ಸಚ್ಚಾರಿತ್ರ್ಯವಂತ ಮತ್ತು ಸರಳ ಸಜ್ಜನ ರಾಜಕಾರಣಿಯಾಗಿ ಜಿಲ್ಲೆಯ ಕಾಂಗ್ರೆಸ್ ಕಾರ್ಯಕರ್ತರಿಗೆ ಆದರ್ಶವಾಗಿದ್ದ ಐ.ರಾಮ ರೈ ಇಂದಿನ ಕಾರ್ಯಕರ್ತರ ಪಾಲಿಗೆ ಸಾಮಾಜಿಕ, ರಾಜಕೀಯಕ್ಕೆ ಮಾದರಿ. ಅವರ ಪಥ ಅನುಸರಿಸಿ ಜನಾಂಗಿಕ ಬೆಂಬಲದಿಂದ,ನಾವು ಪಕ್ಷ ಕಟ್ಟಬೇಕೆಂದು ಬದಿಯಡ್ಕ ಮಂಡಲ ಕಾಂಗ್ರೆಸ್ ಅಧ್ಯಕ್ಷ ಶ್ಯಾಮಪ್ರಸಾದ ಮಾನ್ಯ ಅಭಿಪ್ರಾಯಪಟ್ಟರು.
ಬದಿಯಡ್ಕದಲ್ಲಿ ನಡೆದ ಐ.ರಾಮ ರೈ 14ನೇ ಸ್ಮೃತಿ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಬದಿಯಡ್ಕ ಮಂಡಲ ಕಾಂಗ್ರೆಸ್ ಸಮಿತಿಯ ಆಶ್ರಯದಲ್ಲಿ ಮಾಜಿ ಲೋಕಸಭಾ ಸದಸ್ಯ, ಕಾಂಗೈ ಧುರೀಣ ದಿ. ಐ ರಾಮರೈ ಅವರ 14 ನೇ ಚರಮಾವರ್ಷಿಕ ಮಂಡಲ ಸಮಿತಿಯ ಆಶ್ರಯ ದಲ್ಲಿ badiadka ಮಂಡಲ ಆಫೀಸ್ ನಲ್ಲಿ ನಡೆಯಿತು.
ಹಿರಿಯ ಕಾಂಗ್ರೆಸ್ ನೇತಾರ ಪಿ. ಜಿ ಚಂದ್ರಹಾಸ ರೈ ರಾಮ ರ ರೈಯವರ ಭಾವಚಿರಕ್ಕೆ ಪುಷ್ಪಾರ್ಚನೆ ನಡೆಸಿದರು. ನೇತಾರ ರಾದ ನಾರಾಯಣ ಮನಿಯಾಣಿ ನೀರ್ಚಲು ಜಗನಾಥ ರೈ ಪೆರಡಾಲ ಗುತ್ತು. ತಿರುಪತಿ ಭಟ್, ಖಾದರ್ ಮಾನ್ಯ.. ಕುಮಾರ್ ಭಟ್ ಸೂಪಿ, .ಲೋಹಿ ಕುಟ್ಟಿ ಮೂಲೆ. ಶಾಫಿ ಗೊಳಿಡ್ಕ. ವಾಮನ ಚುಕ್ಕಿನಡ್ಕ. ರಾಮಗೋಳಿಯಡ್ಕ. ಶತೀಶ್ ಜೊನಿ. ಬಲತೀಶ್ ದರ್ಬೆತಡ್ಕ. ಮೊದಲದವರು ಉಪಸ್ಥಿತರಿದ್ದರು