46
ಪುಷ್ಪ -2 ಪ್ರೀಮಿಯಂ ಷೋ ವೇಳೆ ನಡೆದ ಕಾಲ್ತುಳಿತ : ಗಾಯಗೊಂಡಿದ್ದ ಮಗು ಸಾವು
ಹೈದರಾಬಾದ್ : ನಟ ಅಲ್ಲು ಅರ್ಜುನ್ ಅಭಿನಯದ ಪುಷ್ಪ -2ಸಿನಿಮದ ಪ್ರೀಮಿಯರ್ ಷೋ ದಿನದಂದು ಕಾಲ್ತುಳಿತಕ್ಕೊಳಗಾಗಿ ಚಿಕಿತ್ಸೆಯಲ್ಲಿದ್ದ ಮಗು ಮೃತಪಟ್ಟಿದೆ. ಮಗು ಶ್ರೀ ತೇಜ (9) ಮಿದುಳಿನ ಆಘಾತದಿಂದ ಸಾವು ಸಂಭವಿಸಿತೆಂದು ದೃಢೀಕರಿಸಲಾಗಿದೆ.
ಸಿನಿಮದ ಮೊದಲ ಪ್ರದರ್ಶನದ ವೇಳೆ ಉಂಟಾದ ಕಾಲ್ತುಳಿತದಲ್ಲಿ ಮಗುವಿನ ತಾಯಿ, ಗೃಹಿಣಿ ರೇವತಿ(35) ಮೃತಪಟ್ಟಿದ್ದರು. ಈ ಘಟನೆಯ ಹಿನ್ನೆಲೆಯಲ್ಲಿ ಚಿತ್ರ ಮಂದಿರ ಮಾಲಿಕರ ಸಹಿತ ನಟ ಅಲ್ಲು ಅರ್ಜುನ್ ನನ್ನು ಹೈದರಾಬಾದ್ ಪೋಲೀಸರು ಬಂಧಿಸಿದ್ದರು. ಬಳಿಕ ಒಂದು ರಾತ್ರಿ ಜೈಲಲ್ಲಿ ಕಳೆದಿದ್ದ ನಟನನ್ನು ಅನಂತರ ಜಾಮೀನಿನಲ್ಲಿ ಬಿಡುಗಡೆ ಮಾಡಲಾಗಿತ್ತು. ಪ್ರಸ್ತುತ ಪ್ರಕರಣದಲ್ಲಿ ಮೃತ ಮಹಿಳೆಯ ಕುಟುಂಬಕ್ಕೆ 25ಲಕ್ಷ ರೂ ಸಹಾಯಧನ ನೀಡಿದ್ದ ನಟ ಅಲ್ಲೂಅರ್ಜುನ್ ತನ್ನ ವಿರುದ್ನದ ಎಫ್.ಐ.ಆರ್ ರದ್ದು ಪಡಿಸಲು ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದರು.