56
ಮುಸಲ್ಮಾನರ ಮತದಾನ ಹಕ್ಕನ್ನೇ ತೆಗೆಯಬೇಕೆಂಬ ವಿವಾದಿತ ಹೇಳಿಕೆ ನೀಡಿದ್ದ ವಿಶ್ವ ಒಕ್ಕಲಿಗ ಸಂಸ್ಥಾನ ಮಠದ ಚಂದ್ರಶೇಖರನಾಥ ಸ್ವಾಮೀಜಿ ವಿರುದ್ಧ ಬೆಂಗಳೂರಿನ ಉಪ್ಪಾರಪೇಟೆ ಠಾಣೆಯಲ್ಲಿ ಎಫ್.ಐ.ಆರ್ ದಾಖಲಾಗಿದೆ.
ಸ್ವಾಮೀಜಿಯವರು ತಮ್ಮ ಭಾಷಣದಲ್ಲಿ ಪ್ರಚೋದನಕಾರಿ ಮಾತನ್ನಾಡುತ್ತಾ “ಮುಸ್ಲಿಂ ಸಮುದಾಯದ ಮತದಾನದ ಹಕ್ಕು ರದ್ದುಪಡಿಸಲು ಕಾನೂನು ಜ್ಯಾರಿಯಾಗಬೇಕು”
ಎಂಬ ಹೇಳಿಕೆಯಿತ್ತಿದ್ದಾರೆಂದು ಆರೋಪಿಸಿ ಸೈಯ್ಯದ್ ಅಬ್ಬಾಸ್ ಎಂಬವರು ನೀಡಿದ ದೂರಿನಂತೆ ಬಿಎನ್ಎಸ್ 299ರ ಅಡಿ ಎಫ್ ಐ ಆರ್ ದಾಖಲಿಸಲಾಗಿದ್ದು, ತನಿಖೆ ಆರಂಭಗೊಂಡಿದೆ.
ನ.24ರಂದು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ನಡೆಧ ವಕ್ಖ್ಫ್ ಪ್ರತಿಭಟನಾ ಸಭೆಯಲ್ಲಿ ಮುಸ್ಲಿಂ ಸಮುದಾಯದ ಮತದಾನ ಹಕ್ಕು ಹಿಂತೆಗೆಯುವಂತೆ ಸ್ವಾಮೀಜಿ ಹೇಳಿಕೆ ನೀಡಿದ್ದರು.
ಇದು ವಿವಾದವಾದ ಬೆನ್ನಲ್ಲೇ ಸ್ವಾಮೀಜಿ ತನ್ನ ಹೇಳಿಕೆಯು ಪ್ರಮಾದವಾಗಿದೆಯೆಂದು ಕ್ಷಮೆಯಾಚಿಸಿದ್ದರು.