ಕಣಿಪುರ ಸುದ್ದಿಜಾಲ, ಬದಿಯಡ್ಕ
ಕಾಸರಗೋಡು ಜಿಲ್ಲೆಯ ಉದಿನೂರಿನಲ್ಲಿ ಜರಗುತ್ತಿರುವ ಜಿಲ್ಲಾ ಮಟ್ಟದ ಶಾಲಾ ಕಲೋತ್ಸವದಲ್ಲಿ ಫ್ರೌಢಶಾಲಾ ವಿಭಾಗದ ಹುಡುಗರ ಶಾಸ್ತ್ರೀಯ ಸಂಗೀತ ಮತ್ತು ಗಾನಾಲಾಪನ ದಲ್ಲಿ ಎ ಗ್ರೇಡಿನೊಂದಿಗೆ ಬದಿಯಡ್ಕ ನವಜೀವನ ಹೈಸ್ಕೂಲಿನ ವಿದ್ಯಾರ್ಥಿ ಪ್ರದ್ಯುಮ್ನ ಶರ್ಮಾಉಪ್ಪಂಗಳ ರಾಜ್ಯ ಮಟ್ಟದ ಸ್ಪರ್ಧೆಗೆ ಆಯ್ಕೆಗೊಂಡಿದ್ದಾನೆ. ಈ ಮೂಲಕ ಪ್ರದ್ಯುಮ್ನನ ಪ್ರತಿಭೆ ಬದಿಯಡ್ಕ ಪರಿಸರಕ್ಕೆ ಅಭಿಮಾನಕ್ಕೆ ಪಾತ್ರವಾಗಿದೆ.
ಬದಿಯಡ್ಕ ನವಜೀವನ ಹೈಸ್ಕೂಲಿನ 9ನೇ ತರಗತಿ ವಿದ್ಯಾರ್ಥಿಯಾದ ಪ್ರದ್ಯುಮ್ನ ಉಪ್ಪಂಗಳ ನಿವಾಸಿ, ಉದ್ಯಮಿ ರಂಗಶರ್ಮಾ ಉಪ್ಪಂಗಳ ಹಾಗೂ ಸ್ಮಿತಾ ದಂಪತಿಯರ ಪುತ್ರ. ಬದಿಯಡ್ಕದ ಸಂಗೀತ ಶಿಬದಿಯಡ್ಕ ನವಜೀವನ ಹೈಸ್ಕೂಲಿನ 9ನೇ ತರಗತಿ ವಿದ್ಯಾರ್ಥಿಯಾದ ಪ್ರದ್ಯುಮ್ನ ಉಪ್ಪಂಗಳ ನಿವಾಸಿ, ಉದ್ಯಮಿ ರಂಗಶರ್ಮಾ ಉಪ್ಪಂಗಳ ಹಾಗೂ ಸ್ಮಿತಾ ದಂಪತಿಯರ ಪುತ್ರ. ಬದಿಯಡ್ಕದ ಸಂಗೀತ ಶಿಕ್ಷಕಿ ವಾಣಿಪ್ರಸಾದ್ ಕಬೆಕ್ಕೋಡು ಅವರ ಶಿಷ್ಯನಾದ ಈತ ಬಹುಮುಖಿ ಪ್ರತಿಭೆ. ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಎಗ್ರೇಡ್ ಸಹಿತ ಎರಡು ವಿಷಯಗಳಲ್ಲಿ ಕೇರಳ ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಗಡಿನಾಡ ಕನ್ನಡದ ಕಂದನನ್ನು ಅಗಲ್ಪಾಡಿ ಪ್ರದೇಶವಾಸಿಗಳು ಅಭಿನಂಧಿಸಿ ಶುಭಕೋರಿದ್ದಾರೆ.ಕ್ಷಕಿ ವಾಣಿಪ್ರಸಾದ್ ಕಬೆಕ್ಕೋಡು ಅವರ ಶಿಷ್ಯನಾದ ಈತ ಬಹುಮುಖಿ ಪ್ರತಿಭೆ. ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಎಗ್ರೇಡ್ ಸಹಿತ ಎರಡು ವಿಷಯಗಳಲ್ಲಿ ಕೇರಳ ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಗಡಿನಾಡ ಕನ್ನಡದ ಕಂದನನ್ನು ಅಗಲ್ಪಾಡಿ ಪ್ರದೇಶವಾಸಿಗಳು ಅಭಿನಂಧಿಸಿ ಶುಭಕೋರಿದ್ದಾರೆ.