- ಏತಡ್ಕ ಪ್ರಕೃತಿ ಫಾರ್ಮ್ಸ್ ನಲ್ಲೊಂದು ವಿಶಿಷ್ಟ ಕಾರ್ಯಕ್ರಮ : ನಾಡಿನ ಬ್ರಹ್ಮಕಲಶ ಸಿದ್ಧತೆಗೆ ಕಲೆಯ ಬೆಸುಗೆ
- ಬ್ರಹ್ಮಕಲಶಕ್ಕೆ ಸಜ್ಜಾಗುವ ದೇವಳಕ್ಕೆ ಶಿವನ ಚಿತ್ರ ಬರೆದು ಚಿತ್ರಾರ್ಪಣೆಗೈದ ಪ್ರತಿಭೆಗಳು
ಏತಡ್ಕ :
ಚಿತ್ರ ರಚನೆಯಲ್ಲಿ ಆಸಕ್ತಿ ಇರುವವರಿಗಾಗಿ ಒಂದು ದಿನದ ಚಿತ್ರಾರ್ಪಣಂ ಕಾರ್ಯಾಗಾರ ಏತಡ್ಕ ಶ್ರೀ ಸದಾಶಿವ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿಯಿಂದ ಶಿವಾರ್ಪಣಂ ಎನ್ನುವ ಯೋಜನೆಯಂತೆ ಏತಡ್ಕ ದೇವಸ್ಥಾನದ ಸಮೀಪ ದ ‘ಪ್ರಕೃತಿ ಫಾರ್ಮ್ಸ್ ‘ ನಲ್ಲಿ ಇತ್ತೀಚೆಗೆ ನೆರವೇರಿತು.
ದೇವರ ಸಾನಿಧ್ಯದ ಸಂಕೇತವಾದ ‘ಓಂ’ ಚಿತ್ರ ಬಿಡಿಸುವುದರ ಮೂಲಕ ಹಿರಿಯ ಕಲಾವಿದರಾದ ಶ್ರೀ ಬಾಲ ಮಧುರಕಾನನ ಉದ್ಘಾಟಿಸಿದರು.
‘ ಚಿತ್ರ ಶಿಬಿರಗಳಿಂದ ವೈಯಕ್ತಿಕ ಮಟ್ಟವನ್ನು ಸುಧಾರಿಸಲು ಸಾಧ್ಯ.ನಮ್ಮೊಳಗಿನ ಕೊರತೆಗಳನ್ನು ಕಂಡುಕೊಂಡು ಇನ್ನಷ್ಟು ಅಧ್ಯಯನದಲ್ಲಿ ತೊಡಗಬಹುದು.ಇನ್ನೊಬ್ಬರು ರಚಿಸುವ ರೀತಿ, ಬಳಸುವ ಮಾಧ್ಯಮ, ಸಾಮಗ್ರಿಗಳ ಅರಿವಾಗುತ್ತದೆ.ಬೇರೆಲ್ಲೂ ಈ ವಾತಾವರಣ ಇಲ್ಲ.ಬ್ರಹ್ಮ ಕಲಶೋತ್ಸವ ಸಂದರ್ಭದಲ್ಲಿ ಕಲೆ ಮತ್ತು ದೇವಸ್ಥಾನದ ಸಂಬಂಧವನ್ನು ಊರ್ಜಿತಗೊಳಿಸುವಲ್ಲಿನ ದೂರದರ್ಶಿತ್ವವನ್ನು ಪ್ರಶಂಸಿಸಲೇ ಬೇಕು ಎಂಬುದಾಗಿ ಉದ್ಘಾಟಕರ ಮಾತನ್ನಾಡಿದರು.
ಬ್ರಹ್ಮ ಕಲಶೋತ್ಸವ ಸಮಿತಿಯ ಅಧ್ಯಕ್ಷ ಶ್ರೀ ವೈ ಶಾಮ ಭಟ್ ಅಧ್ಯಕ್ಷತೆ ವಹಿಸಿದ್ದರು.ವೇದಿಕೆಯಲ್ಲಿ ಚಿತ್ರಕಲಾ ಅಧ್ಯಾಪಕ ಸತೀಶ್ ಮಾಸ್ಟರ್ ವಾಣೀನಗರ ಹಾಗೂ ಹವ್ಯಕ ಮಂಡಲ ವಿದ್ಯಾರ್ಥಿ ವಾಹಿನಿ ಪ್ರಮುಖ ಕುಳಮರ್ವ ಶ್ಯಾಮ ಪ್ರಸಾದ್ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಚಿತ್ರ ಕಲಾ ಅಧ್ಯಾಪಕರಾದ ಸತೀಶ್ ಮಾಸ್ಟರ್ ವಾಣೀನಗರ ಹಾಗೂ ಜಯಪ್ರಕಾಶ್ ಶೆಟ್ಟಿ ಮಂಜೇಶ್ವರ ಚಿತ್ರ ಬಿಡಿಸುವ ಪ್ರಾತ್ಯಕ್ಷಿಕೆ ನೀಡಿ ಮಾರ್ಗದರ್ಶನವಿತ್ತರು.
ಕು.ಪೂರ್ವಿ ಕುಂಡಾಪು ಪ್ರಾರ್ಥನೆಗೈದಳು.ಸಮಿತಿಯ ಸಂಯೋಜಕರಾದ ಡಾ.ವೈ.ವಿ.ಕೃಷ್ಣಮೂರ್ತಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.ಇನ್ನೋರ್ವ ಸಂಯೋಜಕ ಚಂದ್ರಶೇಖರ ಏತಡ್ಕ ಕಾರ್ಯಕ್ರಮ ನಿರೂಪಿಸಿದರು.
ಕಾಸರಗೋಡು ಹಾಗೂ ಕರ್ನಾಟಕದ ಆಸಕ್ತ ವಿದ್ಯಾರ್ಥಿಗಳು ಭಾಗವಹಿಸಿ ಶಿವನ ಕುರಿತು ಚಿತ್ರ ಬಿಡಿಸಿದರು.ಶಿಬಿರಾರ್ಥಿಗಳಿಗೆ ಬ್ರಹ್ಮ ಕಲಶೋತ್ಸವ ಸಮಿತಿ ಅಧ್ಯಕ್ಷರು ಪ್ರಶಂಸಾ ಪತ್ರ ವಿತರಿಸಿದರು. ಅಧ್ಯಾಪಕರಾದ ನವೀನ್ ಮಾಸ್ಟರ್ ಪುತ್ರಕಳ, ಮುರಳೀಧರ್ ಮಾಸ್ಟರ್, ಹರೀಶ್ ಪಾಟಾಳಿ.ಬಿ.ಇಚ್ಲಂಪಾಡಿಚಿತ್ರ ಕಲಾ ಅಧ್ಯಾಪಕರಾದ ಸೋಮನಾಥನ್ ಮಾಸ್ಟರ್, ಶ್ರೀಮತಿ ಶಾಂತಿ, ಹರೀಶ್ ಮಾಸ್ಟರ್ ನೀರ್ಚಾಲು, ಜಯಪ್ರಕಾಶ್ ಶೆಟ್ಟಿ ಮಂಜೇಶ್ವರ ಮುಂತಾದವರು ಸಹಕರಿಸಿದರು