56
ಕೇರಳದಲ್ಲಿ ನಡೆದ ಸ್ಥಳೀಯಾಡಳಿತ,ಉಪಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಮೇಲುಗೈ ಸಾಧಿಸಿದೆ.
ಒಟ್ಟು 31 ವಾರ್ಡುಗಳಿಗೆ ನಡೆದ ಉಪಚುನಾವಣೆಯಲ್ಲಿ ಯುಡಿಎಫ್ 17, ಸಿಪಿಐಎಂ ನೇತೃತ್ವದ ಎಲ್ ಡಿ ಎಫ್ 11 ಮತ್ತು ಬಿಜೆಪಿ 3 ವಾರ್ಡುಗಳಲ್ಲಿ ವಿಜಯಿಯಾಗಿದೆ.
ಚುನಾವಣಾ ಪೂರ್ವದಲ್ಲಿ ಎಲ್ ಡಿ ಎಫ್ 15, ಯುಡಿಎಫ್ 13, ಬಿಜೆಪಿ 3 ವಾರ್ಡುಗಳ ಬಲಾಬಲ ಹೊಂದಿತ್ತು. ಯುಡಿಎಫ್ ಹೆಚ್ಚುವರಿ ವಾರ್ಡು ಗೆಲ್ಲುವುದರೊಂದಿಗೆ ತ್ರಿಶ್ಶೂರು ಜಿಲ್ಲೆಯ ನಾಟ್ಟಿಗ , ಪಾಲಕ್ಕಾಡ್ ಜಿಲ್ಲೆಯ ತಚ್ಚಂಬಾರ, ಇಡುಕ್ಕಿ ಜಿಲ್ಲೆಯ ಕರಿಮಣ್ಣೂರ್ ಗ್ರಾಮ ಪಂಚಾಯತುಗಳಲ್ಲಿ ಎಲ್.ಡಿಎಫ್ ಗೆ ಆಡಳಿತ ನಷ್ಟವಾಗಲಿದೆ.
ಇದು ಮುಂದೆ ಬರಲಿರುವ ಸ್ಥಳೀಯಾಡಳಿತ,ಮತ್ತು ವಿಧಾನಸಭಾ ಚುನಾವಣೆಯ ಫಲಿತಾಂಶದ ಮುನ್ನೋಟವೆಂದೂ ಕೇರಳದಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ ತರಂಗ ಎದ್ದಿದೆಯೆಂದೂ ರಾಜ್ಯ ವಿಪಕ್ಷ ನಾಯಕ ವಿ.ಡಿ. ಸತೀಶನ್ ಫಲಿತಾಂಶದ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ.