224
- ಬೆಂಗಳೂರಿನಿಂದ ವಿಹಾರಕ್ಕೆ ಬಂದ ವ್ಯಕ್ತಿ ಕುಟುಂಬದ ಕಣ್ಮುಂದೆಯೇ ಕುಂಬಳೆ ಕಡಲತೀರದಲ್ಲಿ ಅಪಮೃತ್ಯು..
ಕುಂಬಳೆ : ಬೆಂಗಳೂರಿನಿಂದ ಕುಂಬ್ಳೆ ಪರಿಸರಕ್ಕೆ ಬಂದು ವರ್ಷಾಂತ್ಯದ ರಜಾ ವಿಹಾರ ಮಾಡುತ್ತಿದ್ದ ಕುಟುಂಬದ ಯಜಮಾನ ಸಮುದ್ರ ತೀರ ವಿಹಾರದ ವೇಳೆ ಮುಳುಗಿ ಮೃತಪಟ್ಟ ಘಟನೆ ನಡೆದಿದೆ.
ಬೆಂಗಳೂರು ಜಯನಗರ ನಿವಾಸಿ ನೀರ್ ಮುಹಮ್ಮದ್ ಶಾಫಿ(30) ಎಂಬವರು ಮೃತ ವ್ಯಕ್ತಿಯಾಗಿದ್ದಾರೆ. ಸಂಬಂಧಿಕರ ಜತೆ ಕುಟುಂಬ ಸಮೇತ ಕಾಸರಗೋಡಿಗೆ ಬಂದಿದ್ದ ಅವರು ಮೊಗ್ರಾಲ್ ಪುತ್ತೂರಿನ ಖಾಸಗಿ ರೆಸಾರ್ಟಿನಲ್ಲಿ ವಾಸ್ತವ್ಯ ಹೂಡಿದ್ದರು. ಇಂದು ಸಂಜೆ ಮೊಗ್ರಾಲ್ ನಾಂಗಿ ಕಡಪ್ಪರ (ಕಡಲತೀರ) ದಲ್ಲಿ ಸಮುದ್ರ ವಿಹಾರಕ್ಕೆಂದು ಕುಟುಂಬ ಸಮೇತ ತೆರಳಿದ್ದರು. ಈ ವೇಳೆ ಬಾಲಕನೋರ್ವ ತೆರೆಗೆ ಸಿಲುಕಿದ್ದನ್ನು ಕಂಡು ರಕ್ಷಿಸಲೆಂದು ಸಮುದ್ರಕ್ಕೆ ಜಿಗಿದಾಗ ತೆರೆಯ ಒಳಸುಳಿಗೆ ಸಿಲುಕಿ ಜೀವಾಪಾಯ ಸಂಭವಿಸಿದೆ.
ಮೀನುಗಾರರು ಮತ್ತು ನಾಗರಿಕ ಸಹಾಯದಿಂದ ಮೃತದೇಹ ಪತ್ತೆ ಮಾಡಿ, ಮೇಲೆತ್ತಿ ಕಾಸರಗೋಡು ಸರಕಾರಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಮೃತರು ಪತ್ನಿ ಜಬೈರಿಯ ಹಾಗೂ ಇಬ್ಬರು ಮಕ್ಕಳನ್ನಗಲಿದ್ದಾರೆ