ಎಳೆಯ ಮಕ್ಕಳಲ್ಲಿ ಚೆಸ್ ಆಸಕ್ತಿ ಮೂಡಿಸಿ ಪ್ರೋತ್ಸಾಹಿಸುವ ಉದ್ದೇಶದಿಂದ ಬದಿಯಡ್ಕದ ಮಾಸ್ಟರ್ ಚೆಸ್ ಅಕಾಡೆಮಿ “ಸಂಸ್ಕೃತಿ ಚೆಸ್ ಸ್ಪರ್ಧೆ – ಸೀಸನ್ -1ನ್ನು ಆಯೋಜಿಸಿದೆ.
ಬಾಲ ಚೆಸ್ ಪ್ರತಿಭೆ ಮಾ. ನೈತಿಕ್ ಕೃಷ್ಣ ನ ಬ್ರಹ್ಮೋಪದೇಶದ ಅಂಗವಾಗಿ ಡಿಸೆಂಬರ್ 25ರಂದು ಬೆಳ್ಳೂರು ಶ್ರೀ ಮಹಾವಿಷ್ಣು ದೇವಾಲಯದಲ್ಲಿ ಅಪರಾಹ್ನ 2.30ರಿಂದ ಚೆಸ್ ಸ್ಪರ್ಧೆ ಜರಗಲಿದೆ. ಮಾಸ್ಟರ್ ಚೆಸ್ ಅಕಾಡೆಮಿ ಬದಿಯಡ್ಕ ಇದರ ಪ್ರಮುಖ್ ಪ್ರಶಾಂತ ಎಂ. ಇವರ ಸಂಘಟನಾ ಸಂಯೋಜನೆಯಂತೆ ಸ್ಪರ್ಧೆ ನಡೆಯಲಿದೆ.
ಮಹಾಭಾರತ ಕಾಲದಿಂದಲೇ ಅಖಂಡ ಭಾರತದಲ್ಲಿ ಚೆಸ್ ಎಂಬ ಚದುರಂಗದಾಟ ಜನಪ್ರಿಯವಾಗಿದೆ. ಇದು ಬೌದ್ಧಿಕ ಚಿಂತನ ಶೀಲತೆ ಮತ್ತು ಪ್ರತಿಭೆ ಬಯಸುವ ಆಟವಾಗಿದ್ದು ಎಳೆಯ ಮಕ್ಕಳನ್ನು ಇದರಲ್ಲಿ ತೊಡಗಿಸಿಕೊಂಡರೆ ಅವರ ಕೌಶಲ್ಯಾಭಿವೃದ್ಧಿಯಾಗುತ್ತದೆ.
ಸ್ಪರ್ಧೆಯು ಅಂಡರ್ 9, 12, 15 ಎಂಬೀ ವಿಭಾಗಗಳಲ್ಲಿ ನಡೆಯಲಿದೆ. ಚೆಸ್ ತರಬೇತುದಾರರಾದ ಕುಂಞಂಬು, ಶಶೀಂದ್ರ ಮೊವ್ವಾರ್, ಪ್ರಶಾಂತ ಕುಂಬ್ಳೆ ಸಹಕರಿಸುವರು. ಎಲ್ಲಾ ವಯೋಮಾನದ ವಿಜೇತರಿಗೆ ತ ಲಾ 10 ಪ್ರಶಸ್ತಿಫಲಕ(ಟ್ರೋಫಿ) ಹಾಗೂ ಜನರಲ್ ವಿಭಾಗದಲ್ಲಿ ವಿಜೇತ ಮೂವರಿಗೆ ನಗದು ಬಹುಮಾನ ದೊರೆಯಲಿದೆ. ಈ ಸಂಬಂಧ ಹೆಚ್ಚಿನ ಮಾಹಿತಿಗೆ (9995284422, 8590198284) ಸಂಪರ್ಕಿಸಬಹುದೆಂದು ಪ್ರಕಟಣೆ ತಿಳಿಸಿದೆ