48
- ನಾಳೆ (ಡಿ.29)ವಿ.ಹಿಂ.ಪ ಕಾರ್ಯಾಲಯ “ಪ್ರೇರಣಾ’ ದ ಐದನೇ ವಾರ್ಷಿಕೋತ್ಸವ : ಧರ್ಮ ರಕ್ಷಣಾ ನಿಧಿಯ ಸಮಾರೋಪ
ವಿಶ್ವ ಹಿಂದೂ ಪರಿಷತ್, ಭಜರಂಗದಳ, ಮಾತೃ ಶಕ್ತಿ, ದುರ್ಗಾ ವಾಹಿನಿಗಳ ಕಾಸರಗೋಡು ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಡಿ.29 ರಂದು (ನಾಳೆ) ಭಾನುವಾರ ಸಂಜೆ 4.00 ಗಂಟೆಗೆ ವಿಶ್ವ ಹಿಂದೂ ಪರಿಷತ್ತಿನ ಜಿಲ್ಲಾ ಕಾರ್ಯಾಲಯವಾದ ಹೊಸಂಗಡಿಯ “ಪ್ರೇರಣಾ”ದ ಐದನೇ ವಾರ್ಷಿಕೋತ್ಸವವನ್ನು ಆಚರಿಸಲು ನಿರ್ಧರಿಸಲಾಗಿದೆ.
ಅಂದು ಮಂಜೇಶ್ವರ ಪ್ರಖಂಡ ಸಮಿತಿಯ ಆಶ್ರಯದಲ್ಲಿ “ಸಾರ್ವಜನಿಕ ಭಜನಾ ಸತ್ಸಂಗ” ನಡೆಯಲಿದೆ. ಮಾತ್ರವಲ್ಲದೇ, ಜಿಲ್ಲಾ ಸಮಿತಿ ನೇತೃತ್ವದಲ್ಲಿ ಧರ್ಮ ರಕ್ಷಣಾ ನಿಧಿಯ “ಸಮಾರೋಪ ಸಮಾರಂಭ” ನಡೆಯಲಿದೆ.
ಆದುದರಿಂದ, ಕಾಸರಗೋಡು ಜಿಲ್ಲೆಯಲ್ಲಿನ ಪ್ರತೀ ಸ್ಥಾನೀಯ ಮೇಲ್ಪಟ್ಟು ಹಾಗೂ ಎಲ್ಲಾ ಪದಾಧಿಕಾರಿಗಳು ಈ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಿ ಸಹಕರಿಸಬೇಕಾಗಿ ವಿಶ್ವ ಹಿಂದೂ ಪರಿಷತ್ ಕಾಸರಗೋಡು ಜಿಲ್ಲಾ ಕಾರ್ಯದರ್ಶಿಯಾದ ಗಣೇಶ್ ಮಾವಿನಕಟ್ಟೆ ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿರುತ್ತಾರೆ.