ಪೆರಿಯ ಅವಳಿ ಕೊಲೆ : ಉದುಮ ಮಾಜಿ ಶಾಸಕ ಸಹಿತ 14ಮಂದಿ ಅಪರಾಧಿಗಳೆಂದು ಸಿಬಿಐ ನ್ಯಾಯಾಲಯ ಘೋಷಣೆ
ಕೇರಳ ರಾಜಕೀಯದಲ್ಲೇ ಕೋಲಾಹಲ ಎಬ್ಬಿಸಿದ್ದ ಕಾಸರಗೋಡು ಜಿಲ್ಲೆಯ ಪೆರಿಯ ನಿವಾಸಿ ಯೂತ್ ಕಾಂಗ್ರೆಸ್ ಪ್ರಮುಖರಿಬ್ಬರ ಅವಳಿ ಕೊಲೆ ಪ್ರಕರಣದಲ್ಲಿ ಉದಮ ಮಾಜಿ ಶಾಸಕ ಕೆ.ವಿ.ಕುಂಞಿರಾಮನ್ ಸಹಿತ ಸಿಪಿಎಂ ಪಕ್ಷದ 14 ಮಂದಿ ಆರೋಪಿಗಳು ಅಪರಾಧಿಗಳೆಂದು ನ್ಯಾಯಾಲಯ ನಿರ್ಧರಿಸಿದೆ. ಕೇಸಿನಲ್ಲಿ 10ಮಂದಿಗಳನ್ನು ದೋಷಮುಕ್ತಗೊಳಿಸಲಾಗಿದೆ.
ಕೊಲೆ ಪ್ರಕರಣದಲ್ಲಿ ನೇರ ಪಾಲ್ಗೊಂಡ 1ರಿಂದ 8ರ ತನಕದ ಆರೋಪಿಗಳು ಕೊಲೆ ನಡೆಸಿರುವುದು ಸಾಬೀತಾಗಿದ್ದು ಶಿಕ್ಷಾ ತೀರ್ಪು ಘೋಷಣೆಯಾಗಲಿದೆ. ಎರ್ನಾಕುಳದ ಸಿಬಿಐ ನ್ಯಾಯಾಲಯ ತೀರ್ಪು ಪ್ರಕಟಿಸಿದೆಸಿಬಿಐ ನ್ಯಾಯಾಲಯದಲ್ಲಿ 20ತಿಂಗಳ ಪರ್ಯಂತ ನಡೆದ ವಿಚಾರಣೆಯ ಬಳಿಕ ಇಂದು ತೀರ್ಪು ಪ್ರಕಟಿಸಲಾಯಿತು. 2019 ಫೆ.17ರಂದು ಯೂತ್ ಕಾಂಗ್ರೆಸ್,ಕಾರ್ಯಕರ್ತರಾದ ಪೆರಿಯ ಕಲ್ಯ್ಯೋಟ್ ನಿವಾಸಿ ಶರತ್ ಲಾಲ್, ಕೃಪೇಷ್ ಎಂಬಿವರನ್ನು ರಾಜಕೀಯ ಧ್ವೇಷದಿಂದ ಇರಿದು ಕೊಲೆಗೈಯ್ಯಲಾಗಿತ್ತು. ಪ್ರಕರಣದಲ್ಲಿ ಸಿಪಿಎಂ ನಾಯಕ, ಮಾಜಿ ಶಾಸಕರ ಸಹಿತ 24ಮಂದಿಯನ್ನು ಆರೋಪಿಗಳೆಂದು ಹೆಸರಿಸಲಾಗಿತ್ತು.
ಕೇಸಿನ 1ನೇ ಆರೋಪಿ ಸಿಪಿಎಃಂ ಮುಂದಾಳು ಎ.ಪೀತಾಂಬರನ್, ಮಾಜಿ ಉದುಮ ಶಾಸಕ ಕೆ.ವಿ.ಕುಂಞಿರಾಮನ್, ಕಾಞಂಗಾಡು ಬ್ಲಾಕ್ ಪಂ.ಅಧ್ಯಕ್ಷ ಕೆಮಣಿಕಂಠನ್, ಸಿಪಿಎಂ ಮುಖಂಡರಾದ ಪೆರಿಯ ಎನ್ ಬಾಲಕೃಷ್ಣನ್, ರಾಘವನ್ ವೆಳುತ್ತೋಳಿ ಸಹಿತ 8 ಮಂದಿ ಆರೋಪಿಗಳೆಂದು ನ್ಯಾಯಾಲಯ ಗುರುತಿಸಿದೆ.