ಸಂತರು ಮಠಕ್ಕಂಟಿ ಕೂರದೇ ಸಮಾಜಕ್ಕಿಳಿಯದಿದ್ದರೆ ಸನಾತನ ಪರಂಪರೆಗೆ ರಕ್ಷಣೆ ಇಲ್ಲ…!!

by Narayan Chambaltimar
  • ಸಂದರ್ಶನ ಲೇಖನ: ಎಂ.ನಾ. ಚಂಬಲ್ತಿಮಾರ್

ದೇಶದ ವೈವಿಧ್ಯಮಯ ಆಚಾರನುಷ್ಠಾನಗಳನ್ನು ಅನುಸರಿಸುವ ಹಿಂದೂ ಸಂತ ಶ್ರೇಷ್ಠರ ಒಕ್ಕೂಟವೇ ಅಖಿಲಭಾರತ ಸಂತ ಸಮಿತಿ. ಕಾಶಿ ಶಂಕರಾಚಾರ್ಯ ಪೀಠವಾದ ಜ್ಯೋತಿರ್ಮಠ ದ ವಾಸುದೇವಾನಂದ ಸರಸ್ವತಿ ಸ್ವಾಮೀಜಿಗಳ ಮೂಲಕ 1988ರಲ್ಲಿ ಸ್ಥಾಪಿತವಾದ ಅಖಿಲ ಭಾರತೀಯ ಸಂತರ ಸಮಿತಿ ಈಗ ಕಾಲಡಿಯಿಂದ ಕಾಶ್ಮೀರದ ತನಕ ದೇಶವ್ಯಾಪಿಯಾಗಿ ಚತುರ್ಧಾಮದಂತೆ ಚತುರ್ಬಾಹು ಚಾಚಿ ವಿಸ್ತರಿಸಿದೆ. ದೇಶದ ವೈವಿಧ್ಯ ಅನುಷ್ಠಾನ ಪರಂಪರೆಯ ಯತಿಶ್ರೇಷ್ಠರನ್ನು ಒಂದೇ ಸಂಘಟನೆಯೆಂಬ ಬೋಧಿವೃಕ್ಷದ ನೆರಳಲ್ಲಿ ತರುತ್ತಿರುವುದೇ ಸಂತಸಮಿತಿಯ ಸಾಧನೆ.
ಈ ಹಿನ್ನೆಲೆಯಲ್ಲಿ
ಇತ್ತೀಚಗಷ್ಟೇ ದ.ಭಾರತಕ್ಕೆ ಕಾಲೂರಿದ ಅಖಿಲ ಭಾರತ ಸಂತ ಸಮಿತಿಯ ಕರ್ನಾಟಕ ಪ್ರಾಂತ್ಯ ಅಧ್ಯಕ್ಷರಾದ ಮಹಾಮಂಡಲೇಶ್ವರ ಸ್ವಾಮಿ ಓಂ ಶ್ರೀ ವಿದ್ಯಾನಂದ ಸರಸ್ವತಿ ಸ್ವಾಮೀಜಿ “ಕಣಿಪುರ ಡಿಜಿಟಲ್ ಮೀಡಿಯ” ಕ್ಕೆ ನೀಡಿದ ಸಂದರ್ಶನದ ಮಾತುಕತೆಯ ಆಯ್ದ ಭಾಗಗಳು ಇಲ್ಲಿವೆ….

