- ಉಡುಪಿ ಬಳಿಯ ಪಡುಕುತ್ಯಾರಿನಲ್ಲಿರುವ ಕಟಪಾಡಿ ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠ ದಲ್ಲಿ 2024 ದಶಂಬರ 23ರಿಂದ 29ತನಕ ಯಕ್ಷಗಾನ ತಾಳಮದ್ದಲೆ ಸಪ್ತಾಹ ನಡೆಯಲಿದೆ.
- ಮಹಾಸಂಸ್ಥಾನದ ಆನೆಗುಂದಿ ಪ್ರತಿಷ್ಠಾನದ ನೇತೃತ್ವದಲ್ಲಿ ಯಕ್ಷಗಾನ ಕಲಾ ಪೋಷಕರ ಸಹಕಾರದೊಂದಿಗೆ ಸತತ4 ನೇ ವರ್ಷದ ಯಕ್ಷಗಾನ ತಾಳಮದ್ದಲೆ ಸಪ್ತಾಹ 2024 ದಶಂಬರ 23 ರಿಂದ ಆರಂಭಗೊಳ್ಳಲಿದೆ.
2021ರಿಂದ ಯಕ್ಷಗಾನ ತಾಳಮದ್ದಲೆ ಸಪ್ತಾಹ ಆರಂಭಗೊಂಡಿದ್ದು, ಕಾರ್ಯಕ್ರಮದಲ್ಲಿ ಪ್ರಸಿದ್ದ ಕಲಾವಿದರ ಜತೆಗೆ ಸ್ಥಳೀಯ ಕಲಾವಿದರೂ ಪಾಲ್ಗೊಳ್ಳುತ್ತಿದ್ದಾರೆ. ಯಕ್ಷಗಾನ ಕಲೆಯನ್ನು ಉಳಿಸಿ, ಬೆಳೆಸುವ ಹಾಗೆಯೇ ಕಲಾವಿದರನ್ನು ಗುರುತಿಸಿ ಗೌರವಿಸುವ ಯಕ್ಷ ಸೇವೆಯನ್ನು ಮಹಾಸಂಸ್ಥಾನದಿಂದ ನಡೆಸಲಾಗುತ್ತಿದೆ.
ದಶಂಬರ 23ರಂದು ಸಪ್ತಾಹವನ್ನು ಅಪರಾಹ್ನ 2.30 ಘಂಟೆಗೆ ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠಾಧೀಶ್ವರ ಪರಮಪೂಜ್ಯ ಜಗದ್ಗುರು ಅನಂತಶ್ರೀವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳವರು ದೀಪಪ್ರಜ್ವಲಗೊಳಿಸಿ ಉದ್ಘಾಟಿಸಲಿರುವರು.
ಅತಿಥಿಗಳಾಗಿ ಕಣಿಪುರ ಡಿಜಿಟಲ್ ಮೀಡಿಯ ಸಂಪಾದಕ ಹಾಗೂ ಯಕ್ಷಗಾನ ಚಿಂತಕ, ಲೇಖಕ ಎಂ ನಾ ಚಂಬಲ್ತಿಮಾರ್ ಕುಂಬಳೆ ಭಾಗವಹಿಸುವರು. ಯಕ್ಷಗಾನ ತಾಳ ಮದ್ದಲೆ
ಸಪ್ತಾಹದ ದೈನಂದಿನ ಪ್ರಸಂಗಗಳ ಮಾಹಿತಿ ಇಂತಿದೆ.
ದಿನಾಂಕ 23 ರಂದು ಅಂಗದ ಸಂಧಾನ , 24ರಂದು ಶಲ್ಯ ಸಾರಥ್ಯ, 25ರಂದು ಜಾಂಬವತಿ ಕಲ್ಯಾಣ, 26ರಂದು ಗುರುದಕ್ಷಿಣೆ, 27ರಂದು ಊರ್ವಶಿ ಶಾಪ, 28ರಂದು ಸಮರ ಸನ್ನಾಹ, 29ರಂದು ಸುಧನ್ವಾರ್ಜುನ
ಇವು ಸಂಪನ್ನಗೊಳಲಿದೆ.
ದಶಂಬರ್ 29ರಂದು ಯಕ್ಷಗಾನ ತಾಳಮದ್ದಲೆ ಸಪ್ತಾಹದ ಸಮಾರೋಪದ ವಿಶೇಷ ಸಮಾರಂಭದಲ್ಲಿ ವಿವಿಧ ಗಣ್ಯರು ಯಕ್ಷಗಾನ ಕಲಾ ಪೋಷಕರು ಭಾಗವಹಿಸುವರು.
