122
ಬದಿಯಡ್ಕ:
ಮದ್ಯದ ಅಮಲಿನಲ್ಲಿ ಡೀಸೆಲ್ ಕುಡಿದ ವ್ಯಕ್ತಿ ಚಿಕಿತ್ಸೆಯ ನಡುವೆ ಸಾವನ್ನಪ್ಪಿದ ಘಟನೆ ನಡೆದಿದೆ.
ಬದಿಯಡ್ಕ ಠಾಣಾ ವ್ಯಾಪ್ತಿಯ ಮಾನ್ಯ ಎರ್ಪಕಟ್ಟೆಯ ತಂಗಚ್ಚನ್ ಮಗ ರಾಜೇಶ್ (35) ಮೃತ ವ್ಯಕ್ತಿಯಾಗಿದ್ದಾರೆ.
ನ.15ರಂದು ಮದ್ಯದ ಅಮಲಿನಲ್ಲಿ ಡೀಸೆಲ್ ಕುಡಿದ ಈತನನ್ನು ಆಸ್ಪತ್ರೆಗೆ ಕೊಂಡೊಯ್ಯಲಾಗಿತ್ತು. ಬಳಿಕ ಪರಿಯಾರಂ ಮೆಡಿಕಲ್ ಕಾಲೇಜ್ ಆಸ್ಪತ್ರೆಗೆ ಸೇರಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟರೆಂದು ತಿಳಿದು ಬಂದಿದೆ. ಈ ಸಂಬಂಧ ಬದಿಯಡ್ಕ ಪೋಲೀಸರು ಅಸಹಜ ಸಾವಿಗೆ ಮೊಕದ್ದಮೆ ದಾಖಲಿಸಿದ್ದಾರೆ.