ಅಡ್ಡಹೊಳೆ ಗ್ರಾಮದಲ್ಲಿ ಸಂಕೀರ್ತನೆಯೊಂದಿಗೆ ಸಂತರ ಪಾದಯಾತ್ರೆ : ಹಿಂದೂ ಸಮಾಜದ ಧರ್ಮ ಜಾಗೃತಿಗೆ ಸಂತರ ಕಾಲ್ನಡಿಗೆ

ಹಿಂದೂ ಸಮಾಜದ ತಳಮಟ್ಟದಲ್ಲಿ ಧರ್ಮ ಜಾಗೃತಿ, ಸನಾತನ ಸಂಸ್ಕೃತಿ ಪಾಲನೆಯಾಗಬೇಕು:

by Narayan Chambaltimar

ಸ್ವಾಮೀಜಿಗಳೆನಿಸಿಕೊಂಡ ಸಂತರುಗಳೆಲ್ಲ ಹಿಂದೂ ಸಮಾಜದ ಮನೆ, ಮನೆ ಸಂದರ್ಶಿಸಿ ಅವರಲ್ಲಿ ಧರ್ಮಪ್ರಜ್ಞೆ ಮೂಡಿಸಬೇಕು ಮತ್ತು ಸನಾತನೀಯ ಆಚಾರ, ವಿಚಾರಗಳು ಪಾಲಿಸುವಂತೆ ಜಾಗೃತಿ ಮೂಡಿಸುವಂತೆ ಕಾರ್ಯತತ್ಪರರಾಗಬೇಕೆಂಬ ಕಳಕಳಿಯೊಂದಿಗೆ ಸಂತರ ಜತೆ ಸಂಕೀರ್ತನೆಯೊಂದಿಗೆ ನಾಗರಿಕರು ಮನೆ,ಮನೆ ಪಾದಯಾತ್ರೆ ನಡೆಸಿದರು.

 

ಡಿ.27 ರಂದು ದ.ಕ ಜಿಲ್ಲೆಯ ಕಡಬ ತಾಲೂಕಿನ ಶಿರಾಡಿ ಸಮೀಪದ ಅಡ್ಡ ಹೊಳೆ ಗ್ರಾಮದಲ್ಲಿ ಸಂಕೀರ್ತನ ಯಾತ್ರೆ ಮತ್ತು ಸ್ವಾಮೀಜಿಗಳ ಪಾದಯಾತ್ರೆ ನಡೆಯಿತು. ಈ ವೇಳೆ ಗ್ರಾಮದ ಭಕ್ತಾದಿಗಳು ಆದರೋಪಚಾರದಿಂದ ಸ್ವಾಮೀಜಿಗಳನ್ನು ಬರಮಾಡಿಕೊಂಡರು.

ಅಖಿಲ ಭಾರತ ಸಂತ ಸಮಿತಿಯ ರಾಜ್ಯಾಧ್ಯಕ್ಷರಾದ ಮಹಾಮಂಡಲೇಶ್ವರ ಓಂ ಶ್ರೀ ವಿದ್ಯಾನಂದ ಸರಸ್ವತಿ ಮತ್ತು ಓಂ ಶ್ರೀ ಶಿವ ಜ್ಞಾನಮಯಿ ಸರಸ್ವತಿಯವರು ಪಾದಯಾತ್ರೆ ಯಲ್ಲಿ ಪಾಲ್ಗೊಂಡು ಆಶೀರ್ವಚನ ನೀಡಿದರು.
ಈ ಸಂದರ್ಭ ಮಾತನಾಡಿದ ಅವರು ಹಿಂದೂ ಸಮಾಜದ ತಳಮಟ್ಟದಲ್ಲಿ ಧರ್ಮ ಜಾಗೃತಿಯಾಗಬೇಕು. ಮನೆಮನೆಗಳಲ್ಲಿ ಹಿಂದೂ ಆಚಾರನುಷ್ಠಾನಗಳು ಪಾಲನೆಯಾಗಬೇಕು. ಧರ್ಮ ಜಾಗೃತಿ ಎಂಬುದು ಪ್ರದರ್ಶನದ ವಿಷಯವಲ್ಲ, ಅದು ಅಂತರಂಗದ ಜಾಗೃತಿ. ಅದನ್ನು ಮೂಡಿಸಲು ಸಂತರು ಮತ್ತು ಸಮಾಜ ಒಂದಾಗಿ ಎಲ್ಲ ವರ್ಗದ ಜನರನ್ನು ಬೆಸೆದು, ಬೆರೆಯಬೇಕೆಂದರು.

ಈ ಸಂದರ್ಭದಲ್ಲಿ ವಿಶ್ವ ಹಿಂದು ಪರಿಷತ್ ಧರ್ಮಪ್ರಚಾರ ಸಮಿತಿಯ ರಾಜ್ಯ ಸಂಚಾಲಕ ಸೂರ್ಯನಾರಾಯಣ ,
ವಿಶ್ವ ಹಿಂದೂ ಪರಿಷತ್ ಪುತ್ತೂರು ಜಿಲ್ಲಾ ಕಾರ್ಯದರ್ಶಿ ನವೀನ್ ನೆರಿಯ,
ಕಡಬ ತಾಲೂಕು ಧರ್ಮ ಪ್ರಚಾರ ಪ್ರಮುಖರಾದ ಪ್ರಮೋದ್
ಅಧ್ಯಕ್ಷರಾದ ಗಣಪತಿ ಭಟ್.ಮತ್ತು ಊರಿನ ಗಣ್ಯರು ಪಾಲ್ಗೊಂಡಿದ್ದರ

 

 

You may also like

Are you sure want to unlock this post?
Unlock left : 0
Are you sure want to cancel subscription?
-
00:00
00:00
Update Required Flash plugin
-
00:00
00:00