145
ಕಾಸರಗೋಡು ಜಿಲ್ಲಾಧಿಕಾರಿ ಕಚೇರಿಯಲ್ಲಿ ಸುದೀರ್ಘ ಕಾಲ ದಫೇದಾರ್ ಆಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ಕೂಡ್ಳು ಕಾಳ್ಯಂಗಾಡು ನಿವಾಸಿ ಪ್ರವೀಣ್ ರಾಜ್(60)ಆತ್ಮಹತ್ಯೆಗೈದರು. ಇಂದು ಬೆಳಿಗ್ಗೆ ಮನೆಯೊಳಗೆ ನೇಣು ಬಿಗಿದು ಆತ್ಮಹತ್ಯೆಗೈದ ಸ್ಥತಿಯಲ್ಲಿ ಅವರ ಮೃತದೇಹ ಪತ್ತೆಯಾಗಿದೆ.
ಮಂಗಳವಾರ ಬೆಳಿಗ್ಗೆ ಪತ್ನಿ ಮನೆಯ ಹೊರಗಡೆ ಬಟ್ಟೆ ಒಗೆಯುತ್ತಿದ್ದಾಗ ಮನೆಯೊಳಗಿನ ಕೋಣೆಯಲ್ಲವರು ನೇಣಿಗೆ ಶರಣಾದರೆಂದು ಹೇಳಲಾಗಿದೆ. ಮೃತದೇಹ ಕಾಸರಗೋಡು ಸರಕಾರಿ ಆಸ್ಪತ್ರೆಗೆ ಕೊಂಡೊಯ್ದು ಪಂಚನಾಮೆ ನಡೆಸಲಾಯಿತು.
ಮೃತರು ದಿ.ಸಂಜೀವ ಶೆಟ್ಟಿ-ಸುನಂದಾ ದಂಪತಿಯರ ಪುತ್ರನಾಗಿದ್ದು ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ.