ಸೂರ್ಯ ಮುಳುಗದ ಸಾಮ್ರಾಜ್ಯವೆಂದೇ ಕೊಂಡಾಡಲ್ಪಡುವ ಲಂಡನ್ ನ ಚಾರ್ಲ್ಸ್ ದೊರೆಯ ಅಸಿಸ್ಟೆಂಟ್ ಸೆಕ್ರೆಟರಿ ಕಾಸರಗೋಡಿನ ವನಿತೆ!
ಎಲ್ಲಿಯ ಲಂಡನ್..ಎಲ್ಲಿಯ ಕಾಸರಗೋಡು?!
ಆದರೆ ಯೋಗ್ಯತೆ, ಅರ್ಹತೆ ಮತ್ತು ವಿಧಿಸಲ್ಪಟ್ಟಿದ್ದರೆ ಯಾರೂ ಉನ್ನತ ಪದವಿಗೇರುತ್ತಾರೆಂಬುದು ನಿಸ್ಸಂದೇಹ.
ಪ್ರಸ್ತುತ ಲಂಡನ್ ನಲ್ಲಿ ಚಾರ್ಲ್ಸ್ ದೊರೆಯ ಅಸಿಸ್ಟೆಂಟ್ ಪ್ರೈವೇಟ್ ಸೆಕ್ರೇಟರಿ ಆಗಿರುವವರು ಕಾಸರಗೋಡಿನ ಮುನ ಷಂಸುದ್ದೀನ್.
ತಳಂಗರೆ ತೆರುವತ್ ಹಾಷಿಂ ಸ್ಟ್ರೀಟಿನ ದಿ.ಪುದಿಯಪುರ ಷಂಸುದ್ದೀನ್ , ಸೈದುನ್ನೀಸಾ ದಂಪತಿಯ ಪುತ್ರಿಯಾದ ಮುನ ಲಂಡನ್ ನಲ್ಲಿ ಓದಿದವರು. ಬ್ರಿಟೀಷ್ ಕಾನೂನು ಸಲಹಾಲಯದಲ್ಲಿ ಉದ್ಯೋಗ ಆರಂಭಿಸಿ ಲಂಡನ್ ವಿದೇಶಾಂಗ ಕಾಮನ್ವೆಲ್ತ್ ಡೆವಲಪ್ಮೆಂಟ್ ವಿಭಾಗದಲ್ಲಿ ಉದ್ಯೋಗದಲ್ಲಿದ್ದಾಗ ದೊರೆಯ ಪ್ರಧಾನ ಅಸಿಸ್ಟೆಂಟ್ ಸೆಕ್ರೆಟರಿಯಾಗುವ ಅವಕಾಶ ಇವರಿಗೊಲಿದಿದೆ.
ಬ್ರಿಟನ್ ನಾಟಿಂಗಾಂ ವಿ.ವಿಯಿಂದ ಮೇಥಮೆಟಿಕ್ಸ್ ಇಂಜಿನೀಯರಿಂಗ್ ನಲ್ಲಿ ಪಧವೀಧರೆಯಾದ ಬಳಿಕ ಇವರು ಬ್ರಿಟೀಷ್ ವಿದೇಶಾಂಗ ಸೇವೆಗೆ ಸೇರಿದ್ದರು. ಜೆರುಸಲೇಂನಲ್ಲಿ ಬ್ರಿಟನ್ ಕನ್ಸಲ್ಟೇಟಿವ್ ಜನರಲ್, ಪಾಕಿಸ್ತಾನದ ಕರಾಚಿಯಲ್ಲಿ ಬ್ರಿಟನ್ ವಿದೇಶಾಂಗದ ಮುಖ್ಯಸ್ಥೆಯಾಗಿಯೂ ದುಡಿದಿರುವ ಇವರು ಪ್ರಸ್ತುತ ಬ್ರಿಟನ್ ದೊರೆಯ ಕಾರ್ಯಕ್ರಮಗಳನ್ನೆಲ್ಲಾ ನಿರ್ಮಯಿಸುವ ಪ್ರಧಾನ ವ್ಯಕ್ತಿ. ಇವರ ಪತಿ ಡೇವಿಡ್ ಯು.ಎನ್ ಉದ್ಯೋಗಿ.
ಕಾಸರಗೋಡಿನಲ್ಲಿ ಕುಟುಂಬ ಸಂಬಂಧಗಳ ಮೂಲ ಹೊಂದಿರುವ ಇವರು 10ವರ್ಷಗಳ ಹಿಂದೊಮ್ಮೆ ಕಾಸರಗೋಡಿಗೆ ಆಗಮಿಸಿದ್ದರು.