ್ಸೆಯಲ್ಲಿದ್ದ ಅವರು ಬುಧವಾರ ಸಂಜೆ ಆಸ್ಪತ್ರೆಯಿಂದ ತೆರಳಿದರು.
ಆಸ್ಪತ್ರೆಯಿಂದ ತೆರಳುವಾಗ ಟೀಂ ಇಂಡಿಯಾ ಕ್ರಿಕೆಟಿನ ಜೆರ್ಸಿ ತೊಟ್ಟು, ಬ್ಯಾಟ್ ಬೀಸುತ್ತಾ ನಡೆದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮೂತ್ರನಾಳದ ಸೋಂಕು ಮತ್ತು ಸ್ನಾಯು ಸೆಳೆತದಿಂದ ಬಳಲಿ 52ರ ಹರೆಯದ ವಿನೋದ್ ಕಾಂಬ್ಳಿ ಆಸ್ಪತ್ರೆ ಸೇರಿದ್ದರು. ಬಳಿಕ ಅವರ ತಲೆಯಲ್ಲಿ ರಕ್ತ ಹೆಪ್ಪುಗಟ್ಟಿರುವುದು ಪತ್ತೆಯಾಗಿತ್ತು.
ಆಸ್ಪತ್ರೆಯಿಂದ ಮನೆಗೆ ಮರಳುವಾಗ ಮಾಧ್ಯಮಗಳೊಂದಿಗೆ ಮಾತಾಡಿದ ಅವರು ” ದುಶ್ಚಟಗಳು ಬದುಕನ್ನೇ ಬಲಿತೆಗೆಯುತ್ತದೆ. ಮದ್ಯ, ಮಾದಕ ವಸ್ತುಗಳಿಂದ ದೂರವಿರಿ” ಎಂಬ ಸಂದೇಶ ನೀಡಿದ್ದಾರೆ.