93
ಕಾಸರಗೋಡು : ಕೇರಳದ ಕೊಚ್ಚಿಯಲ್ಲಿ ನಟಿಯನ್ನು ಕಾರಿನಲ್ಲಿ ಕರೆದೊಯ್ದು ಆಕ್ರಮಿಸಿದ ಕೇಸಿನಲ್ಲಿ ನಟ ದಿಲೀಪ್ ವಿರುದ್ಧ ಸಾಕ್ಷಿ ಹೇಳಿಕೆ ನೀಡಿದ್ದ ನಿರ್ದೇಶಕ ಪಿ.ಬಾಲಚಂದ್ರ ಕುಮಾರ್ ಮೃತಪಟ್ಟರು. ಚೆಂಗನ್ನೂರಿನ ಖಾಸಗಿ ಆಸ್ಪತ್ರೆಯಲ್ಲಿ ಶುಕ್ರವಾರ ಬೆಳಿಗ್ಗೆ ಕಿಡ್ನಿ ಮತ್ತು ಹೃದಯ ಸಂಬಂಧೀ ಖಾಯಿಲೆಯಿಂದ ಮೃತರಾದರು.
2013ರಲ್ಲಿ ತೆರೆಕಂಡ “ಕೌ ಬಾಯ್” ಸಿನಿಮ ನಿರ್ದೇಶಿಸಿದ್ದ ಅವರು ನಟಿಯನ್ನು ಆಕ್ರಮಿಸಿದ ಕೇಸಿನ 1ನೇ ಆರೋಪಿ ಪಲ್ಸರ್ ಸುನಿ ಎಂಬಾತ ನಟಿಗೆ ದೌರ್ಜನ್ಯ ನೀಡಿದ ದೃಶ್ಯದ ಪ್ರತಿ ನಟ ದಿಲೀಪ್ ಕೈವಶ ಇದೆಯೆಂದು ಹೇಳಿಕೆ ನೀಡಿದ್ದರು.
ನಟ ದಿಲೀಪ್ ಮತ್ತು 1ನೇ ಆರೋಪಿ ಪಲ್ಸರ್ ಸುನಿ ಅನ್ಯೋನ್ಯ ಆತ್ಮೀಯರಾಗಿದ್ದು, ಪ್ರಕರಣದಲ್ಲಿ ತನಿಖಾಧಿಕಾರಿಗಳ ವಿರುದ್ದ ಕೂಡಾ ಇವರು ಸಂಚು ಹೂಡಿದ್ದರೆಂದು ಬಾಲಚಂದ್ರಕುಮಾರ್ ಹೇಳಿಕೆ ಇತ್ತಿದ್ದರು.