96
- ನ್ಯಾಯಾಲಯದಲ್ಲಿ ಮಹಿಳಾ ಸಿಬಂದಿಯೊಡನೆ ಅನುಚಿತ ವರ್ತನೆ : ನ್ಯಾಯಾಧೀಶರ ಅಮಾನತು
ಕೋಝಿಕ್ಕೋಡ್ : ನ್ಯಾಯಾಲಯದಲ್ಲಿ ಮಹಿಳಾ ಉದ್ಯೋಗಿಯೊಡನೆ ಅನುಚಿತ ವರ್ತಿಸಿ, ಸ್ತ್ರೀತ್ವಕ್ಕೆ ಅವಮಾನವಾಗುವಂತೆ ಮಾತನಾಡಿದ ಜಿಲ್ಲಾ ನ್ಯಾಯಾಧೀಶರನ್ನು ನ್ಯಾಯಾಂಗ ಸೇವೆಯ ಹುದ್ದೆಯಿಂದ ಅಮಾನತು ಮಾಡಲಾಗಿದೆ. ಜಡ್ಜಿಂಗ್ ಪ್ಯಾನಲ್ ವರದಿಯನುಸಾರ ಕೇರಳಾ ಹೈಕೋರ್ಟ್ ಅಡ್ಮಿನಿಸ್ಟ್ರೇಟಿವ್ ಕಮಿಟಿ ಅಮಾನತು ನಿರ್ಧಾರ ಕೈಗೊಂಡಿದೆ.
ಕಲ್ಲಿಕೋಟೆ ಜಿಲ್ಲಾ ನ್ಯಾಯಾಧೀಶರಾಗಿದ್ದ ಎಂ. ಶುಹೈಬ್ ಎಂಬವರು ನ್ಯಾಯಾಲಯದ ತನ್ನ ಛೇಂಬರಿನಲ್ಲಿ ಕೋರ್ಟಿನ ಮಹಿಳಾ ಉದ್ಯೋಗಿಯೊಬ್ಬರನ್ನು ಅವಮಾನಿಸಿದ್ದರು. ಈ ಹಿನ್ನೆಲೆಯಲ್ಲಿ ಮಹಿಳೆ ದೂರು ನೀಡದೇ ಇದ್ದರೂ, ನ್ಯಾಯಾಂಗದ ಸತ್ಕೀರ್ತಿಗೆ ಅವಮಾನಕಾರಿ ನಡತೆ ಎಂಬ ಹಿನ್ನೆಲೆಯಲ್ಲಿ ಕೋಝಿಕ್ಕೋಡ್ ಪ್ರಿನ್ಸ್ಪಲ್ ಜಿಲ್ಲಾ ನ್ಯಾಯಾಧೀಶರು ನೀಡಿದ ವರದಿಯಂತೆ ಅಮಾನತು ಮಾಡಲಾಗಿದೆ. ಪ್ರಕರಣದಲ್ಲಿ ಈ ಮೊದಲೇ ಅವರನ್ನು ವರ್ಗಾಯಿಸಲಾಗಿತ್ತು.