ಅತ್ಯಂತ ಅಪಾಯಕಾರಿ ಮಟ್ಟದಲ್ಲಿ ಹವ್ಯಕ ತಳಿ ಕ್ಷೀಣಿಸುತ್ತಿದೆ..! ಹವ್ಯಕ ಜನಸಂಖ್ಯಾ ಕುಸಿತದ ಬಗ್ಗೆ ವಿಶ್ವ ಹವ್ಯಕ ಸಮ್ಮೇಳನದಲ್ಲಿ ರಾಘವೇಶ್ವರ ಶ್ರೀ ಕಳವಳ

by Narayan Chambaltimar
  • ಅತ್ಯಂತ ಅಪಾಯಕಾರಿ ಮಟ್ಟದಲ್ಲಿ ಹವ್ಯಕ ತಳಿ ಕ್ಷೀಣಿಸುತ್ತಿದೆ..!
  • ಹವ್ಯಕ ಜನಸಂಖ್ಯಾ ಕುಸಿತದ ಬಗ್ಗೆ ವಿಶ್ವ ಹವ್ಯಕ ಸಮ್ಮೇಳನದಲ್ಲಿ ರಾಘವೇಶ್ವರ ಶ್ರೀ ಕಳವಳ

ನಮ್ಮ ದೇಶದಲ್ಲೇ ಅತ್ಯಪರೂಪದ ಭಾರತೀಯ ಮಣ್ಣಿನ ಮೂಲದ ಸ್ವದೇಶಿ ಗೋತಳಿ ಸಂರಕ್ಷಣೆಗೆ ಅಭಿಯಾನ ಮಾಡಿ ಗೋಪ್ರೇಮ ಮೂಡಿಸಿದ್ದು ನೆನಪಿರಬಹುದು. ಈಗ ಅನ್ನಿಸ್ತಿದೆ ಅಂಥದೇ ಮತ್ತೊಂದು ಅಭಿಯಾನ ತಾಜಾ ಹವ್ಯಕ ತಳಿ ಸಂರಕ್ಷಣೆಗೂ ಮಾಡಬೇಕೇನೋ…?ಎಂದು. ಏಕೆಂದರೆ ಜಗತ್ತಿಗೇ ಬೇಕಾದ ಹವ್ಯಕರ ಸಂಖ್ಯೆ ಅತ್ಯಂತ ಅಪಾಯಕಾರಿ ಮಟ್ಟದಲ್ಲಿ ಕ್ಷೀಣಿಸುತ್ತಿದೆ. ಇದು ಅತ್ಯಂತ ಗಂಭೀರವಾಗಿ ಯೋಚಿಸಬೇಕಾದ ವಿಚಾರ. ಹವ್ಯಕರ ಸಂಖ್ಯೆಯೇ ಕ್ಷಯವಾಗುತ್ತಿದೆ. ಇದು ನಿರ್ಲಕ್ಷಿತ ವಿಚಾರವಲ್ಲ. ಹೀಗೇ ಹೋದರೆ ಹವ್ಯಕರ ಗುರುತೇ ಈ ನೆಲದಿಂದ ಅಳಿಯುವ ಭೀತಿ ಇದೆ ಎಂದು ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಆತಂಕ ಪ್ರಕಟಿಸಿದರು.

 