🟣 ಸನಾತನ ಧರ್ಮ ಪರಿಪಾಲನೆಯೇ ರಾಷ್ಟ್ರಕ್ಕೂ, ಧರ್ಮಕ್ಕೂ ರಕ್ಷೆ

ಸಂತರೆಂದರೆ ಮಠದಲ್ಲಿ ಕುಳಿತು ಆಚಾರನುಷ್ಠಾನ ಮಾಡಿದರಷ್ಟೇ ಸಾಲದು. ಅವರು ಸಮಾಜಕ್ಕಿಳಿಯಬೇಕು, ಸಾಮಾಜಿಕರೊಂದಿಗೆ ಬೆರೆತು, ಬದುಕಿಗೆ ಭರವಸೆ ತುಂಬಿಸಿ ಸಮಾಜದ ವಿಘಟನೆ ತಡೆಯಬೇಕು. ಸಾಮಾಜಿಕರನ್ನು ಮನಶುದ್ಧಿ, ಚಿಂತನಾಶುದ್ಧಿ, ಜ್ಞಾನಶುದ್ಧಿ, ಕರ್ಮಶುದ್ಧಿಗೆ ಅಣಿಗೊಳಿಸಬೇಕು. ಈ ಮೂಲಕ ಸನಾತನ ಧರ್ಮಕ್ಕೆ ಸಂರಕ್ಷಣೆಯ ಕೊಡೆ ಹಿಡಿಯುವ ಪೀಳಿಗೆ ರೂಪಿಸಬೇಕು. ಸನಾತನ ಧರ್ಮಾನುಷ್ಠಾನಗಳನ್ನು ಪರಿಪಾಲಿಸುವ ಸಮಾಜ ನಮ್ಮದಾಗಬೇಕು. ಅದೇ ನಮ್ಮ ರಾಷ್ಟ್ರಕ್ಕೂ, ಧರ್ಮಕ್ಕೂ ರಕ್ಷೆ ಎಂದರು ಓಂಶ್ರೀ ವಿದ್ಯಾನಂದ ಸರಸ್ವತಿ ಸ್ವಾಮೀಜಿ. ಇದುವೇ ಸಂತ ಸಮಿತಿಯ ಧ್ಯೇಯ. ನಮ್ಮ ಆಶಯವೇ ಧರ್ಮರಕ್ಷಾ, ರಾಷ್ಟ್ರರಕ್ಷಾ ಮತ್ತು ಗೋರಕ್ಷಾ ಎಂಬ ಸಂಕಲ್ಪವನ್ನು ಹೊಂದಿದೆ. ಹಾಗೆಂದು ಯಾವುದೇ ರಾಜಕೀಯ ಹಿನ್ನೆಲೆಯೂ, ಬೆಂಬಲದ ಪೋಷಣೆಯೂ ಈ ಸಂಘಟನೆಗಿಲ್ಲ. ಅದನ್ನು ನಾವು ಬಯಸುವುದೂ ಇಲ್ಲ ಎಂದವರು ಹೇಳಿದರು.

ಸನಾತನ ಧರ್ಮ ಕ್ಷಯವಾದರೆ ಪ್ರಜಾಪ್ರಭುತ್ವಕ್ಕೆ ಅಪಾಯ..!

ಭಾರತವೆಂಬ ಪರಿಕಲ್ಪನೆಯೇ ಪ್ರಾಚೀನವಾದದ್ದು. ಇದು ಸನಾತನ ಧರ್ಮಾನುಷ್ಠಾನಗಳಿಂದ ರೂಪಿತವಾದದ್ದು. ಸ್ವಾತಂತ್ರ್ಯಾನಂತರದ ಪ್ರಜಾಪ್ರಭುತ್ವ ವ್ಯವಸ್ಥೆ, ಸಂವಿಧಾನ ರೂಪುಗೊಂಡದ್ದೇ ಸನಾತನ ಧರ್ಮಾಶಯಗಳ ಸಂಕಲ್ಪದಿಂದ. ಹೀಗಾಗಿ ಪ್ರಜಾಪ್ರಭುತ್ವದ ಆಶಯಗಳೇ ಸನಾತನ ಧರ್ಮದ ಕೊಡುಗೆ. ಸನಾತನ ಧರ್ಮ ಕ್ಷಯವಾದರೆ ನಮ್ಮ ಪ್ರಜಾಪ್ರಭುತ್ವ ಆಶಯಕ್ಕೂ ಒಡಕುಂಟಾಗಲಿದೆ. ಆದ್ದರಿಂದ ಸನಾತನ ಧರ್ಮ ಪರಿಪಾಲನೆಯ ಅನುಷ್ಠಾನಗಳ ಕಡೆಗೆ ಸಮಾಜವನ್ನು ಜಾಗೃತಿಗೊಳಿಸುವ ಅನಿವಾರ್ಯತೆ ಇದೆ. ಈ ದೃಷ್ಟಿಯಲ್ಲಿ ಸ್ವಾಮೀಜಿಗಳೇ ಸಮಾಜಕ್ಕಿಳಿದು ಗ್ರಾಮ,ಗ್ರಾಮಗಳನ್ನು ಸುತ್ತಿ ಜನಮನವನ್ನು ಜಾಗೃತಗೊಳಿಸಬೇಕು ಎನ್ನುತ್ತಾರೆ ಓಂಶ್ರೀ ವಿದ್ಯಾನಂದ ಸರಸ್ವತಿ ಸ್ವಾಮೀಜಿ.
ಈ ಪ್ರಕ್ರಿಯೆ ಸುಲಬದ್ದೇನಲ್ಲ. ಆದರೆ ಅನಿವಾರ್ಯ. ಸಂತರು ಬೇರೆ, ಸಮಾಜ ಬೇರೆಯೇನಲ್ಲ. ಸಮಾಜ ರೂಪಿಸುವಲ್ಲಿ, ಸಂಸ್ಕೃತಿ ಮೂಡಿಸುವಲ್ಲಿ ಯತಿಗಳಿಗೂ ಪಾಲುದಾರಿಕೆ ಇದೆ. ಈ ಹಿನ್ನೆಲೆಯಲ್ಲಿ ಅಖಿಲ ಭಾರತ ಸಂತ ಸಮಿತಿ ದೇಶದಾದ್ಯಂತ ಎಲ್ಲಾ ಜಿಲ್ಲೆಗಳಲ್ಲೂ ಘಟಕ ರೂಪಿಸಿಕೊಂಡಿದೆ. ಚಟುವಟಿಕೆಗಳು ಆರಂಭಗೊಳ್ಳಲಿದೆ ಎಂದವರು ಹೇಳಿದರು.

