- ಉಪ್ಪಳದಲ್ಲಿ ಎಟಿಎಂಗೆ ತುಂಬಲು ತಂದ 50ಲಕ್ಷ ದರೋಡೆಗೈದ ಪ್ರಧಾನ ಆರೋಪಿ ತಮಿಳುನಾಡಿನಿಂದ ಸೆರೆ
ಉಪ್ಪಳದಲ್ಲಿ ಎಟಿಎಂಗೆ ತುಂಬಲು ತಂದ 50ಲಕ್ಷ ರೂಗಳನ್ನು ವಾಹನ ತಡೆದು, ಹಾಡುಹಗಲೇ ಅಪಹರಿಸಿದರೋಡೆಗೈದು ತಲೆಮರೆಸಿಕೊಂಡಿದ್ದ ಕಖ್ಯಾತ ಆರೋಪಿಯನ್ನು ಬಂಧಿಸಲಾಗಿದೆ.
ಜಿಲ್ಲಾ ಪೋಲೀಸ್ ವರಿಷ್ಠರ ನಿರ್ದೇನದಂತೆ ವೇಷಪಲ್ಲಟಗೈದು ತನಿಖಾ ನಿರತರಾದ ಪೋಲಿಸ್ ತಂಡ ಆರೋಪಿಯನ್ನು ಬಂಧಿಸಿದೆ.
ತಮಿಳು ನಾಡು ತೃಚ್ಛಿ ರಾಂಜೀನಗರ ತಿರುಟ್ಟಾಗ್ರಾಮದ ಕಾರ್ವರ್ಣನ್ (28) ಎಂಬಾತ ಬಂಧಿತ ವ್ಯಕ್ತಿಯಾಗಿದ್ದಾನೆ.
ಕಳೆದ 2024 ಮಾರ್ಚ್ ತಿಂಗಳಲ್ಲಿ ಉಪ್ಪಳ ಪೇಟೆಯಲ್ಲಿ ಎಟಿಎಂ ಗೆ ಹಣ ತುಂಬಿಸಲೆಂದು ನಿಂತಿದ್ದ ವಾಹನದಿಂದ ಈತ ಮತ್ತು ದರೋಡೆ ತಂಡ ಸೇರಿ 50ಲಕ್ಷ ರೂ ಅಪಹರಿಸಿದ್ದನು. ಪ್ರದೇಶದ ಸಿಸಿಟಿವಿ ಮೂಲಕ ಆರೋಪಿಗಳನ್ನು ಗುರುತಿಸಿ ಪೋಲೀಸರು ಕಾರ್ಯಾಚರಣೆ ನಡೆಸಿದ್ದರು.
ಪ್ರಧಾನ ಆರೋಪಿ ಕಾರ್ವರ್ಣನ್ ತಮಿಳುನಾಡಿನ ತನ್ನೂರಿಗೆ ತಲುಪಿದ್ದಾನೆಂಬ ಸುಳಿವಿನ ಹಿನ್ನೆಲೆಯಲ್ಲಿ ವೇಷ ಮರೆಸಿ ತೆರಳಿದ ಪೋಲೀಸರು ಸಾಹಸಿಕವಾಗಿ ಸಿನಿಮೀಯ ರೀತಿಯಲ್ಲಿ ಆರೋಪಿಯನ್ನು ಬೆನ್ನಟ್ಟಿ ಸೆರೆಹಿಡಿದರು. ಪ್ರಕರಣದಲ್ಲಿ ಇನ್ನೋರ್ವ ಆರೋಪಿಯನ್ನು ಈ ಮೊದಲೇ ಬಂಧಿಸಲಾಗಿತ್ತು. ಬಂಧಿತನನ್ನು ಕಾಸರಗೋಡಿಗೆ ಕರೆ ತರಲಾಗಿದೆ.