ನೀವು ಕುಡಿಯುವ ನೀರು ಶುದ್ಧವೆಂದು ಹೇಗೆ ನಿರ್ಣಯಿಸುತ್ತೀರಿ…? ‘ನೀರು ಟೆಸ್ಟ್’ ಮಾಡಿದ್ರಾ ನೀವು…?

by Narayan Chambaltimar
  • ಕೌಟುಂಬಿಕ ಆರೋಗ್ಯದ ಗುಟ್ಟಿನಲ್ಲಿ ನಾವು ಬಳಸುವ ಕುಡಿನೀರು ಮತ್ತು ಗೃಹ ಬಳಕೆಯ ನೀರಿಗೆ ಪ್ರಾಮುಖ್ಯತೆ ಇದೆ.
    ನೀರು ಕಾಣಲು ಶುಧ್ಧವಾದರೂ ಅದು ಪರಿಶುಧ್ಧ ಕುಡಿನೀರಿನ ಅಂಶಗಳನ್ನು ಒಳಗೊಂಡಿದೆಯೇ ಎಂಬುವುದನ್ನು ನಾವು ತಿಳಿದಿರಬೇಕಿದೆ.ಈ ನಿಟ್ಟಿನಲ್ಲಿ ವರ್ಷಕೊಮ್ಮೆಯಾದರೂ ನೀರನ್ನು ಟೆಸ್ಟ್ ಮಾಡಲು ನಾವು ಕಾಳಜಿ ವಹಿಸಿಕೊಳ್ಳಬೇಕಿದೆ.

‘ನೀರು ಟೆಸ್ಟ್’ ಮಾಡಿದ್ರಾ ನೀವು..?

ಕೌಟುಂಬಿಕ ಆರೋಗ್ಯದ ಗುಟ್ಟಿನಲ್ಲಿ ನಾವು ಬಳಸುವ ಕುಡಿನೀರು ಮತ್ತು ಗೃಹ ಬಳಕೆಯ ನೀರಿಗೆ ಪ್ರಾಮುಖ್ಯತೆ ಇದೆ.
ನೀರು ಕಾಣಲು ಶುಧ್ಧವಾದರೂ ಅದು ಪರಿಶುಧ್ಧ ಕುಡಿನೀರಿನ ಅಂಶಗಳನ್ನು ಒಳಗೊಂಡಿದೆಯೇ ಎಂಬುವುದನ್ನು ನಾವು ತಿಳಿದಿರಬೇಕಿದೆ.ಈ ನಿಟ್ಟಿನಲ್ಲಿ ವರ್ಷಕೊಮ್ಮೆಯಾದರೂ ನೀರನ್ನು ಟೆಸ್ಟ್ ಮಾಡಲು ನಾವು ಕಾಳಜಿ ವಹಿಸಿಕೊಳ್ಳಬೇಕಿದೆ.

ದೆಷ್ಟೋ ವರ್ಷಗಳ ಮೊದಲು ಬಾವಿಗೆ ಬೆಕ್ಕೊಂದು ಬಿದ್ದಿತ್ತು.ಸತ್ತುಹೋಗಿದ್ದ ಬೆಕ್ಕು ಬಾವಿಯಲ್ಲಿ ಶವವಾಗಿ ತೇಲಿದ ನಂತರ ಎರಡು ವಾರಗಳ ಕಾಲ ಬಾವಿ ನೀರು ಸೇವಿಸದಂತೆ ಆರೋಗ್ಯಾಧಿಕಾರಿಗಳು ತಿಳಿಸಿದ್ದರು.ನೀರನ್ನು ಪರೀಕ್ಷೆಗೊಳಪಡಿಸಿ ಅದ್ಯಾವುದೋ ಬಿಳಿ ಹುಡಿಯೊಂದನ್ನು ಬಾವಿಗೆ ಹಾಕಿದ್ದರು ಎಂದು ಮೂವತ್ತು ವರ್ಷಗಳ ಹಿಂದಿನ ಕತೆಯೊಂದನ್ನು ಅಪ್ಪ ನೆನಪಿಸಿದರು.