ಮಂಗಳೂರಿನ ಓಂಶ್ರೀ ಮಠದ ಮೊಕ್ಕಾಂನಲ್ಲಿ ಲೇಖಕರನ್ನು ಅಖಿಲ ಭಾರತ ಸಂತ ಸಮಿತಿ ಕರ್ನಾಟಕ ರಾಜ್ಯಾಧ್ಯಕ್ಷರಾದ ಓಂಶ್ರೀ ವಿದ್ಯಾನಂದ ಸರಸ್ವತಿ, ಉಪಾಧ್ಯಕ್ಷೆ ಓಂಶ್ರೀ ಶಿವಜ್ಞಾನಮಯಿ ಸರಸ್ವತಿ ಸಂಯುಕ್ತವಾಗಿ ಗೌರವಿಸಿದರು.

🔴 ಹಿಂದೂ ಧರ್ಮಕ್ಕೆ ಪ್ರಸ್ತುತ ಸವಾಲೆದುರಾಗಿದೆ..

ಭಾರತವೆಂಬ ಪರಿಕಲ್ಪನೆಯೇ ಪ್ರಾಚೀನವಾದದ್ದು. ಇದು ಸನಾತನ ಧರ್ಮಾನುಷ್ಠಾನಗಳಿಂದ ರೂಪಿತವಾದದ್ದು. ಸ್ವಾತಂತ್ರ್ಯಾನಂತರದ ಪ್ರಜಾಪ್ರಭುತ್ವ ವ್ಯವಸ್ಥೆ, ಸಂವಿಧಾನ ರೂಪುಗೊಂಡದ್ದೇ ಸನಾತನ ಧರ್ಮಾಶಯಗಳ ಸಂಕಲ್ಪದಿಂದ. ಹೀಗಾಗಿ ಪ್ರಜಾಪ್ರಭುತ್ವದ ಆಶಯಗಳೇ ಸನಾತನ ಧರ್ಮದ ಕೊಡುಗೆ. ಸನಾತನ ಧರ್ಮ ಕ್ಷಯವಾದರೆ ನಮ್ಮ ಪ್ರಜಾಪ್ರಭುತ್ವ ಆಶಯಕ್ಕೂ ಒಡಕುಂಟಾಗಲಿದೆ. ಆದ್ದರಿಂದ ಸನಾತನ ಧರ್ಮ ಪರಿಪಾಲನೆಯ ಅನುಷ್ಠಾನಗಳ ಕಡೆಗೆ ಸಮಾಜವನ್ನು ಜಾಗೃತಿಗೊಳಿಸುವ ಅನಿವಾರ್ಯತೆ ಇದೆ. ಈ ದೃಷ್ಟಿಯಲ್ಲಿ ಸ್ವಾಮೀಜಿಗಳೇ ಸಮಾಜಕ್ಕಿಳಿದು ಗ್ರಾಮ,ಗ್ರಾಮಗಳನ್ನು ಸುತ್ತಿ ಜನಮನವನ್ನು ಜಾಗೃತಗೊಳಿಸಬೇಕು ಎನ್ನುತ್ತಾರೆ ಓಂಶ್ರೀ ವಿದ್ಯಾನಂದ ಸರಸ್ವತಿ ಸ್ವಾಮೀಜಿ.
ಈ ಪ್ರಕ್ರಿಯೆ ಸುಲಬದ್ದೇನಲ್ಲ. ಆದರೆ ಅನಿವಾರ್ಯ. ಸಂತರು ಬೇರೆ, ಸಮಾಜ ಬೇರೆಯೇನಲ್ಲ. ಸಮಾಜ ರೂಪಿಸುವಲ್ಲಿ, ಸಂಸ್ಕೃತಿ ಮೂಡಿಸುವಲ್ಲಿ ಯತಿಗಳಿಗೂ ಪಾಲುದಾರಿಕೆ ಇದೆ. ಈ ಹಿನ್ನೆಲೆಯಲ್ಲಿ ಅಖಿಲ ಭಾರತ ಸಂತ ಸಮಿತಿ ದೇಶದಾದ್ಯಂತ ಎಲ್ಲಾ ಜಿಲ್ಲೆಗಳಲ್ಲೂ ಘಟಕ ರೂಪಿಸಿಕೊಂಡಿದೆ. ಚಟುವಟಿಕೆಗಳು ಆರಂಭಗೊಳ್ಳಲಿದೆ ಎಂದವರು ಹೇಳಿದರು.