ಬೆಂಗಳೂರಿನಲ್ಲಿ ನಡೆದ ವಿಶ್ವ ಹವ್ಯಕ ಸಮ್ಮೇಳನದಲ್ಲಿ ಮಾತನಾಡಿದ ಅವರು ಹವ್ಯಕ ಜನಸಾಂದ್ರತೆಯ ಕುಸಿತವನ್ನುಲ್ಲೇಖಿಸಿ ಜನಸಂಖ್ಯೆ ವರ್ಧಿಸಬೇಕೆಂದು ಕರೆನೀಡಿದರು.
ಯಾವುದಕ್ಕೂ ಕೊರತೆ ಇಲ್ಲದೇ ಅಮರಾವತಿಗೆ ಸಮಾನವಾಗಿ ಬೆಳೆದಿದ್ದ ಅಯೋಧ್ಯೆಗೆ ಒಂದೇ ಒಂದು ಕೊರತೆ ಇತ್ತು. ಅದೇನೆಂದರೆ ಸಾಮ್ರಾಟ ದಶರಥನಿಗೆ ಮಕ್ಕಳಿರಲಿಲ್ಲ. ಅದರಿಂದಾಗಿ ಅಯೋಧ್ಯೆಯ ಭವಿಷ್ಯವೇ ಪ್ರಶ್ನಾರ್ಹವಾಗಿತ್ತು. ಇದೇ ಪರಿಸ್ಥಿತಿ ಹವ್ಯಕರಿಗೂ ಬಂದಿದೆ. ಹವ್ಯಕರ ಸಭೆ,ಸಮಾರಂಭಗಳಲ್ಲಿ ಹಿರಿಯ ಹಣ್ಣು ತಲೆಗಳನ್ನಲ್ಲದೇ ಯುವ ತಲೆಗಳನ್ನು ಕಾಣುವುದಿಲ್ಲ. ಅವರಿಗಿದೇನೂ ಬೇಡ. ಎಲ್ಲಿಯ ತನಕ ಎಂದರೆ ಮದುವೆ ಬೇಡ, ಮಕ್ಕಳು ಬೇಡ..ಅದೆಲ್ಲ ಹೊರೆ ಎನ್ನುವಷ್ಟಕ್ಕೆ ಯುವ ಪೀಳಿಗೆ ತಲುಪಿದೆ. ಈ ಚಿಂತನೆಯ ಬೆಳವಣಿಗೆಯೇ ಅಪಾಯಕಾರಿ ಎಂದವರು ನುಡಿದರು.

ಸರಕಾರ ಕುಟುಂಬ ಕಲ್ಯಾಣ ಯೋಜನೆ ಹೆಸರಲ್ಲಿ ಜನಸಂಖ್ಯಾ ನಿಯಂತ್ರಣದ ಯೋಜನೆ ತಂದಾಗ ಯಾರು ಇದನ್ನು ಅವಶ್ಯವಾಗಿ ಮೊದಲು ಅನುಸರಿಸಬೇಕಿತ್ತೋ ಅವರು ಅನುಸರಿಸಲಿಲ್ಲ. ಅವರು 10,20,30ಮಕ್ಕಳನ್ನು ಮಾಡುತ್ತಲೇ ಹೋದರು. ಜನಾಂಗ ಬೆಳೆಸಿದರು. ಆದರೆ ಯಾವ ತಳಿ ಜಗತ್ತಿನ ಶಾಂತಿ, ನೆಮ್ಮದಿ, ಅಭಿವೃದ್ಧಿಗೆ ಅವಶ್ಯವಿತ್ತೋ , ಯಾವ ತಳಿಯಿಂದ ವಿಶ್ವಕ್ಕೆ ಶುಭವಾಗುತಿತ್ತೋ ಆ ತಳಿ ಜನಸಂಖ್ಯೆ ನಿಯಂತ್ರಿಸಿಕೊಂಡರು. ಪರಿಣಾಮ ಇಂದು ಮದುವೆ ಬೇಡ, ಮಕ್ಕಳು ಬೇಡ ಎನ್ನುವಲ್ಲಿಗೆ ಮುಟ್ಟಿದೆ. ಜತೆಗೆ ಸಂಖ್ಯೆ ಕ್ಷಯವಾಗುತ್ತಿದೆ ಎಂದವರು ಉಲ್ಲೇಖಿಸಿದರು.

ಹವ್ಯಕರ ನಿನ್ನೆ, ಇಂದು, ನಾಳೆ ಎಂದು ಯೋಚಿಸಬೇಕು. ಹವ್ಯಕ ಸಮಾಜಕ್ಕಂಟಿದ ಕ್ಷಯ ಪರಿಹಾರಕ್ಕೆ ಔಷಧಿ ಮದುವೆ ಬೇಡ, ಮಕ್ಕಳು ಬೇಡ ಎಂಬ ಮೋಜಿನ ಜೀವನವಲ್ಲ. ಬದಲು ಮದುವೆ ಬೇಕು, ಮನೆತುಂಬ ಮಕ್ಕಳಿರಬೇಕು ಎಂದಾಗಬೇಕು ಎಂದವರು
ನುಡಿದರು.

You may also like

Are you sure want to unlock this post?
Unlock left : 0
Are you sure want to cancel subscription?
-
00:00
00:00
Update Required Flash plugin
-
00:00
00:00