ಅಂತೂ ಹಿರಿಯರ ಅನುಭವದ ಮಾತುಗಳಿಗೆ ತಲೆಬಾಗಿದೆ.ಬಾಡಿಗೆ ಮನೆಯ ಬೋರ್ ವೆಲ್ ನೀರನ್ನು ಪರಿಶೋಧನಾ ಕೇಂದ್ರಕ್ಕೆ ತಲುಪಿಸುವ ಜವಾಬ್ದಾರಿ ವಹಿಸಿಕೊಂಡೆ.

ನೀರು ಪರೀಕ್ಷೆಗೆ ತಲಪುವ ಮುನ್ನ :

ನೀರು ಪರೀಕ್ಷೆಯ ಹಂತಗಳನ್ನು ತಿಳಿಯಲು ಬಯಸಿದೆ. ನೇರವಾಗಿ ಜಿಲ್ಲೆಯ ನೀರು ಪರೀಕ್ಷಾ ಕೇಂದ್ರವಾದ ವಿದ್ಯಾನಗರದಲ್ಲಿರುವ ಡಿಸ್ಟ್ರಿಕ್ಟ್ ವಾಟರ್ ಟೆಸ್ಟಿಂಗ್ ಲ್ಯಾಬರೋಟರಿಗೆ ಭೇಟಿ ನೀಡಿದೆ.ಚೆನ್ನಾಗಿ ಕನ್ನಡ ಬಲ್ಲ ಅಧಿಕಾರಿ ಬಹಳ ಸಂಯಮದಿಂದ ನನ್ನೆಲ್ಲಾ ಸಂಶಯಗಳನ್ನು ದೂರ ಮಾಡಿದರು.

ಗೃಹ ಬಳಕೆಯ ನೀರಿನ ಫುಲ್ ಟೆಸ್ಟಿಂಗ್ ರಿಪೋರ್ಟ್ ಸಿಗಲು 850 ರೂಪಾಯಿಗಳನ್ನು ಓನ್ಲೈನ್ ಮೂಲಕ ಪಾವತಿಸಿ ರಶೀದಿಯನ್ನು ಪಡೆದುಕೊಳ್ಳಬೇಕು.ಅಕ್ಷಯ ಕೇಂದ್ರದ ಮೂಲಕ ಅಥವಾ ನೇರವಾಗಿಯೂ ಓನ್ಲೈನ್ ಮೂಲಕ ಪ್ರಯೋಗಾಲಯದ ಫೀಸನ್ನು ಕಟ್ಟಬಹುದು.ಯಾವುದೇ ಕಾರಣಕ್ಕೆ ನಗದಾಗಿ ಸ್ವೀಕರಿಸುವ ವ್ಯವಸ್ಥೆ ಇಲ್ಲಿ ಇಲ್ಲ ಎಂದು ತಿಳಿಸಿದರು.

ಬಳಸುವ ನೀರಿನಿಂದ ಒಂದು ಲೀಟರ್ ನೀರನ್ನು ಸಾಧಾರಣ ಕ್ಯಾನಿನಲ್ಲೂ,ನೂರು ಎಂ.ಎಲ್.ನೀರನ್ನು ಸ್ಟೆರಿಲೈಸ್ಡ್ ಮಾಡಿದ ಬಾಟಲಿಯಲ್ಲೂ ಸಂಗ್ರಹಿಸಬೇಕು.ಕೆಲವು ಆಯ್ದ ಮೆಡಿಕಲ್ ಗಳಲ್ಲಿ ಮಾತ್ರವೇ ಸ್ಟೆರಿಲೈಸ್ಡ್ ಮಾಡಿದ ಅಂದರೆ ಅಣು ಮುಕ್ತ ಗೊಳಿಸಿ ಪ್ಯಾಕ್ ಮಾಡಿರುವ ಬಾಟಲ್ ಗಳು ಲಭ್ಯ ಎಂಬುವುದನ್ನೂ ತಿಳಿಸಲು ಆ ಮಹಿಳಾ ಅಧಿಕಾರಿ ಹಿಂಜರಿಯಲಿಲ್ಲ.

