81
ಕಾಸರಗೋಡು ನಗರಸಭಾ ಕಚೇರಿಗೆ ಅತಿಕ್ರಮಿಸಿ ಆಗಮಿಸಿ, ಸಾರ್ವಜನಿಕರು ಮತ್ತು ಸಿಬಂದಿಗಳ ಕಣ್ಣೆದುರೇ ಬೆದರಿಕೆಯೊಡ್ಡಿ ಹಲ್ಲೆಗೈದ ಗುತ್ತಿಗೆದಾರನನ್ನು ಬಂಧಿಸಲಾಗಿದೆ.
ನಗರಸಭೆಯ ಒಕ್ಯುಪೆನ್ಸಿ ಸರ್ಟಿಫಿಕೇಟನ್ನು ಕೃತ್ರಿಮವಾಗಿ ನಿರ್ಮಿಸಿರುವದನ್ನು ಪತ್ತೆ ಹಚ್ಚಿ, ಕಟ್ಟಡ ನಂಬ್ರವನ್ನು ರದ್ದು ಪಡಿಸಿದ ದ್ವೇಷದಿಂದ ನಗರಸಭಾ ಕಾರ್ಯದರ್ಶಿಯ ಮೇಲೆ ಗುತ್ತಿಗೆದಾರ ಆಕ್ರಮಣ ನಡೆಸಿ ಹಲ್ಲೆ ಮಾಡಿದ್ದನು.
ಈ ಸಂಬಂಧ ತಳಂಗರೆ ಬಾಂಗೋಡು ನಿವಾಸಿ ಕೆ.ಎ.ಶಿಹಾಬುದ್ದೀನ್ (46) ಎಂಬಾತನನ್ನು ಬಂಧಿಸಲಾಗಿದೆ.
ಕಾಸರಗೋಡು ನಗರಸಭಾ ಕಾರ್ಯದರ್ಶಿ ಪಿ.ಎ ಜಸ್ಟಿನ್ ನೀಡಿದ ದೂರಿನಂತೆ ಬಂಧನ ನಡೆದಿದೆ. ಕಾರ್ಯದರ್ಶಿಯ ಕೃತ್ರಿಮ ಸಹಿ ಬಳಸಿ ಒಕ್ಯುಪೆನ್ಸಿ ಸರ್ಟಿಫಿಕೇಟ್ ಮಾಡಿಸಿಕೊಂಡದ್ದನ್ನು ಪತ್ತೆ ಹಚ್ಚಿದ ದ್ವೇಷದಿಂದ ಗುತ್ತಿಗೆದಾರ ಹಲ್ಲೆ ನಡೆಸಿದನೆಂದು ಕೇಸು ದಾಖಲಾಗಿದೆ.