546
- ಕುಂಬಳೆ ಶಿರಿಯದಲ್ಲಿ ಸ್ಕೂಟರ್ – ಬಸ್ ಡಿಕ್ಕಿ : ಬಿಜೆಪಿ ನಾಯಕನ ದುರ್ಮರಣ
ಕುಂಬಳೆ ರಾಷ್ಟ್ರೀಯ ಹೆದ್ದಾರಿಯ ಶಿರಿಯ ದಲ್ಲಿ ಸ್ಕೂಟರ್ ಮತ್ತು ಕೇರಳ ಸಾರಿಗೆ ಸಂಸ್ಥೆಯ ಬಸ್ ಬಡಿದು ಬಿಜೆಪಿ ನಾಯಕ ಧನರಾಜ್ (40) ಮೃತಪಟ್ಟ ಘಟನೆ ನಡೆದಿದೆ. ಬಿಜೆಪಿ ಕುಂಬ್ಳೆ ಮಂಡಲ ಕಾರ್ಯದರ್ಶಿಯಾಗಿ ಪಕ್ಷದ ಸಂಘಟನೆಗೆ ದುಡಿಯುತ್ತಿದ್ದರು.
ಶನಿವಾರ ಮಧ್ಯಾಹ್ನ ಸುಮಾರು 2ಗಂಟೆಯ ಹೊತ್ತಿಗೆ ರಾ. ಹೆ. ಯ ಶಿರಿಯ ದಲ್ಲಿ ಅಪಘಾತ ಸಂಭವಿಸಿದ ಕೂಡಲೇ ಗಾಯಾಳುವನ್ನು ಬಂದ್ಯೋಡು ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ ಅಷ್ಟರಲ್ಲೇ ಮೃತಪಟ್ಟಿದ್ದರು. ಬಳಿಕ ಮೃತದೇಹವನ್ನು ಮಂಗಲ್ಪಾಡಿ ತಾಲೂಕು ಆಸ್ಪತ್ರೆಗೆ ಕೊಂಡೊಯ್ದು ಮಹಜರು ನಡೆಸಲಾಯಿತು.
ಉಪ್ಪಳ ಪ್ರತಾಪನಗರದ ಬಿಟ್ಟಿಗದ್ದೆ ನಿವಾಸಿ ಲೋಕಯ್ಯ ಪೂಜಾರಿ, ರೇವತಿ ದಂಪತಿಯ ಪುತ್ರನಾದ ಧನ್ ರಾಜ್ ಈ ಹಿಂದೆ ಭಾರತೀಯ ಜನತಾ ಯುವಮೋರ್ಚಾ ಮಂಡಲ ಕಾರ್ಯದರ್ಶಿ, ಜಿಲ್ಲಾ ಕಾರ್ಯದರ್ಶಿಯಾಗಿ ದುಡಿದಿದ್ದರು. ಅಪಘಾತ ಸುದ್ದಿ ತಿಳಿದು ನಾಯಕರು ಸಹಿತ ಕಾರ್ಯಕರ್ತರು ಮಂಗಲ್ಪಾಡಿ ಆಸ್ಪತ್ರೆಗೆ ಧಾವಿಸಿದ್ದಾರೆ.