ಇನ್ನು ನೀರು ಸಂಗ್ರಹ ಮಾಡುವಾಗ ಗಮನಿಸಬೇಕಾದ ಕೆಲವು ಸೂಕ್ಷ್ಮ ವಿಚಾರಗಳ ಬಗ್ಗೆಯೂ ಅವರು ಮಾಹಿತಿ ನೀಡಿದರು.ಬೋರ್ ವೆಲ್ ಆದರೆ, ಟ್ಯಾಂಕಿಗೆ ನೀರು ಬೀಳುವ ಮೊದಲೇ ಮೇಲೆ ತಿಳಿಸಿದ ಬಾಟಲ್ ಗಳಲ್ಲಿ ನೇರವಾಗಿ ನೀರನ್ನು ಸಂಗ್ರಹ ಮಾಡಬೇಕು.ಬಾವಿಯ ನೀರಾದರೂ ಅದೇ ರೀತಿ.ಇನ್ನು ಹಗ್ಗ ಬಳಸಿ ನೀರೆಳೆದರೂ ಕೊಡದಿಂದ ನೇರವಾಗಿ ಬಾಟಲ್ ಗಳಲ್ಲಿ ನೀರನ್ನು ತುಂಬಿಸಬೇಕೆಂದರು.

ಹೀಗೆ,ಎರಡು ರೀತಿಯಲ್ಲಿ ಸಂಗ್ರಹ ಮಾಡಿದ ಸ್ಯಾಂಪಲ್ ನೀರಿನೊಂದಿಗೆ ಹಣ ಪಾವತಿಸಿದ ರಶೀದಿಯನ್ನು ಪ್ರಯೋಗಾಲಯಕ್ಕೆ ತಲುಪಿಸಬೇಕು.ಸ್ಯಾಂಪಲ್ ನೀರು ಸಂಗ್ರಹಿಸಿದ ಬಾಟಲ್ ಗಳಿಗೆ ರಿಜಿಸ್ಟರ್ ಸಂಖ್ಯೆಯನ್ನು ನಮೂದಿಸಿ,ದಾಖಲಾತಿ ಮಾಡುವ ಪುಸ್ತಕವೊಂದರಲ್ಲಿ ನೀರು ಕೊಂಡೊಯ್ಯುವವರ ಸಹಿ ಬಿದ್ದಾಗ ನೀರು ಪ್ರಯೋಗದ ಮೊದಲ ಹಂತ ಪೂರ್ತಿಯಾಗುತ್ತದೆ.

ವಾರದ ಮತ್ತು ಇತರ ರಜಾ ದಿನಗಳನ್ನು ಬಿಟ್ಟು ಉಳಿದ ಎಲ್ಲಾ ಕೆಲಸದ ದಿನಗಳಲ್ಲಿ ಸರಕಾರಿ ನೀರು ಪ್ರಯೋಗಾಲಯ‌ ತೆರೆದಿರುತ್ತದೆ.ಬೆಳಗ್ಗೆ ಹತ್ತರಿಂದ ಸಂಜೆ ನಾಲ್ಕು ಮೂವತ್ತರ ವರೆಗೆ ನೀರಿನ ಸ್ಯಾಂಪಲ್ ನೀಡಲು ಅವಕಾಶವಿದೆ.ಗೃಹ ಬಳಕೆಗಳಲ್ಲದೆ ವಾಣಿಜ್ಯ ಬಳಕೆ ಅಂದರೆ ಹೋಟೆಲ್,ಫ್ಲ್ಯಾಟ್,ಸಭಾಂಗಣ ಮುಂತಾದ ಕಡೆಗಳ ನೀರಿನ ಪರೀಕ್ಷೆಯನ್ನೂ ಇಲ್ಲಿ ಮಾಡಲಾಗುತ್ತದೆ.

