- ಮಂಗಳೂರು ಕೆನರಾ ಕಾಲೇಜಿನಲಿ ಡಿ.14ರಂದು ಕುಂಬ್ಳೆ ಸುಂದರರಾವ್ ಸಂಸ್ಮರಣೆ, ಸಾಧಕ ವೇಷಧಾರಿ ಅರುವರಿಗೆ ಕುಂಬ್ಳೆ ಸಂಸ್ಮರಣಾ ಪ್ರಶಸ್ತಿ ಪ್ರದಾನ
ಕುಂಬಳೆಯನ್ನು ಮೆರೆಸಿ ಕೀರ್ತಿಶೇಷರಾದ ಕಲಾವಿದ ದಿ.ಕುಂಬಳೆ ಸುಂದರರಾವ್ ಸಂಸ್ಮರಣೆ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭ ಡಿ.14ರಂದುಂಗಳೂರಿನ ಕೆನರಾ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಲಿದೆ ಎಂದು ಸಂಘಟಕರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಸಂಜೆ 5ರಿಂದ ನಡೆಯುವ ಸಮಾರಂಭದಲ್ಲಿ ಹಿರಿಯ ಕಲಾವಿದ ಅರುವ ಕೊರಗಪ್ಪ ಶೆಟ್ಟಿಗೆ ಕುಂಬಳೆ ಸುಂದರರಾವ್
ಸಂಸ್ಮರಣಾ ಪ್ರಶಸ್ತಿ ಪ್ರದಾನವಾಗಲಿದೆ ಸತತ 75 ವರ್ಷಕ್ಕೂ ಮಿಕ್ಕಿ ಯಕ್ಷಗಾನದಲ್ಲಿ ವೇಷಧಾರಿಯಾಗಿ ದಾಖಲೆ ನಿರ್ಮಿಸಿರುವ ಅರುವ ಕೊರಗಪ್ಪ ಶೆಟ್ಟರ ಕಲಾಜೀವನ ಸಾಧನೆ ಪರಿಗಣಿಸಿ ಪ್ರಶಸ್ತಿ ನೀಡಲಾಗುತ್ತಿದೆ ಎಂದು ಸಂಘಟಕರು ತಿಳಿಸಿದರು.
ಕುಂಬ್ಳೆಯವರ ಸಹೋದರ ನಾ.ದಾ. ಶೆಟ್ಟಿ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಭಾಸ್ಕರ ರೈ ಕುಕ್ಕುವಳ್ಳಿ ಕುಂಬಳೆ ಸಂಸ್ಮರಣೆ ಮಾಡುವರು. ಅಗರಿ ಎಂಟರ್ ಪ್ರೈಸಸ್ ಮಾಲಕ ಅಗರಿ ರಾಘವೇಂದ್ರ ರಾವ್, ಕೆನರಾ ಪಿಯು ಕಾಲೇಜಿನ ಡೀನ್ ಗೋಪಾಲಕೃಷ್ಣ ಶೆಟ್ಟಿ ಅಭ್ಯಾಗತರಾಗಿ ಭಾಗವಹಿಸುವರು.
ಬಳಿಕ 6.30ರಿಂದ ಸುಧನ್ವಮೋಕ್ಷ ತಾಳಮದ್ದಳೆ ನಡೆಯಲಿದೆ. ಹಿಮ್ಮೇಳದಲ್ಲಿ ಅಮ್ಮಣ್ಣಾಯ, ಉಳಿತ್ತಾಯ, ಪಾಳಂದೆ ಹಾಗೂ ಮುಮ್ಮೇಳದಲ್ಲಿ ಡಾ.ಜೋಷಿ, ಉಜಿರೆ, ವಾ. ರಂಗಾಭಟ್ ಪಾಲ್ಗೊಳ್ಳುವರು. ಕುಂಬಳೆ ಸುಂದರ ರಾವ್ ಸಂಸ್ಮರಣ ಸಮಿತಿ ಮತ್ತು ರಂಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನ ಮಂಗಳೂರು ಜಂಟಿಯಾಗಿ ಕಾರ್ಯಕ್ರಮ ಆಯೋಜಿಸಿದೆ. ಕಾರ್ಯಕ್ರಮ ವಿವರಿಸಿದ ಪತ್ರಿಕಾಗೋಷ್ಠಿಯಲ್ಲಿ ರಂಗಸಂಗಾತಿಯ ಶಶಿರಾಜ್ ಕಾವೂರು, ಕರುಣಾಕರ ಶೆಟ್ಟಿ, ನಾಗೇಶ್ ಶೆಟ್ಟಿ ಬಜಾಲ್, ಕುಂಬ್ಳೆ ಸಂಸ್ಮರಣಾ ಸಮಿತಿ ಸಂಚಾಲಕ ಕೆ. ಸತ್ಯನಾರಾಯಣ ಉಪಸ್ಥಿತರಿದ್ದರು.