122
- ಕಣಿಪುರ ಬ್ರಹ್ಮಕಲಶ ಸಮಿತಿ ಕಾರ್ಯದರ್ಶಿ ಜಯಕುಮಾರ್ ಅವರಿಗೆ ಪತ್ನಿ ವಿಯೋಗ
ಕುಂಬಳೆ : ಕಣಿಪುರ ಶ್ರೀಗೋಪಾಲಕೃಷ್ಣ ದೇವಸ್ಥಾನ ಬ್ರಹ್ಮಕಲಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಎಂ.ಜಯಕುಮಾರ್ ಅವರ ಪತ್ನಿ ಕುಂಬಳೆ ಕೃಷ್ಣನಗರ ನಿವಾಸಿ ಶೋಭಾ (59)ನಿಧನರಾದರು.
ಸುದೀರ್ಘಕಾಲದಿಂದ ಅನಾರೋಗ್ಯ ಪೀಡಿತರಾಗಿದ್ದ ಅವರು ಬುಧವಾರ,ಬೆಳಿಗ್ಗೆ ವಿಧಿವಶರಾದರು. ಮೃತರು ಪತಿ ಜಯಕುಮಾರ್, ಮಕ್ಕಳಾದ ವರುಣ್ ಕುಮಾರ್ (ಮೇಕ್ಸ್ ಲೈಫ್ ಇನ್ಸೂರೆನ್ಸ್ ಏರಿಯಾ ಮೇನೇಜರ್, ಕಣ್ಣೂರು), ಅರ್ಜುನ್ ಜಯಕುಮಾರ್ (ಇಂಡಿಯನ್ ಓವರ್ ಸೀಸ್ ಬೇಂಕ್ ಸೀನಿಯರ್ ಮೇನೇಜರ್ ಸಿಂಗಾಪುರ), ಹಾಗೂ ಸೊಸೆಯಂದಿರು ಮತ್ತು ಸಹೋದರರನ್ನು ಅಗಲಿದ್ದಾರೆ.
ಮೃತರ ಅಂತ್ಯ ಸಂಸ್ಕಾರ ಪ್ರಕ್ರಿಯೆ ನಾಳೆ (12. 12. 2024) ಬೆಳಿಗ್ಗೆ 11ರ ಬಳಿಕ ನಡೆಯಲಿದೆಯೆಂದು ಕುಟುಂಬಿಕರು ತಿಳಿಸಿದ್ದಾರೆ.