90
ತಲೆಮರೆಸಿಕೊಂಡಿದ್ದ ಕುಖ್ಯಾತ ಕಳ್ಳನೊಬ್ಬನನ್ನು ಮೊಗ್ರಾಲಿನ ಬಾಡಿಗೆ ಕ್ವಾರ್ಟರ್ಸ್ಸಿಂದ ಪೋಲೀಸರು ಬಂಧಿಸಿದ್ದಾರೆ. ಉಪ್ಪಳ ಮುಸ್ತಫ ಮಂಝಿಲ್ ನಿವಾಸಿ ಮೀಸೆರೌಫ್ ಯಾನೆ ರೌಫ್ ಎಂಬಾತ ಬಂಧಿತ ವ್ಯಕ್ತಿಯಾಗಿದ್ದಾನೆ. ಮಂಜೇಶ್ವರ, ಕುಂಬಳೆ, ಬದಿಯಡ್ಕ ಮೊದಲಾದ ಠಾಣೆಗಳಲ್ಲಿ ಹಲವು ಕೇಸುಗಳಿರುವ ಈತ,ಕರ್ನಾಟಕ, ಮಹಾರಾಷ್ಟ್ರ ಮೊದಲಾದೆಡೆ ತಲೆಮರೆಸಿಕೊಂಡಿದ್ದನು.
ಈತನ ಬಂಧನಕ್ಕಾಗಿ ಈ ಹಿಂದೆಯೇ ವಾರಂಟ್ ಹೊರಡಿಸಲಾಗಿತ್ತು. ಶುಕ್ರವಾರ ನಸುಕಿನ ವೇಳೆ ಈತ ಮೊಗ್ರಾಲಿನ ಕ್ವಾರ್ಟಸ್ಸಿನಲ್ಲಿ ತಂಗಿರುವ ಖಚಿತ ಸುಳಿವಿನ ಹಿನ್ನೆಲೆಯಲ್ಲಿ ಡಿವೈಎಸ್ಪಿ ಸಿ.ಕೆ.ಸುನಿಲ್ ಕುಮಾರ್ ನೇತೃತ್ವದ ಪ್ರತ್ಯೇತ ತನಿಖಾ ದಳ ಮನೆ ಸುತ್ತುವರಿದು ಆರೋಪಿಯನ್ನು ಬಂಧಿಸಿದರು.