ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘಟನೆಯ ಅಧ್ಯಾಪಕರ ಕ್ರೀಡಾಕೂಟವು ಕುಂಬಳೆ ಜಿ.ಎಸ್.ಬಿ.ಎಸ್ ಶಾಲಾ ಮೈದಾನದಲ್ಲಿ ಜರಗಿತು. ಕೇಂದ್ರ ಸಮಿತಿ ಅಧ್ಯಕ್ಷರಾದ ಶ್ರೀನಿವಾಸ್ ರಾವ್ ಪಿ.ಬಿ ಅಧ್ಯಕ್ಷತೆ ವಹಿಸಿದ್ದರು
. ಕ್ರೀಡಾಕೂಟದ ಉದ್ಘಾಟನೆಯನ್ನು ಕುಂಬಳೆ ಶಾಲಾ ಮುಖ್ಯೋಪಧ್ಯಾಯರಾದ ವಿಜಯಕುಮಾರ್ ಪಿ ನೆರವೇರಿಸಿದರು.ಕನ್ನಡ ಅಧ್ಯಾಪಕರ ಒಗ್ಗಟ್ಟಿಗೆ ಈ ಕ್ರೀಡಾಕೂಟವು ಸಹಕಾರಿಯಾಗಲಿಯೆಂದು ಉದ್ಘಾಟಿಸಿ ಮಾತನಾಡಿದರು.

ನಿವೃತ್ತ ದೈಹಿಕ ಶಿಕ್ಷಕರಾದ ಶಶಿಕಾಂತ್ ಬಲ್ಲಾಳ್ ಹಾಗೂ ವೆಂಕಟರಮಣ ಭಟ್ ರಾಜ್ಯ ಸಮ್ಮೇಳನದ ಆಮಂತ್ರಣವನ್ನು ಬಿಡುಗಡೆಗೊಳಿಸಿದರು. ಕೇಂದ್ರ ಸಮಿತಿಯ ಉಪಾಧ್ಯಕ್ಷರಾದ ಉಮೇಶ, ಪ್ರಭಾವತಿ ಕೆದಿಲಾಯ, ಅಧಿಕೃತ ವಕ್ತಾರರಾದ ಸುಕೇಶ, ಕೋಶಾಧಿಕಾರಿ ಶರತ್ ಕುಮಾರ್ , ಮಂಜೇಶ್ವರ ಉಪಜಿಲ್ಲಾ ಅಧ್ಯಕ್ಷರಾದ ಜಯರಾಮ, ಕಾರ್ಯದರ್ಶಿ ಜೀವನ್ ಕುಮಾರ್ ಉಪಸ್ಥಿತರಿದ್ದರು. ಕೇಂದ್ರ ಸಮಿತಿ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಕುಮಾರ್ ಶೆಟ್ಟಿ ಸ್ವಾಗತಿಸಿ ಕಾರ್ಯದರ್ಶಿ ಪ್ರದೀಪ್ ಕೆ.ವಿ ವಂದಿಸಿದರು. ಸಂಘಟನಾ ಕಾರ್ಯದರ್ಶಿ ಜಬ್ಬಾರ್ ನಿರೂಪಿಸಿದರು.