ಜಗತ್ತಿನ ಪ್ರತಿಯೊಂದು ದೇಶದಲ್ಲೂ ಆದೇಶದ ಚರಿತ್ರೆ, ಸಂಸ್ಕೃತಿಗಳನ್ನು ಕಲಿಸುವ ಶಿಕ್ಷಣ ವ್ಯವಸ್ಥೆ ಇದೆ. ಭಾರತದಲ್ಲಿ ಮಾತ್ರ ಪ್ರಜಾಪ್ರಭುತ್ವದ ಹೆಸರಲ್ಲಿ ಅದ್ಯಾವುದೂ ಇಲ್ಲ. ಇದು ದೇಶದ ಮೊದಲ ಸರಕಾರ ಮಾಡಿದ ವಂಚನೆ. ನಮ್ಮ ದೇಶಕ್ಕೆ ನಮ್ಮ ಪ್ರಾಚೀನ ಚರಿತ್ರೆ, ಸಂಸ್ಕೃತಿ ಕಲಿಸುವ ಶಿಕ್ಷಣ ಪದ್ಧತಿ ಬೇಕು. ಈ ನಿಟ್ಟಿನಲ್ಲಿ ಮಠ,ಮಂದಿರ, ಗ್ರಾಮದ ಗುಡಿಗೋಪುರಗಳಲ್ಲಿ ನಮ್ಮ ಜನತೆಗೆ ರಾಷ್ಟ್ರೀಯ ಪ್ರಜ್ಞೆ ಮೂಡಿಸುವ ಶಿಕ್ಷಣ ಸಿಗಬೇಕು. ಇಂಥ ಪ್ರಕ್ರಿಯೆಯ ಮೂಲಕವೇ ಸನಾತನತೆಯ ಸಂರಕ್ಷಣೆ ಸಾಧ್ಯ ಎಂದರವರು.
ಈ ಹಿನ್ನೆಲೆಯಲ್ಲಿ ಅಖಿಲ ಭಾರತ ಸಂತ ಸಮಿತಿ ಜಿಲ್ಲಾ, ತಾಲೂಕು, ಗ್ರಾಮ ಮಟ್ಟದಲ್ಲಿ ಕರ್ತವ್ಯ ನಿರತವಾಗಲಿದೆ. ಗ್ರಾಮಕ್ಕೊಬ್ಬರು ಸಂತರನ್ನು ನೇಮಿಸಿ ಆ ಗ್ರಾಮದ ಹಿಂದೂಗಳ ಬವಣೆ ಪರಿಹರಿಸಿ, ಧರ್ಮಜ್ಞಾನ ಮೂಡಿಸಿ ಸಮಾಜ ಕಟ್ಟುವುದೇ ಇದರ ಉದ್ದೇಶ. ಇದು ಸ್ವಲ್ಪ ಕಾಲವಿಳಂಬವಾದರೂ ಸಂತ ಸಮಿತಿ ಉದ್ದೇಶಿಸಿದ ಚಟುವಟಿಕೆ ಎಂದು ಶ್ರೀಗಳವರು ಹೇಳಿದರು.

🅾️ ಒಂದು ಗ್ರಾಮಕ್ಕೊಬ್ಬರು ಸಂತರು..!

You may also like

Are you sure want to unlock this post?
Unlock left : 0
Are you sure want to cancel subscription?
-
00:00
00:00
Update Required Flash plugin
-
00:00
00:00