ಪಡುಕುತ್ಯಾರು: 2025 ಜನವರಿ 6ರಿಂದ 12 ಆನೆಗುಂದಿ ಮಠದಲ್ಲಿ ಕೋಟಿ ಕುಂಕುಮಾರ್ಚನೆ ದಶಂಬರ 11ರಂದು ಸಿದ್ದತಾ ಸಭೆ

by Narayan Chambaltimar

ಪಡುಕುತ್ಯಾರು: ಪಡುಕುತ್ಯಾರಿನಲ್ಲಿರುವ ಕಟಪಾಡಿ ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠ ದಲ್ಲಿ 2025 ಜನವರಿ 6ರಿಂದ 12ರ ತನಕ ಕೋಟಿ ಕುಂಕುಮಾರ್ಚನೆಯು ಶ್ರೀ ಸರಸ್ವತೀ ಮಾತೃಮಂಡಳಿ, ಆನೆಗುಂದಿ ಪ್ರತಿಷ್ಠಾನದ ವ್ಯಾಪ್ತಿಯ ದೇವಸ್ಥಾನಗಳು ಹಾಗೂ ಸ್ಥಳೀಯ ಪಂಚಾಯತುಗಳ ಹಿಂದೂ ಸಮಾಜ ಬಾಂಧವರ ನೇತೃತ್ವದಲ್ಲಿ ನಡೆಯಲಿದೆ.
ಮಹಾಸಂಸ್ಥಾನದ ವಿವಿಧ ಯೋಜನೆಗಳ ಸಾಕಾರ ಮತ್ತು ಲೋಕ ಕಲ್ಯಾಣದ ಸಂಕಲ್ಪದೊಂದಿಗೆ ಕೇಪಳಪುಷ್ಪದೊಂದಿಗೆ ಶ್ರೀ ಸರಸ್ವತೀ ಯಾಗ ಶಾಲೆಯಲ್ಲಿ ನಡೆಯುವ ಕೋಟಿ ಕುಂಕುಮಾರ್ಚನೆಯ ವೇಳೆ ವಿವಿಧ ಹೋಮ-ಯಜ್ಞಗಳನ್ನುಆಯೋಜಿಸಲಾಗಿದೆ.

ಈ ಕೋಟಿ ಕುಂಕುಮಾರ್ಚನೆಯ ಸುಸಮಯದಲ್ಲಿ ಅಷ್ಟಚಾತ್ವಾರಿಂಶತ್ ನಾರಿಕೇಳ ಗಣಯಾಗ, ರುದ್ರ ಯಾಗ ಮಹಾ ಮೃತ್ಯುಂಜಯ ಯಾಗ, ವಿಷ್ಣು ಹವನ, ಸೌರ ಸೂಕ್ತ ಹೋಮ, ಶ್ರೀ ಸರಸ್ವತೀ ಹೋಮ, ದುರ್ಗಾ ಹೋಮ, ವಿಶ್ವಕರ್ಮ ಹೋಮ, ನವಗ್ರಹ ಹೋಮ ದಶ ಸಹಸ್ರ ಕದಳಿ ಶ್ರೀ ಲಲಿತಾ ಸಹಸ್ರನಾಮಗಳೊಂದಿಗೆ ಹೋಮಗಳು, ಶ್ರೀ ಸೂಕ್ತ ಹೋಮ ಎಂಬೀ ಹೋಮ ಯಜ್ಞಗಳು ಇದೇ ವೇಳೆ ಸಂಪನ್ನಗೊಳ್ಳಲಿದೆ.

ಕೋಟಿಕುಂಕುಮಾರ್ಚನೆಯ ಆಯೋಜನೆಯ ಬಗ್ಗೆ ಪರಮಪೂಜ್ಯ ಜಗದ್ಗುರು ಅನಂತಶ್ರೀವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳವರ ದಿವ್ಯ ಸಾನಿಧ್ಯ ಹಾಗೂ ಮಾರ್ಗದರ್ಶನದಲ್ಲಿ ನಡೆದ ಸಭೆಯ ಅಧ್ಯಕ್ಷತೆಯನ್ನು ಆನೆಗುಂದಿ ಪ್ರತಿಷ್ಠಾನದ ಅಧ್ಯಕ್ಷ ಶ್ರೀ ವಿ.ಶ್ರೀಧರ ಆಚಾರ್ಯ ವಡೇರಹೋಬಳಿ ವಹಿಸಿದ್ದರು.

