100
- ಸಮಾಜ ಸೇವಕ ಎ.ಕೆ.ಶಂಕರ್ ಆದೂರು ಮಲಬಾರ್ ದೇವಸ್ವಂ ಮಂಡಳಿ ಸದಸ್ಯರಾಗಿ ನೇಮಕ
ಮಲಬಾರ್ ದೇವಸ್ವಂ ಮಂಡಳಿ ಸದಸ್ಯರಾಗಿ ಎ.ಕೆ. ಶಂಕರ್ ಆದೂರು ಇವರು ನೇಮಕಗೊಂಡಿದ್ದಾರೆ. ನೂತನ ಸದಸ್ಯರನ್ನು ಇಂದು ಪಯ್ಯನ್ನೂರು ಸುಬ್ರಹ್ಮಣ್ಯ ದೇವಾಲಯದಲ್ಲಿ ನಡೆದ ದೇವಸ್ವಂ ಕಾರ್ಯಕ್ರಮದಲ್ಲಿ ದೇವಸ್ವಂ ಮಂಡಳಿ ಅಧ್ಯಕ್ಷ ಎಂ.ಆರ್. ಮುರಳಿ ಶಾಲು ಹೊದಿಸಿ ಗೌರವ ಸನ್ಮಾನವಿತ್ತು ಮಂಡಳಿ ಗೆ ಬರಮಾಡಿಕೊಂಡರು.
ಕಾಸರಗೋಡು ಜಿಲ್ಲೆಯ ಆದೂರು ನಿವಾಸಿಯಾದ ಎ.ಕೆ.ಶಂಕರ್ ಸಾಮಾಜಿಕ, ರಾಜಕೀಯ ರಂಗದಲ್ಲಿ ಮೂರು ದಶಕಕ್ಕೂ ಅಧಿಕ ಕಾಲದಿಂದ ದುಡಿಯುತ್ತಿದ್ದಾರೆ. ನೂತನ ಸದಸ್ಯರಾಗಿ ನಿಯುಕ್ತರಾದ ಅವರಿಗೆ ಮಧೂರು ಮದರು ಮಹಾಮಾತೆ ಸಮಿತಿ ಮತ್ತು ಮೊಗೇರ ಸಮಾಜ ಅಭಿನಂಧನೆ ತಿಳಿಸಿದೆ. ಡಿ.25ರಂದು ಬದಿಯಡ್ಕದ ಸಂಸ್ಕೃತಿ ಭವನದಲ್ಲಿ ಮೊಗೇರ ಸಮಾಜದ ವತಿಯಿಂದ ಅವರಿಗೆ ಅಭಿನಂದನೆ ಸಲ್ಲಿಸಲಾಗುವುದೆಂದು ಪ್ರಕಟಣೆ ತಿಳಿಸಿದೆ.