69
ಶ್ರೀ ಶಾರದಾ ಮರಾಟಿ ಸಮಾಜ ಸೇವಾ ಸಂಘ ಪೆರ್ಲ ಇದರ 2025 ರ ನೂತನ ಪದಾಧಿಕಾರಿಗಳ ಆಯ್ಕೆ
ಪೆರ್ಲ 🌀:ಶ್ರೀ ಶಾರದಾ ಮರಾಟಿ ಸಮಾಜ ಸೇವಾ ಸಂಘ ಪೆರ್ಲ ಇದರ 2025 ರ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.
ಅಧ್ಯಕ್ಷರಾಗಿ ಪುಷ್ಪಾ ಅಮೆಕಲ,ಕಾರ್ಯದರ್ಶಿಯರಾಗಿ ಗೋಪಿಕೃಷ್ಣ ಬದಿಯಡ್ಕ , ಖಜಾಂಚಿಯಾಗಿ ಜಗದೀಶ್,
ಉಪಾಧ್ಯಕ್ಷರಾಗಿ ಪುರಂದರ ಮಾಸ್ತರ್ ಪೆರ್ಲ, ಜಂಟಿ ಕಾರ್ಯದರ್ಶಿಯರಾಗಿ ಐತಪ್ಪ ನಾಯ್ಕ,ಸಂಘಟನಾ ಕಾರ್ಯದರ್ಶಿಯರಾಗಿ ಲಕ್ಷ್ಮೀ ಅವರು ಆಯ್ಕೆಯಾದರು
ಶಾರದಾ ಮರಾಟಿ ಮಹಿಳಾ ವೇದಿಕೆ ಪೆರ್ಲ ಇದರ ಅಧ್ಯಕ್ಷರಾಗಿ ವಾರಿಜಾ ಅಡ್ಯನಡ್ಕ ,ಕಾರ್ಯದರ್ಶಿಯರಾಗಿ ನವೀನ್ ಕುಮಾರಿ,
ಉಪಾಧ್ಯಕ್ಷೆಯಾಗಿ ಕುಸುಮಾವತಿ ಬಿ, ಜಂಟಿ ಕಾರ್ಯದರ್ಶಿಯರಾಗಿ ದಿವ್ಯಾ ಮಲಂಗರೆ ಆಯ್ಕೆಯಾಗಿದ್ದಾರೆ.
ಸಮುದಾಯ ಚಿಂತನೆಗಳ ಕಾರ್ಯಕ್ರಮಗಳನ್ನು ಸಂಯೋಜಿಸಿ ಮರಾಟಿ ಸಮುದಾಯದ ಅಭ್ಯುದಯಕ್ಕೆ ಕೆಲಸ ಮಾಡಲು ನೂತನ ಪದಾಧಿಕಾರಿಗಳು ಪ್ರತಿಜ್ಞಾಬದ್ಧರೆಂದು ಪದಾಧಿಕಾರಿಗಳ ಆಯ್ಕೆಯಲ್ಲಿ ಘೋಷಿಸಲಾಯಿತು.