ದೆಹಲಿ: ಮಾಜಿ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ (92) ಅವರ ಅಂತ್ಯಕ್ರಿಯೆ ಡಿ.28ರ ಮಧ್ಯಾಹ್ನ ದೆಹಲಿಯ ನಿಗಮ್ ಬೋಧ್ ಘಾಟ್ ನಲ್ಲಿ ಸರಕಾರಿ ಗೌರವೋಪಚಾರಗಳೊಂದಿಗೆ ನಡೆಯಿತು. ಇದರೊಂದಿಗೆ ಭಾರತೀಯ ಅರ್ಥವ್ಯವಸ್ಥೆಗೆ ನವದಿಶೆ ತೋರಿಸಿದ ಮುತ್ಸದ್ದಿ ನಾಯಕನ ಸುದೀರ್ಘ ಸಾಮಾಜಿಕ ಬದುಕೊಂದು ಅಂತ್ಯಗೀತೆ ಹಾಡಿತು.
ಮಧ್ಯಾಹ್ನ 1ಗಂಟೆಗೆ ಸಿಖ್ ಧರ್ಮಾಚಾರದಂತೆ ಆಂತ್ಯಕ್ರಿಯೆಗಳು ನಡೆಯಿತು.
ಇಂದು ಬೆಳಿಗ್ಗೆ ಮೂರನೇ ಮೋತಿಲಾಲ್ ಮಾರ್ಗದಲ್ಲಿರುವ ಮನಮೋಹನ್ ಸಿಂಗ್ ನಿವಾಸದಿಂದ ಪಾರ್ಥಿವ ಶರೀರವನ್ನು ಎಐಸಿಸಿ ಕಚೇರಿಗೆ ತರಲಾಯಿತು. ಕಾಂಗ್ರೆಸ್ ಮುಖಂಡರು ಅಂತ್ಯದರ್ಶನ ಪಡೆದ ಬಳಿಕ ನಿಗಮ್ ಭೋಧ್ ಗೆ ಕೊಂಡೊಯ್ದು ಅಂತಿಮ ವಿಧಿವಿಧಾನಗಳನ್ನು ನಡೆಸಲಾಯಿತು.ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ದ್ರೌಪದಿ ಮುರ್ಮು, ಉಪರಾಷ್ಟ್ರಪತಿ ಜಗದೀಪ್ ಧನ್ಕರ್, ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜ್ನಾಥ್ ಸಿಂಗ್, ವಿರೋಧ ಪಕ್ಷ ನಾಯಕ ರಾಹುಲ್ ಗಾಂಧಿ, ಕಾಂಗೈ ನಾಯಕಿ ಸೋನಿಯ ಗಾಂಧಿ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು. ಭೂತಾನ್ ದೊರೆ ಜಿಗ್ಮ್ ಖೇಸರ್ ವಾಂಗ್ಜುಕ್ ಅವರು ಮನಮೋಹನ್ ಸಿಂಗ್ ಅಂತ್ಯಕ್ರಿಯೆಯಲ್ಲಿ ಭಾಗಿಯಾದರು.