ನೀರು ಪರೀಕ್ಷೆಯ ನಂತರ :

ಪರೀಕ್ಷೆಗೊಳಪಡಿಸಿದ ನೀರಿನ ವೈಜ್ಞಾನಿಕ ಅಂಶಗಳನ್ನೊಳಗೊಂಡ ಮಾಹಿತಿ ಸಿಗಲು ನಾವು ಮತ್ತೊಮ್ಮೆ ನೇರವಾಗಿ ಪ್ರಯೋಗಾಲಯಕ್ಕೆ ಭೇಟಿ ನೀಡುವ ಅವಶ್ಯಕತೆ ಇಲ್ಲ.ಪಾವತಿಸಿದ ಫೀಸಿಗೆ ದೊರಕಿದ ರಶೀದಿಯಲ್ಲಿರುವ ಐಡಿ ಮೂಲಕ ಮನೆಯಿಂದಲೇ ರಿಪೋರ್ಟನ್ನು ಡೌನ್ ಲೋಡ್ ಮಾಡಿಕೊಳ್ಳಬಹುದು.ಆದರೆ,ಪ್ರಯೋಗಾಲಯದ ಪರೀಕ್ಷಾ ರೀತಿ ಮತ್ತು ದಾಖಲಾತಿಗಳ ಕ್ರೂಡೀಕರಣಕ್ಕೆ ಐದು ದಿನಗಳ ಅಗತ್ಯವಿರುವುದರಿಂದ ಅಷ್ಟು ದಿನಗಳನ್ನು ವೈಟ್ ಮಾಡದೆ ನಿರ್ವಾಹವಿಲ್ಲ.!

ಅಂದ ಹಾಗೆ ನೀರು ಕುಡಿಯಲು ಯೋಗ್ಯ ಎಂಬ ವೈಜ್ಞಾನಿಕ ವಿಶ್ಲೇಷಣಾ ವರದಿ ಪ್ರಯೋಗಾಲಯದಿಂದ ದೊರಕಿದರೆ ಟೆನ್ಷನ್ ಇಲ್ಲ.ಆದರೆ ನೀರು ಕುಡಿಯಲು ಯೋಗ್ಯವಲ್ಲವೆಂಬುದು ವರದಿಯಾದರೆ..? ಅದಕ್ಕೂ ತಲೆ ಕೆಡಿಸಿಕೊಳ್ಳಬೇಕಾಗಿಲ್ಲ.ಯಾಕೆಂದರೆ ಜಿಲ್ಲಾ ನೀರು ಪ್ರಯೋಗಾಲಯದ ಸಿಬ್ಬಂದಿಗಳು ಪರಿಹಾರವನ್ನು ಸೂಚಿಸುತ್ತಾರೆ.

ಹಾಗಾದರೆ ಪರಿಹಾರಗಳೇನು.? ಮತ್ತು ನಮ್ಮ ಬಾಡಿಗೆ ಮನೆಯ ಬೋರ್ ವೆಲ್ ನೀರಿನ ವರದಿ ಹೇಗಿದೆ.? ಎಂಬುವುದನ್ನು ತಿಳಿಯಲು ಮುಂದಿನ ವಾರದ ವರೆಗೆ ಕಣಿಪುರ ಓದುಗರು ಕಾಯಲೇ ಬೇಕಿದೆ.ಸೋ,ನಿಮ್ಮೆನೆ ನೀರನ್ನೂಮ್ಮೆ ಟೆಸ್ಟ್ ಮಾಡಿ ನೋಡುತ್ತೀರಲ್ಲಾ..? ಬೆಸ್ಟ್ ಆಫ್ ಲಕ್..

