- ಕರ್ನಾಟಕ ಸಾರಿಗೆ ಬಸ್ ಗಳಲ್ಲಿ ಶೇ.15 ಟಿಕೆಟ್ ದರ ಏರಿಕೆಗೆ ನಿರ್ಧಾರ : ಜ.5ರಿಂದ ಪರಿಷ್ಕೃತ ಟಿಕೆಟ್ ದರ ಜ್ಯಾರಿಗೆ
ಬೆಂಗಳೂರು : ಹೊಸ ವರ್ಷ ಕಾಲೂರಿದಂತೆಯೇ ಕರ್ನಾಟಕ ಸರಕಾರ ರಾಜ್ಯ ಸಾರಿಗೆ ಸಂಸ್ಥೆ ಬಸ್ ಗಳ ಟಿಕೇಟ್ ದರ ಏಗೆ ಬಸ್ ಗಳಲ್ಲಿ ಶೇ.15 ಟಿಕೆಟ್ ದರ ಏರಿಕೆಗೆ ನಿರ್ಧಾರ : ಜ.5ರಿಂದ ಪರಿಷ್ಕೃತ ಟಿಕೆಟ್ ದರ ಜ್ಯಾರಿಗೆರಿಕೆ ಪ್ರಸ್ತಾಪಕ್ಕೆ ಅನುಮೋದನೆ ನೀಡಿದೆ. ಕರ್ನಾಟಕ ರಾಜ್ಯ ಕೆಎಸ್ಸಾರ್ಟೀಸಿ ಮತ್ತು ಬೆಂಗಳೂರು ಮಹಾನಗರದ ಬಿಎಂಟಿಸಿ ಸೇರಿದಂತೆ ನಾಲ್ಕೂ ನಿಗಮಗಳ ಬಸ್ ಟಿಕೆಟ್ ಶುಲ್ಕ ಶೇ.15ರಷ್ಟು ಹೆಚ್ಚಳಕ್ಕೆ ಗುರುವಾರ ಸಂಪುಟ ಸಭೆ ಒಪ್ಪಿಗೆ ಇತ್ತಿದೆ. ನೂತನ ಪರಿಷ್ಕೃತ ದರ ಜನವರಿ 5ರಿಂದ ಚಾಲ್ತಿಗೆ ಬರಲಿದೆ.
ಟಿಕೆಟ್ ದರ ಶೇಕಡಾ 15ರಷ್ಟು ಹೆಚ್ಚಳವಾಗಲಿದ್ದು, ಈ ಮೂಲಕ 7.84 ಕೋಟಿ ರೂ ಆದಾಯ ಸಾರಿಗೆ ಇಲಿಖೆಗೆ ಹೆಚ್ಚಳವಾಗುವ ನಿರೀಕ್ಷೆ ಇದೆಯೆಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಪ್ರಕಟಿಸಿದ್ದಾರೆ.
ಬಸ್ ಟಿಕೆಟ್ ದರವನ್ನು 40ಶೇ. ಹೆಚ್ಚಿಸುವಂತೆ ಸಾರಿಗೆ ನಿಗಮಗಳು ಸರಕಾರಕ್ಕೆ ಮನವಿ ಸಲ್ಲಿಸಿದ್ದವು. ಆದರೆ ಪ್ರಸ್ತುತ ಡೀಸೆಲ್ ಬೆಲೆ ಏರಿಕೆಯನ್ನು ಅವಲಂಬಿಸಿ ದರ ಏರಿಕೆ ಮಾಡಲಾಗಿದೆ ಎಂದು ಸಚಿವರು ಹೇಳಿದರು.
ಇಂಧನ, ಬಿಡಿಭಾಗ, ಟಯರು, ಮತ್ತು ವೇತನಕ್ಕೆ ಆದಾಯದ ಕೊರತೆ ಭಾಧಿಸುತ್ತಿರುವುದರಿಂದ ದರ ಏರಿಕೆ ಅನಿವಾರ್ಯ ಎಂದವರು ಹೇಳಿದರು.