- ಮಾನ್ಯ ಚುಕ್ಕಿನಡ್ಕ ಅಯ್ಯಪ್ಪ ಭಜನಾ ಮಂದಿರಕ್ಕೆ 30ನೇ ವಾರ್ಷಿಕ ಸಂಭ್ರಮ : ಸಾಧಕ ವೈದ್ಯ ಡಾ. ಜನಾರ್ಧನ ನಾಯ್ಕ್ ದಂಪತಿಗೆ ಹುಟ್ಟೂರ ಸನ್ಮಾನ
ಮಾನ್ಯ ಚುಕ್ಕಿನಡ್ಕ ಶ್ರೀ ಅಯ್ಯಪ್ಪ ಭಜನಾ ಮಂದಿರದ ಮೂವತ್ತನೇ ವಾರ್ಷಿಕೋತ್ಸವ ನಡೆಯಿತು. ಈ ಸಂದರ್ಭ (ಇಂದು ಡಿ.21 ಪೂರ್ವಾಹ್ನ) ವೈದ್ಯಕೀಯ ಕ್ಷೇತ್ರದಲ್ಲಿ ಸತತ ಸಾಧನೆಗೈದ ಕಾಸರಗೋಡು ಸರಕಾರಿ ಆಸ್ಪತ್ರೆಯ ಹಿರಿಯ ವೈದ್ಯಾಧಿಕಾರಿ ಡಾ.ಜನಾರ್ಧನ ನಾಯ್ಕ್ ಅವರನ್ನು ದಂಪತಿ ಸಹಿತ ಸನ್ಮಾನಿಸಿ ಹುಟ್ಟೂರ ಅಭಿನಂದನೆ ಸಲ್ಲಿಸಲಾಯಿತು.
ಅಯ್ಯಪ್ಪ ಮಂದಿರದಲ್ಲಿ ಬೆಳಿಗ್ಗೆ ನಡೆದ ಸಭಾ ಕಾರ್ಯಕ್ರಮದಲ್ಲಿ ಎಡನೀರು ಮಠದ ಶ್ರೀ ಸಚ್ಛಿದಾನಂದ ಭಾರತೀ ಶ್ರೀಗಳ ಆಶೀರ್ವಾದಗಳೊಂದಿಗೆ ವೈದ್ಯರಿಗೆ ಹುಟ್ಟೂರ ಸನ್ಮಾನ ನಡೆಯಿತು. ಈ ಸಂದರ್ಭ ಆಶೀರ್ವಚನವನ್ನಿತ್ತು ಮಾತನಾಡಿದ ಶ್ರೀಗಳು ” ಬದುಕಿನಲ್ಲಿ ಸಾಧನೆಗೆ ದೈವಾನುಗ್ರಹ ಬೇಕು. ಆದ್ದರಿಂದ ಪ್ರತಿಯೊಬ್ಬರ ಏಳಿಗೆಗೂ ಭಗವಂತನ ಮೊರೆ ಹೋಗಬೇಕು” ಎಂದರು
ಮಂದಿರದ ಗೌರವಾಧ್ಯಕ್ಷ ಗೋಪಾಲಕೃಷ್ಣ ಪೈ ಬದಿಯಡ್ಕ ಅಧ್ಯಕ್ಷತೆ ವಹಿಸಿದರು. ಬ್ರಹ್ಮಶ್ರೀ ಉಳಿತ್ತಾಯ ವಿಷ್ಣು ಅಸ್ರ ದೀಪ ಬೆಳಗಿಸಿ ಸಭಾ ಕಾರ್ಯಕ್ರಮ ಉದ್ಘಾಟಿಸಿದರು.
ಡಾ. ಜನಾರ್ಧನ ನಾಯ್ಕ್ ಅವರ ಕುರಿತು ಸುಂದರ ಶೆಟ್ಟಿ ಕೊಲ್ಲಂಗಾನ ಅಭಿನಂದನಾ ಭಾಷಣ ಮಾಡಿದರು..
ನಿವೃತ್ತ ಅಧ್ಯಾಪಕ, ಕವಿ ಗೋಪಾಲ ಮಾಸ್ತರ್ ಚುಕ್ಕಿನಡ್ಕ, ಮಂದಿರದ ಕುಂಞಿಕಣ್ಣ ಗುರುಸ್ವಾಮಿ, ಕಾರ್ಮಾರು ಕ್ಷೇತ್ರ ಜೀರ್ಣೌದ್ಧಾರ ಸಮಿತಿ ಪ್ರ.ಕಾರ್ಯದರ್ಶಿ ಮಹೇಶ ವಳಕುಂಜ, ಬ್ಲಾಕ್ ಪಂ. ಸದಸ್ಯೆ ಅಶ್ವಿನಿ ಭಟ್, ಗ್ರಾ.ಪಂ. ಸದಸ್ಯ ಶ್ಯಾಮಪ್ರಸಾದ್ ಮಾನ್ಯ, ವಿ.ಹಿಂ.ಪ ಸಾಮರಸ್ಯ ವಿಭಾಗ ಪ್ರಮುಖ್ ಮಂಜುನಾಥ ಮಾನ್ಯ, ಅಯ್ಯಪ್ಪ ಸೇವಾಸಂಘದ ಅಧ್ಯಕ್ಷ ಕೃಷ್ಣಕುಮಾರ್ ಚುಕ್ಕಿನಡ್ಕ ಮೊದಲಾದವರು ಉಪಸ್ಥಿತರಿದ್ದರು.
ಮಂದಿರದ ಕಾರ್ಯದರ್ಶಿ ಪ್ರಕಾಶ್ ಕಾರ್ಮಾರ್ ಸ್ವಾಗತಿಸಿ, ಹರಿಪ್ರಸಾದ್ ಚುಕ್ಕಿನಡ್ಕ ವಂದಿಸಿದರು.