ಮುಳಿಯಾರ್: ವಿಶ್ವ ಹಿಂದೂ ಪರಿಷತ್ ಮುಳಿಯಾರು ಖಂಡಠ ಸಮಿತಿಯು ನೇತೃತ್ವದಲ್ಲಿ ಡಿಸೆಂಬರ್ 8 ರಂದು ಮಧ್ಯಾಹ್ನ 2:30 ರಿಂದ ಸಾಯಂಕಾಲ 4:30 ರವರೆಗೆ ಅಮ್ಮಂಕೋಡು ಭಜನಾ ಮಂದಿರದಲ್ಲಿ ಸತ್ಸಂಗ ಕಾರ್ಯಕ್ರಮ ನಡೆಯಿತು.
ಸಮಾಜ ಬಾಂಧವರಲ್ಲಿ ಏಕತೆ, ಶಾಂತಿ, ಸಾಂಸ್ಕೃತಿಕ ಜಾಗೃತಿ ಮತ್ತು ಆಧ್ಯಾತ್ಮಿಕ ಬೆಳವಣಿಗೆಯನ್ನು ಉತ್ತೇಜಿಸುವ ಉದ್ದೇಶದಿಂದ ಸತ್ಸಂಗ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಸಮಾರಂಭದ ಅಂಗವಾಗಿ ಪ್ರಾರ್ಥನೆ, ಭಜನೆ, ಗುರು ವಚನಗಳು ಜರುಗಿದವು. ಈ ಸಂದರ್ಭದಲ್ಲಿ ವಿಎಚ್‌ಪಿ ಕಾಞಂಗಾಡ್ ಜಿಲ್ಲಾ ಮಾತೃ ಶಕ್ತಿ ಸಂಯೋಜಕಿ ಸತಿ ಕೊಡೋತ್ ಮುಖ್ಯ ಭಾಷಣ ಮಾಡಿ ಮಹಿಳಾ ಸಬಲೀಕರಣದ ಮಹತ್ವವನ್ನು ತಿಳಿಸಿದರು. ಮುಳಿಯಾರು ಖಂಡ ಸಮಿತಿ ಉಪಾಧ್ಯಕ್ಷ ರಾಮಣ್ಣ ರೈ ಅಧ್ಯಕ್ಷತೆ ವಹಿಸಿದ್ದರು. ವಿಎಚ್‌ಪಿಯ ಕಾಸರಗೋಡು ಜಿಲ್ಲಾ ಧರ್ಮ ಪ್ರಸಾರ ಪ್ರಮುಖ್ ವಾಮನ ಆಚಾರ್ಯ ಬೋವಿಕಾನ ಅವರು ಸಂಘಟನೆಯ ಮಹತ್ವದ ಕುರಿತು ವಿವರಣೆ ನೀಡಿದರು. ಜಿಲ್ಲಾ ಸಮಿತಿಯ ಸಹ ಕಾರ್ಯದರ್ಶಿಯಾದ ಸುರೇಶ ಬಾಬು ಕಾನತ್ತೂರು ಪ್ರಾಸ್ತಾವಿಕವಾಗಿ ಮಾತನಾಡಿ, ಜನಮಾನಸದಲ್ಲಿ ಒಗ್ಗಟ್ಟು ಮತ್ತು ಸಾಮೂಹಿಕ ಪ್ರಯತ್ನದ ಅಗತ್ಯವಿದೆ ಎಂದರು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮಂಡಲ ಬೌದ್ಧಿಕ್ ಪ್ರಮುಖ್ ಬಾಲಕೃಷ್ಣನ್ ಕೊಳಚೆಪ್ಪು ಅಭಿನಂದನಾ ಭಾಷಣ ಮಾಡಿದರು. ಪ್ರಖಂಡ ಸಮಿತಿ ಉಪಾಧ್ಯಕ್ಷರಾದ ಕೃಷ್ಣನ್ ಅಮ್ಮಂಕೋಡು ಸ್ವಾಗತಿಸಿ, ಖಂಡ ಸಮಿತಿ ಕಾರ್ಯದರ್ಶಿ ವಿಜಯನ್ ಕೋಟೂರು ಧನ್ಯವಾದವಿತ್ತರು. ಶಾಂತಿ ಮಂತ್ರದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.