ತಾಳ ಮದ್ದಲೆಯಲ್ಲಿ
ಪ್ರಸಿದ್ದ ಕಲಾವಿದರಾದ ರಾಧಾಕೃಷ್ಣ ಕಲ್ಚಾರ್, ಶ್ಹಿರಣ್ಯ ವೆಂಕಟೇಶ ಭಟ್, ಎಂ.ಕೆ ರಮೇಶ ಆಚಾರ್ಯ, ಗಣೇಶ್ ಶೆಟ್ಟಿ ಕನ್ನಡಿ ಕಟ್ಟೆ, ರಂಗನಾಥ ಭಟ್, ಸದಾಶಿವ ಆಳ್ವ ತಲಪಾಡಿ, ದಿವಾಕರ ಆಚಾರ್ಯ ಗೇರುಕಟ್ಟೆ , ಚಂದ್ರಶೇಖರ ಕೊಡಿಪಾಡಿ, ಮನೋಹರ ಕುಂದರ್ ಎರ್ಮಾಳ್ , ಜನಾರ್ಧನ ಆಚಾರ್ಯ ಕನ್ಯಾನ , ವಿಶ್ವನಾಥ ಸಾಂತೂರು, ವಾಸುದೇವ ಆಚಾರ್ಯ ಕುಳಾಯಿ , ಶಂಕರ ಆಚಾರ್ಯ ಕೊಳ್ಯೂರು, ನಾಗರಾಜ ಉಡುಪ ಕುಂಜೂರು ಎಂಬಿವರು ಮುಮ್ಮೇಳದಲ್ಲಿ ಭಾಗವಹಿಸುವರು.
ಹಿಮ್ಮೇಳದಲ್ಲಿ ಕೆ.ಜೆ ಗಣೇಶ್, ಕೆ.ಜೆ ಸುದೀಂದ್ರ, ಕೆ.ಜೆ ಕೃಷ್ಣ , ರವಿಚಂದ್ರ ಕನ್ನಡಿ ಕಟ್ಟೆ , ಶ್ರೀಧರ ವಿಟ್ಲ, ಅಶೋಕ ಆಚಾರ್ಯ ಉಳೆಪಾಡಿ, ಆನಂದ ಪೂಜಾರಿ ಕಟಪಾಡಿ , ಪ್ರದೀಪ್ ಆಚಾರ್ಯ ಕುಂಜಾಲು, ಪ್ರಭಾಕರ ಹೇರೂರು, ದಿವಾಕರ ಆಚಾರ್ಯ ಪೊಳಲಿ, ಸುಮಿತ್ ಆಚಾರ್ಯ ಕಿನ್ನಿಕಂಬಳ , ದೇವರಾಜ ಆಚಾರ್ಯ ಐಕಳ, ಮೌನೇಶ ಆಚಾರ್ಯ ಪರ್ಕಳ, ಕೆ.ಜಿ.ದೀಪ್ತ ಅರವಿಂದ, ಪ್ರಣೀತ್, ಗಣೇಶ್ ಬಿಲ್ಲಾಡಿ ಎಂಬಿವರು ಭಾಗವಹಿಸುವರು.
ಜಿ.ಟಿ ಆಚಾರ್ಯ ಮುಂಬಯಿ, ಜನಾರ್ಧನ ಆಚಾರ್ಯ ಕನ್ಯಾನ ಇವರು ನೇಮಕತಾಳಮದ್ದಲೆ ಸಪ್ತಾಹ 2024ರ ಸಂಯೋಜಕರಾಗಿದ್ದು
ಕಾರ್ಯಕ್ರಮದ ಯಶಸ್ವಿಗೆ ಯಕ್ಷಗಾನ ಕಲಾಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಹಕರಿಸಬೇಕೆಂದೂ, ಯಕ್ಷಗಾನ ಕಲೆಯ ಉಳಿವಿಗಾಗಿ ಕಲಾಪೋಷಕರ ಸರ್ವ ವಿಧದ ಸಹಕಾರ ಹಾಗೂ ಸಹಭಾಗಿತ್ವವನ್ನು
ಆನೆಗುಂದಿ ಪ್ರತಿಷ್ಠಾನದ ಅಧ್ಯಕ್ಷ ಶ್ರೀ ವಿ.ಶ್ರೀಧರ ಆಚಾರ್ಯ ವಡೇರಹೋಬಳಿ
ಪ್ರಧಾನ ಕಾರ್ಯದರ್ಶಿ ಲೋಕೇಶ್ ಎಂ.ಬಿ ಆಚಾರ್ ಕಂಬಾರ್, ಕೋಶಾಧಿಕಾರಿ ಅರವಿಂದ ವೈ ಆಚಾರ್ಯ ಬೆಳುವಾಯಿ ವಿನಂತಿಸಿದ್ದಾರೆ.