ದೇಶದ ಪ್ರತಿಷ್ಟಿತ ಹೃದಯ ಮಂದಿರವಾದ ಅಯೋಧ್ಯೆಯಲ್ಲಿ ಅರ್ಚಕರಿಗೆ ಸಮವಸ್ತ್ರ ಸಹಿತ ಶೌಚ ನಿರ್ಬಂಧಗಳನ್ನು ವಿಧಿಸಲಾಗಿದೆ.
ಕುಟುಂಬದಲ್ಲಿ ಜನನ/ಮರಣ, ಮತ್ತಿತ್ಯಾದಿಗಳಿಂದ ಅಶುದ್ಧರಾದರೆ ಅಂಥ ಪೂಜಾರಿ(ಅರ್ಚಕ)ಗಳಿಗೆ ಅಯೋಧ್ಯೆ ಶ್ರೀರಾಮ ಮಂದಿರದ ಪೂಜಾವಕಾಶಗಳಿಂದ ಅನರ್ಹತೆ ಘೋಷಿಸಲಾಗಿದೆ.
ಅಂಥವರು ನಿರ್ದಿಷ್ಟ ಅವಧಿ ತನಕ ಶ್ರೀರಾಮ ಮಂದಿರ ಪ್ರವೇಶಿಸಕೂಡದು ಎಂದು ಅಯೋಧ್ಯೆ ಶ್ರೀರಾಮ ಜನ್ಮಭೂಮಿ ಟ್ರಸ್ಟ್ ಮುಖ್ಯಸ್ಥರಾದ ಅನಿಲ್ ಮಿಶ್ರಾ ಪ್ರಕಟಿಸಿದ್ದಾರೆ.
ಅಯೋಧ್ಯೆಯ ಶ್ರೀರಾಮ ಮಂದಿರದ ಪೂಜಾ ಕೈಂಕರ್ಯಗಳಿಗೆ ಕಳೆದ ಆರು ತಿಂಗಳಿಂದ ನಿರ್ದಿಷ್ಟ ಅಭ್ಯರ್ಥಿಗಳಿಗೆ ತರಬೇತಿ ನೀಡಲಾಗಿದೆ. ಇದರಲ್ಲಿ ಅರ್ಹತೆ ಪಡೆದವರನ್ನಷ್ಟೇ ಪೂಜೆಗೆ ನೇಮಿಸಲು ನಿರ್ಧರಿಸಲಾಗಿದೆ. ಹೀಗೆನೇಮಕಗೊಳ್ಳುವವರು ನೂತನ ಮಾರ್ಗ ಸೂಚಿಯನ್ನು ಅನುಸರಿಸುವುದು ಕಡ್ಡಾಯ ಎಂದು ಧಾರ್ಮಿಕ ಸಮಿತಿ ಔದ್ಯೋಗಿಕವಾಗಿ ಪ್ರಕಟಿಸಿದೆ.
ಅಯೋಧ್ಯೆಯ ಪೂಜಾವಕಾಶ ಕೋರಿ ಅರ್ಜಿ ಸಲ್ಲಿಸಲ್ಪಟ್ಟವರಿಂದ ಒಟ್ಟು 20 ಮಂದಿಯನ್ನು ಆರಿಸಿ ಅವರಿಗೆ ಆರು ತಿಂಗಳ ಪೂಜಾ ವಿಧಾನದ ತರಬೇತಿ ನೀಡಲಾಗದೆ. ಈ ಪೈಕಿ 18ಮಂದಿ ಅಯೋಧ್ಯೆ ಆವರಣದ ನಿರ್ದಿಷ್ಟ ಜಾಗಗಳಲ್ಲಿ ನಿಯೋಜಿಸಲ್ಪಡಲಿದ್ದಾರೆ. ಹೀಗೆ ನೇಮಕಗೊಳ್ಳುವವರ ಮನೆಯಲ್ಲಿ ಜನನ, ಮರಣಗಳ ಅಶೌಚ ಬಂದರೆ ಅವರು ಆ ಸಮಯದಲ್ಲಿ ದೇವಾಲಯ ಪ್ರವೇಶಿಸುವಂತಿಲ್ಲ ಎಂದು ಪ್ರಕಟಿಸಲಾಗಿದೆ.
ಪೂಜಾ ಕೈಂಕರ್ಯ ನಡೆಸುವ ಅರ್ಚಕರು ಅಯೋಧ್ಯೆಯ ಪ್ರಾತಿನಿಧಾತ್ಮಕ ಸಮವಸ್ತ್ರ ಹಾಕುವುದು ಕಡ್ಡಾಯವಾಗಿದೆ.
ಕಚ್ಛೆ (ಅಚಾಲ). ಮೇಲಂಗಿ ( ಚೌಬಂದಿ), ಮತ್ತು ಪೇಟಾ ಧರಿಸಬೇಕೆಂಬುದು ನಿರ್ಬಂಧವಾಗಿದೆ. ಇದರ ಹೊರತಾಗಿ ಯಾರೊಬ್ಬರೂ ಅಂಡ್ರಾಯ್ಡ್ ಫೋನ್ ಬಳಸುವಂತಿಲ್ಲ. ತೀರಾ ಅಗತ್ಯವಾದಲ್ಲಿ ಕೀಪ್ಯಾಡ್ ಫೋನ್ ಬಳಸಲಷ್ಟೇ ಅವಕಾಶ ಇದೆ. ಹೀಗೆ ಕಟ್ಟುನಿಟ್ಟಿನ ನಿಯಮ ಮೊದಲ ಹಂತದಲ್ಲಿ ಅರ್ಚಕರಿಗೆ, ಸಿಬಂದಿಗಳಿಗೆ ಕಡ್ಡಾಯಗೊಳಿಸಿ ಎರಡನೇ ಸುತ್ತಲ್ಲಿ ಸಂದರ್ಶನ ನೀಡುವ ಭಕ್ತರಿಗೆ ಕಡ್ಡಾಯ ಆಗಲಿದೆ.