ಸಭೆಯಲ್ಲಿ ವಿಶೇಷ ಆಹ್ವಾನಿತರಾಗಿ ಹಿಂದೂ ಸಮಾಜದ ಮುಖಂಡರುಗಳಾದ ಶ್ರೀ ಪ್ರಸಾದ್‌ ಶೆಟ್ಟಿ ಕುತ್ಯಾರು, ಗೀತಾಂಜಲಿ ಸುವರ್ಣ, ಶಿಲ್ಪಾ ಜಿ.ಸುವರ್ಣ, ಲತಾ ಎಸ್‌ ಆಚಾರ್ಯ ಕುತ್ಯಾರು, ದಿವ್ಯಾ ಶೆಟ್ಟಿಗಾರ್‌ , ಶರ್ಮಿಳಾ, ಮೋಹಿನಿ.ಸಿ ಹೆಗ್ಡೆ, ಇಂದಿರಾ ಆಚಾರ್ಯ, ಶಿವರಾಮ ಭಂಡಾರಿ, ಪ್ರಸಾದ್‌ ಶೆಟ್ಟಿ ವಳದೂರು, ಜನಾರ್ಧನ ಆಚಾರ್ಯ ಕಳತ್ತೂರು, ನವೀನ್‌ ಶೆಟ್ಟಿ ಕುತ್ಯಾರು, ಶೈಲೇಶ್‌ ಕುತ್ಯಾರು, ನಾಗರತ್ನ, ವಿನೋದ, ಗೀತಾ, ಲತಾ ಎಸ್‌ ಎಂ ಮುಂತಾದವರು ಭಾಗವಹಿಸಿ ಕಾರ್ಯಕ್ರಮದ ಯಶಸ್ವಿಗೆ ಮಾಹಿತಿ ನೀಡಿದರು.
ಈ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗಿ ಮಹಾಸಂಸ್ಥಾನದ ವ್ಯಾಪ್ತಿಯ ದೇವಸ್ಥಾನಗಳ ಮುಖಂಡರು, ಸಹಟ್ಟಸ್ಟ್‌ , ಸಂಸ್ಥಗಳ ಮುಖಂಡರು ಹಾಗೂ ಸ್ಥಳೀಯ ಗ್ರಾಮಗಳ ಹಿಂದೂ ಸಂಘಟನೆಗಳ ಮುಖಂಡರ, ಗ್ರಾಮ ಪಂಚಾಯತಿ ಸದಸ್ಯರ ಸಭೆಯ ದಶಂಬರ 11ರಂದು ಅಪರಾಹ್ನ 3.00ಘಂಟೆಗೆ ಪಡುಕುತ್ಯಾರು ಆನೆಗುಂದಿ ಮಠದಲ್ಲಿ ಆಯೋಜಿಸಲು ತೀರ್ಮಾನಿಸಲಾಗಿದೆ.
ಸಭೆಯಲ್ಲಿ ಮಹಾಸಂಸ್ಥಾನದ ಶ್ರೀ ಸರಸ್ವತೀ ಮಾತೃಂಡಳಿಯ ಅಧ್ಯಕ್ಷೆ ಸಂಧ್ಯಾಲಕ್ಷ್ಮಣ ಆಚಾರ್ಯ ಉಡುಪಿ, ಶ್ರೀ ಬಿ.ಸೂರ್ಯಕುಮಾರ್ ಹಳೆಯಂಗಡಿ, ಶ್ರೀ ಅರವಿಂದ ವೈ. ಆಚಾರ್ಯ ಬೆಳುವಾಯಿ , ಬಿ.ಎಂ ಯದುನಂದನ ಆಚಾರ್ಯ ಬಂಗ್ರಮಂಜೇಶ್ವರ ನ್ಯಾಯವಾದಿ ಕೆ. ಪ್ರಭಾಕರ ಆಚಾರ್ಯ ಕೋಟೆಕಾರು, ಕೆ. ನಾಗರಾಜ ಆಚಾರ್ಯ ಕಾಡಬೆಟ್ಟು, ಕಳಿ ಚಂದ್ರಯ್ಯ ಆಚಾರ್ಯ ಉಪ್ರಳ್ಳಿ, ತ್ರಾಸಿ ಸುಧಾಕರ ಆಚಾರ್ಯ,ಗುರುರಾಜ ಕೆ.ಜೆ ಆಚಾರ್ಯ ಮಂಗಳೂರು, ಶ್ರೀ ಗಣೇಶ್‌ ಆಚಾರ್ಯ ಕೆಮ್ಮಣ್ಣು, ಶ್ರೀ ಬೆಳುವಾಯಿ ಸುಂದರ ಆಚಾರ್ಯ ಮಂಗಳೂರು, ಜಿ.ಟಿ ಆಚಾರ್ಯ ಮುಂಬಯಿ, ದಿನೇಶ್‌ ಆಚಾರ್ಯ ಕಿನ್ನಿಗೋಳಿ, ವಿದ್ವಾನ್‌ ಬ್ರಹ್ಮಶ್ರೀ ಅಕ್ಷಯ ಶರ್ಮಾ ಕಟಪಾಡಿ, ಕೇಶವ ಶರ್ಮಾ ಇರುವೈಲು, ಮನೋಜ್‌ ಶರ್ಮಾ ಕಟಪಾಡಿ, ಲೋಲಾಕ್ಷ ಶರ್ಮಾ ಕಟಪಾಡಿ,ದಯಾನಂದ ಆಚಾರ್ಯ ತೆಂಕನಿಡಿಯೂರು, ಉಷಾ ಜಿ.ಟಿ ಆಚಾರ್ಯ, ರಮಾ ನವೀನ್‌ ಆಚಾರ್ಯ ಕಾರ್ಕಳ ಆಶಾ ಎನ್‌ ಆಚಾರ್ಯ, ಭಾಗವಹಸಿದ್ದರು. ಆನೆಗುಂದಿ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಲೋಕೇಶ್‌ ಎಂ.ಬಿ ಆಚಾರ್‌ ಕಂಬಾರ್‌ ಸ್ವಾಗತಿಸಿ ಕಾರ್ಯದರ್ಶಿ ಕನ್ಯಾನ ಜನಾರ್ದನ ಆಚಾರ್ಯ ವಂದಿಸಿದರು.


.

You may also like

Are you sure want to unlock this post?
Unlock left : 0
Are you sure want to cancel subscription?
-
00:00
00:00
Update Required Flash plugin
-
00:00
00:00