ಕಣಿಪುರ, ಸುದ್ದಿಜಾಲ
ಕಾಸರಗೋಡು ಸಂಸದೀಯ ವ್ಯಾಪ್ತಿಗೊಳಪಟ್ಟ ಕಣ್ಣೂರು -ಕಾಸರಗೋಡು ಜಿಲ್ಲೆಯ ವ್ಯಾಪ್ತಿ ಒಳಪಟ್ಟ ವಿವಿಧ ರೈಲು ನಿಲ್ದಾಣಗಳ ಅಭಿವೃದ್ಧಿ ವೀಚಾರ ಮತ್ತು ಕಳೆದ ಕೋವಿಡ್ ಕಾಲದಲ್ಲಿ ಸ್ಥಗಿತಗೊಳಿಸಿದ ರೈಲುಗಳ ನಿಲುಗಡೆ ಮರುಸ್ಥಾಪಿಸಬೇಕೆಂದು ಒತ್ತಾಯಿಸಿ ಕೇಂದ್ರ ರೈಲ್ವೇ ಸಚಿವ ಅಶ್ವಿನ್ ವೈಷ್ಣವ್ ಅವರಿಗೆ ಮನವಿ ಸಲ್ಲಿಸಿ ಕಾಸರಗೋಡು ಸಂಸದ ರಾಜಮೋಹನ್ ಉಣ್ಣಿತ್ತಾನ್ ಸಚಿವರೊಡನೆ ದೆಹಲಿಯಲ್ಲಿ ಚಿಂತನೆ ನಡೆಸಿದರು.
ಕಾಸರಗೋಡು ಮೂಲಕ ಹೆಚ್ಚುವರಿ ರೈಲು, ದೈನಂದಿನ ಲೋಕಲ್ ರೈಲು ಮುಂತಾದ ಬೇಡಿಕೆಗಳ ಕುರಿತು ಈ ಹಿಂದೆಯೇ ಮನವಿ ಸಲ್ಲಿಸಿದ್ದು, ಇದಕ್ಕೆ ಸೇರ್ಪಡೆಯಾಗಿ ಕೊರೋನೋತ್ತರದಲ್ಲಿ ಆರಂಭಿಸಿದ ರೈಲಿಗೂ ಪ್ರಮುಖ ತಾಣದಲ್ಲಿ ನಿಲುಗಡೆ ನೀಡಬೇಕೆಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ಸಂಸದರ ಪ್ರಕಟಣೆ ತಿಳಿಸಿದೆ.

ತನಗೆ ಕಳೆದ ಲೋಕಸಭಾ ಚುನಾವಣಾ ಸಂದರ್ಭ ಮತ್ತು ಆ ಬಳಿಕ ಜನರಿಂದ, ಜನಪ್ರತಿನಿಧಿಗಳಿಂದ ಸಿಕ್ಕಿದ ಮನವಿ, ಬೇಡಿಕೆಗಳನ್ನು ಕ್ಕರೋಢೀಕರಿಸಿ ಈ ಮನವಿ ಮೂಲಕ ಕೇಂದ್ರ ಸಚಿವರ ಗಮನಕ್ಕೆ ತರಲಾಯಿತೆಂದು ಸಂಸದ ರಾಜಮೋಹನ್ ಉಣ್ಣಿತ್ತಾನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜನರ ಬೇಡಿಕೆ ಪರಿಹರಿಸಲು ಸಮಾಲೋಚಿಸುವುದಾಗಿಯೂ, ಕೋರೋನಾ ಪೂರ್ವದಲ್ಲಿ ಸ್ಥಗಿತವಾದ ರೈಲು, ಸ್ಟಾಪ್ ಕುರಿತು ಸಂಬಂಧ ಪಟ್ಟವರ ಜತೆ ಚರ್ಚಿಸುವುದಾಗಿ ಸಚಿವರು ತಿಳಿಸಿದ್ದಾರೆಂದೂ ಸಂಸದರ ಪ್ರಕಟಣೆ ತಿಳಿಸಿದೆ.











