- ಕಾಸರಗೋಡಿನ ಜನಪ್ರಿಯ ವೈದ್ಯ ಡಾ.ಜನಾರ್ಧನ ನಾಯ್ಕ್ ಅವರಿಗೆ ಮತ್ತೊಮ್ಮೆ ಫೆಲೋಶಿಪ್ ಪುರಸ್ಕಾರ
ಕಾಸರಗೋಡು ಜನರಲ್ ಆಸ್ಪತ್ರೆಯ ಹಿರಿಯ ವೈದ್ಯಾಧಿಕಾರಿ ಡಾ.ಜನಾರ್ದನ ನಾಯ್ಕ್ ರವರಿಗೆನ ಜೆರಿಯಾಟ್ರಿಕ್ ಸೊಸೈಟಿ ಆಫ್ ಇಂಡಿಯದ ಫೆಲೋಶಿಫ್ ಪುರಸ್ಕಾರ ಲಭಿಸಿತು.
ವೃದ್ಧಾಪ್ಯ ವೈದ್ಯಕೀಯ ಶಾಸ್ತ್ರ ದ ಏಕೈಕ ಶೈಕ್ಷಣಿಕ ಸೊಸೈಟಿಯಾಗಿರುವ, ಜೆರಿಯಾಟ್ರಿಕ್ ಸೊಸೈಟಿ ಆಫ್ ಇಂಡಿಯ ದ ಅಧ್ಯಕ್ಷ ರಾದ ಡಾ. ಸಜೇಶ್ ಅಶೋಕನ್ ರವರು ಪೆಲೋಶಿಫ್ ಪುರಸ್ಕಾರವನ್ನು ಎರ್ನಾಕುಲಂ ನಲ್ಲಿ ನಡೆದ ರಾಷ್ಟ್ರೀಯ ಸಮ್ಮೇಳನ ದಲ್ಲಿ ಪ್ರಧಾನ ಮಾಡಿದರು.
ಡಾ.ಜನಾರ್ದನ ರವರು ಈ ಹಿಂದೆ ಕಾಲೇಜ್ ಆಫ್ ಜನರಲ್ ಪ್ರಾಕ್ಟೀಸರ್ಸ್ ಮತ್ತು ಅಕಾಡೆಮಿ ಆಫ್ ಮೆಡಿಕಲ್ ಸ್ಪೆಷಾಲಿಟಿ ಯಿಂದಲೂ ಫೆಲೋಶಿಪ್ ಗಳನ್ನು ಪಡೆದಿದ್ದಾರೆ. ಮಾನ್ಯ ಸಮೀಪದ ಚುಕ್ಕಿನಡ್ಕ ನಿವಾಸಿಯಾಗಿರುವ ಡಾ.ಜನಾರ್ದನ ರವರು ಮಾನ್ಯ ಜ್ಞಾನೋದಯ ಶಾಲೆ ಮತ್ತು ಬದಿಯಡ್ಕ ನವಜೀವನ ಶಾಲೆಯ ಹಳೆ ವಿದ್ಯಾರ್ಥಿಯಾಗಿದ್ದು, ಎಂಬಿಬಿಎಸ್ ಮತ್ತು ಎಂಡಿ ಯನ್ನು ಕಲ್ಲಿಕೋಟೆಯ ವೈದ್ಯಕೀಯ ಕಾಲೇಜಿನಲ್ಲಿ ಪೂರ್ತಿಗೊಳಿಸಿದ ಇವರು, ಕೊಚ್ಚಿ ಅಮೃತ ಕಾಲೇಜಿನಿಂದ ವೃದ್ಧಾಪ್ಯ ವೈದ್ಯಕೀಯ ಶಾಸ್ತ್ರ ವನ್ನೂ, ವೆಲ್ಲೊರಿನ ಕೃಶ್ಚಿಯನ್ ಮೆಡಿಕಲ್ ಕಾಲೇಜಿನಿಂದ ಎಚ್ ಐ ವಿ ಯ ಬಗ್ಗೆ ತಜ್ಞ ತರಬೇತಿಯನ್ನು ಪಡೆದಿದ್ದಾರೆ. ಕಾಸರಗೋಡಿನ ಜನರಲ್ ಆಸ್ಪತ್ರೆಯಲ್ಲಿ ಪಿಷಿಶಿಯನ್ ಆಗಿ ಕೆಲಸ ಮಾಡುವ ಡಾ.ಜನಾರ್ದನ ರವರು ಉತ್ತಮ ಸಂಚಾಲಕರಾಗಿ ಸಾಂಸ್ಕೃತಿಕ, ಸಾಮಾಜಿಕ ಕ್ಷೇತ್ರದಲ್ಲೂ ಸಕ್ರೀಯ ರಾಗಿ ಸೇವೆ ಸಲ್ಲಿಸುತ್ತಿದ್ದಾರೆ.