ಜೀವಜಲವೂ….ಜನ ಜೀವನವೂ…

  • * ಕುಡಿಯುವ ನೀರಿನ ಗುಣಮಟ್ಟಕ್ಕೆ ಸಂಬಂಧಿಸಿ ಭಾರತವೂ ಸೇರಿದಂತೆ ವಿಶ್ವ ಆರೋಗ್ಯ ಸಂಸ್ಥೆಯು ಹಲವಾರು ಮಾನದಂಡಗಳನ್ನು ಕಾಲಕ್ಕನುಗುಣವಾಗಿ ಹೊರಡಿಸಿ ಜನ ಜಾಗೃತಿ ಮೂಡಿಸುತ್ತಿದೆ.
  • ಕುಡಿಯುವ ನೀರಿನಲ್ಲಿ ಕ್ಯಾಲ್ಸಿಯಂ, ಮ್ಯಾಂಗನೀಸ್,ತಾಮ್ರ,ಕಬ್ಬಿಣ,ಮೆಗ್ನೀಶಿಯಂ,ಸಲ್ಪೇಟ್,ನೈಟ್ರೇಟ್,ಪಾದರಸ ಮುಂತಾದವುಗಳು ಹೆಚ್ಚಾದರೂ,ಕಡಿಮೆಯಾದರೂ ಆರೋಗ್ಯಕ್ಕೆ ಹಾನಿ ಇದೆ.
  • * ಬಾವಿಯ ನೀರಿನ ಗುಣಮಟ್ಟಕ್ಕೂ,ಬೋರ್ ವೆಲ್ ನೀರಿಗೂ ಅಜಗಜಾಂತರ ವ್ಯತ್ಯಾಸವಿದೆ.ಬಾವಿಯ ನೀರು ಕುಡಿಯಲು ಸಿಹಿಯಾಗಿದ್ದು ಬೋರ್ ವೆಲ್ ನೀರಿನಲ್ಲಿ ಖನಿಜ ಲವಣಾಂಶಗಳ ಪ್ರಮಾಣ ಹೆಚ್ಚಿರುವ ಸಾಧ್ಯತೆ ಇದೆ.
  • * ಇದೀಗ ಒಂದು ಮನೆಯಲ್ಲಿ ಎರಡಕ್ಕಿಂತಲೂ ಹೆಚ್ಚು ಶೌಚಾಲಯಗಳಿವೆ.ಮನೆಗಳೂ ಬಹಳ ಹತ್ತಿರ ಹತ್ತಿರವಾಗಿವೆ.ಇದು,ಶೌಚಾಲಯದ ಹೊಂಡದಿಂದ ಮಲಿನ ಜಲ ನೇರವಾಗಿ ಬಾವಿಗೋ,ಬೋರ್ ವೆಲ್ ಗೋ ಇಳಿದರೆ ಇ ಕೋಲಿ ಬ್ಯಾಕ್ಟೀರಿಯಾಗಳ ಉಪಸ್ಥಿತಿ ಅಧಿಕವಾಗುತ್ತದೆ.
  • * ಐದು ವರ್ಷಗಳೊಳಗಿನ ಮಕ್ಕಳು ಮತ್ತು ಅರುವತ್ತು ದಾಟಿದ ಹಿರಿಯರಿಗೆ ಶುಧ್ಧ ಕುಡಿನೀರಿನ ಅಲಭ್ಯತೆಯು ಹಲವಾರು ರೋಗಗಳಿಗೆ ಕಾರಣವಾಗಬಹುದು.
  • * ಕುಡಿಯುವ ನೀರಿನ ಗುಣಮಟ್ಟವನ್ನು ಅಳೆಯಲೇ ಬೇಕಾದ ತುರ್ತು ಪರಿಸ್ಥಿತಿಯಲ್ಲಿ ಜಲ ಶುಧ್ಧೀಕರಣದ ವಿವಿಧ ಮಾರ್ಗೋಪಾಯಗಳಿಗೆ ತಲೆಬಾಗಬೇಕಾಗಿದೆ.

 

 

You may also like

Are you sure want to unlock this post?
Unlock left : 0
Are you sure want to cancel subscription?
-
00:00
00:00
Update Required Flash plugin
-
00:00
00:00